ಮುಂಗಾರು ಆಧಾರಿತ ಕರಾವಳಿ ಜಿಲ್ಲೆಗಳಲ್ಲಿ 2023 ಸಾಲಿನಲ್ಲಿ ಮಳೆ ಪ್ರಮಾಣ ಕುಂಠಿತವಾಗಿದ್ದು ನೀರಿನ ಬಳಕೆಯ ಬಗ್ಗೆ ಅರಿವು ಮೂಡಿಸುವುದರ ಜೊತೆಯಲ್ಲಿ ಪುರಾತನ ಕೆರೆ ಕಟ್ಟೆಗಳ ಪುನರ್ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ. ಈ ಹಿಂದಿನ ಬಿಜೆಪಿ ಸರಕಾರದ ಕಾಲಾವಧಿಯಲ್ಲಿ ದೇಶದಲ್ಲಿಯೇ ಅತಿ ಹೆಚ್ಚಿನ ಕೆರೆಗಳ ಅಭಿವೃದ್ಧಿಯನ್ನು ರಾಜ್ಯ ಕಂಡಿದೆ. ಈ ಹಿನ್ನೆಲೆಯಲ್ಲಿ ಸರಕಾರದ ಮಾದರಿ ಕಾರ್ಯಗಳನ್ನು ಗಮನದಲ್ಲಿರಿಸಿ ಬೈಂದೂರು ಕ್ಷೇತ್ರದ ಪರಿಧಿಯಲ್ಲಿ ಬರುವಂತಹ ಕೆರೆ ಸರೋವರಗಳ ಹೂಳೆತ್ತಿ, ಸಂರಕ್ಷಣೆ ಮಾಡುವ ಕಾರ್ಯಕ್ಕೂ ಹೆಚ್ಚಿನ ಆದ್ಯತೆ ನೀಡಲಾಗುವುದು. ಕೃಷಿ ಕಾರ್ಯ, ನೀರಾವರಿ ಸಹಿತ ಜನರ ಕುಡಿನೀರು ಬವಣೆಯನ್ನು ಹೋಗಲಾಡಿಸಲು ಇರುವ ಅಗತ್ಯ ಮಾರ್ಗೋಪಾಯಗಳನ್ನು ಕ್ಷೇತ್ರದಲ್ಲಿ ಈಗಾಗಲೇ ಆರಂಭಿಸಲಾಗಿದೆ.
ತಜ್ಞರ ನಿರ್ದೇಶನ ಮತ್ತು ಮಾರ್ಗದರ್ಶನದ ಮೂಲಕ ಅಂತರ್ಜಲ ಮರುಪೂರಣಕ್ಕೂ ಅಗತ್ಯ ಕ್ರಮಗಳನ್ನು ಜರುಗಿಸಲು ಕ್ರಮ ಕೈಗೊಳ್ಳಲಾಗುವುದು. ಖಾಸಗಿ ಮತ್ತು ಸರಕಾರಿ ಸಂಘ ಸಂಸ್ಥೆ ಪರಿಸರದಲ್ಲಿರುವ ಎಲ್ಲಾ ಬೋರ್ ವೆಲ್ ಮತ್ತು ಬಾವಿಗಳಿಗೆ ಮಳೆಗಾಲದ ಸಮಯದಲ್ಲಿ ನೀರಿನ ಜಲ ಮರುಪೂರಣಕ್ಕೆ ಅಗತ್ಯವಾದ ನೆರವು ಮತ್ತು ಸಹಕಾರವನ್ನು ನೀಡಲಾಗುವುದು. ಈ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಿ ಇದರ ಮಹತ್ವವನ್ನು ತಿಳಿಸಲಾಗಲಿದೆ.