ಗೋ ಸಂರಕ್ಷಣೆ


ಗೋವುಗಳು ದೇಶದ ಸಂಪತ್ತು. ಹೈನುಗಾರರ ಆರ್ಥಿಕತೆಗೂ ಸಕಾರಣವಾಗಿರುವ ಗೋವುಗಳು ಕೃಷಿ ಆರ್ಥಿಕತೆಗೂ ಸಹಕಾರಿಯಾಗಿವೆ. ಇಂತಹ ಅಮೂಲ್ಯವಾದ ಗೋ ಸಂಪತ್ತಿನ ರಕ್ಷಣೆಗಾಗಿ ಹೈನುಗಾರಿಕೆ ಸಹಿತ ಹೈನುಗಾರಿಕಾ ಉದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗುವುದು. ಕ್ಷೇತ್ರದಲ್ಲಿರುವ ಗೋಶಾಲೆಗಳಿಗೆ ಅನುದಾನ ನೀಡಿ ಸ್ಥಳೀಯ ತಳಿ ಗೋವಿನ ರಕ್ಷಣೆಗೂ ಕಟಿಬದ್ಧತೆಯನ್ನು ತೋರಲಾಗಿದೆ.

ಕರಾವಳಿಯ ಗೋ ತಳಿಗಳ ಉಳಿವಿಗೆ ಅದರಲ್ಲೂ ಗಿಡ್ಡ ತಳಿಯ ಸಂರಕ್ಷಣೆಗಾಗಿ ಸರಕಾರಿ ಅನುದಾನದಲ್ಲಿ ಸುಸಜ್ಜಿತ ಗೋಶಾಲೆಯ ನಿರ್ಮಾಣಕ್ಕೆ ಚಿಂತನೆ ನಡೆಸಲಾಗುತ್ತಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳ ತಯಾರಿ ಮಾರುಕಟ್ಟೆಗೂ ಉತ್ತೇಜನ ನೀಡಲಾಗುವುದು.