ಧರ್ಮದ ಅಂತರಾಳದಲ್ಲಿ ಸುಖವಿದೆ. ಚಾತುರ್ಮಾಸ್ಯದಿಂದ ಶರೀರ ಮತ್ತು ಮನೋಶುದ್ಧಿ ದೊರೆಯಲಿದೆ. ಜನರಿಗೆ ಧಾರ್ಮಿಕ ಪ್ರೇರಣೆ ನೀಡಿ, ಭಕ್ತಿಯ ಮಾರ್ಗದೆಡೆಗೆ ಸೆಳೆದು ಧರ್ಮದ ಅಂತರಾಳದ ಸಂತೋಷವ ಉಂಟುಮಾಡುವ ಪ್ರಮುಖ ಹೆಜ್ಜೆ ಚಾತುರ್ಮಾಸ್ಯ ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು.




ಗೋಳಿಹೊಳೆ ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ಚಾತುರ್ಮಾಸ್ಯ ವ್ರತಾಚರಣೆಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಧರ್ಮಸಭೆ ಉದ್ಘಾಟಿಸಿ, ಭಾರತೀಯ ಸಂಸ್ಕೃತಿಯಲ್ಲಿ ಗುರು ಪರಂಪರೆ ಶ್ರೇಷ್ಠತೆ ಪಡೆದಿದೆ. ಆರೋಗ್ಯಕರ ಸಮಾಜ ಮತ್ತು ಸಾಮರಸ್ಯದ ಬದುಕಿನಲ್ಲಿ ಚಾತುರ್ಮಾಸ್ಯ ಸಾತ್ವಿಕತೆಯ ಪ್ರಭಾವ ಬೀಳಲಿದೆ. ಅಜ್ಞಾನದಿಂದ ಜೀವನದ ಜ್ಞಾನ ದೃಷ್ಟಿಕೊಡುವವರೇ ಗುರು ಎಂದು ಕರೆಸಿಕೊಳ್ಳುತ್ತಾರೆ. ಜನರಿಗೆ ಜ್ಞಾನದ ಹನಿಯನ್ನು ಪಸರಿಸುವ ಕಾರ್ಯ ಈ ಚಾತುರ್ಮಾಸ್ಯದಲ್ಲಿ ನಡೆಯುತ್ತದೆ. ಸ್ವಾಮೀಜಿಯವರ ತತ್ವಾದರ್ಶಗಳ ಪಾಲನೆಯಿಂದ ಬೌದ್ಧಿಕ ಜಗತ್ತಿನ ಪರಿಚಯ ಸಾಧ್ಯವಾಗುತ್ತದೆ ಎಂದರು.
ಚಾತುರ್ಮಾಸ್ಯ ವ್ರತಾಚರಣೆ ಸಮಿತಿ ಗೌರವಾಧ್ಯಕ್ಷ ಕೆ. ಗೋಪಾಲ ಪೂಜಾರಿ, ಅಧ್ಯಕ್ಷ ಗುರುರಾಜ್ ಗಂಟಿಹೊಳೆ, ಮಾಜಿ ಸಚಿವರಾದ ಮಂಕಾಳ ಎಸ್.ವೈದ್ಯ, ಶಿವಾನಂದ ನಾಯ್ಕ್, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಯಶ್ಪಾಲ್ ಸುವರ್ಣ, ಡಾ.ವೈ.ಭರತ್ ಶೆಟ್ಟಿ, ಹರೀಶ್ ಪೂಂಜ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕರಾದ ಸುನೀಲ್ ನಾಯ್ಕ್ ಭಟ್ಕಳ್, ಸಂಜೀವ ಮಠಂದೂರು, ಪ್ರಮುಖರಾದ ಎಸ್.ರಾಜು ಪೂಜಾರಿ, ಉದ್ಯಮಿ ಗೋವಿಂದ ಬಾಬು ಪೂಜಾರಿ, ದಿನೇಶ ಅಮೀನ್ ಕುಂದಾಪುರ, ಉದ್ಯಮಿ ದಯಾನಂದ ಬಿ ಬೊಂಟ್ರ, ಸೂರಜ್ ನಾಯ್ಕ್ ಸೋನಿ, ಈಶ್ವರ್ ನಾಯ್ಕ ಮುರ್ಡೇಶ್ವರ, ಹರಿಕೃಷ್ಣ ಬಂಟ್ವಾಳ, ಎಚ್.ಆರ್.ನಾಯ್ಕ್, ಚಿತ್ತರಂಜನ್, ಗುರುರಾಜ್ ಪಂಜು ಪೂಜಾರಿ, ಗಂಗಾಧರ ಬೆಂಗಳೂರು, ತಮ್ಮೇಗೌಡ ಬೆಂಗಳೂರು, ವಿಕಾಸ ಪುತ್ತೂರು, ಕಿರಣ್ ಕುಮಾರ್ ಕೋಡಿಕಲ್, ಕೃಷ್ಣಪ್ರಸಾದ ಅಡ್ಯಂತಾಯ, ಅನಿತಾ ಮರವಂತೆ ಮತ್ತಿತರರು ಉಪಸ್ಥಿತರಿದ್ದರು.
ಕೇಶವ ಬಂಗೇರ ಸ್ವಾಗತಿಸಿದರು. ಪತ್ರಕರ್ತ ಕೆ.ಸಿ.ರಾಜೇಶ ಕುಂದಾಪುರ ಕಾರ್ಯಕ್ರಮ ನಿರೂಪಿಸಿದರು. ಪ್ರಣತ್ ಆರ್.ಗಾಣಿಗ ವಂದಿಸಿದರು.
