News & Events
ಗಂಗೊಳ್ಳಿ ಬಂದರು ಕಾಮಗಾರಿ ಶೀಘ್ರ ಆರಂಭಕ್ಕೆ ಶಾಸಕ ಗುರುರಾಜ್ ಗಂಟಿಹೊಳೆ ಒತ್ತಾಯ
ಬೈಂದೂರು: ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ( ಪಿಎಂಎಂವೈ ) ಯಡಿ ಸಂಸದರಾದ ಬಿ ವೈ ರಾಘವೇಂದ್ರ ರವರ ಶಿಫಾರಸ್ಸಿನ ಮೇರೆಗೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಮೂಲ ಸೌಕರ್ಯ ಅಭಿವೃದ್ಧಿಗೆ 22.18 ಕೋ. ರೂ. ಮೊತ್ತಕ್ಕೆ ಕೇಂದ್ರ ಸರಕಾರ ಈಗಾಗಲೇ ಅನುಮೋದನೆ ನೀಡಿದ್ದು. ಶೇ 60:40 ಅನುಪಾತದಲ್ಲಿ ಈ ಯೋಜನೆ ಅನುಷ್ಠಾನ ಗೊಳ್ಳಲಿದ್ದು ರಾಜ್ಯದ ಪಾಲಿನ ಅನುದಾನ ಬಿಡುಗಡೆ ಬಾಕಿ ಇರುವುದರಿಂದ ಈ ಕೂಡಲೇ ಸದರಿ ಮೊತ್ತವನ್ನು
ಭತ್ತದ ಕೃಷಿ ಉತ್ತೇಜನಕ್ಕೆ ಸಮಗ್ರ ಅಧ್ಯಯನ ನಡೆಸಲು ಶಾಸಕ ಗುರುರಾಜ್ ಗಂಟಿಹೊಳೆ ಆಗ್ರಹ
ಸೂಕ್ತ ಕ್ರಮದ ಭರವಸೆ ನೀಡಿದ ಸಚಿವ ಚಲುವರಾಯ ಸ್ವಾಮಿ ಬೈಂದೂರು: ಉಡುಪಿ ಜಿಲ್ಲೆಯಲ್ಲಿ ಭತ್ತದ ಕೃಷಿ ವಿಸ್ತೀರ್ಣದಲ್ಲಾಗುತ್ತಿರುವ ಗಣನೀಯ ಇಳಿಕೆ, ಕೃಷಿ ಯೋಗ್ಯ ಹಡಿಲು ಭೂಮಿಯ ಹೆಚ್ಚಳ ಹಾಗೂ ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟಾರೆ ಕೃಷಿ ಉತ್ಪಾದನೆಯ ಮೇಲೆ ಉಂಟಾಗುತ್ತಿರುವ ಕೆಟ್ಟ ಪರಿಣಾಮದ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ತೀವ್ರ ಕಳವಳ ವ್ಯಕ್ತಪಡಿಸಿ, ಸಮಗ್ರ ಅಧ್ಯಯನಕ್ಕೆ ಆಗ್ರಹಿಸಿದರು. ಶಾಸಕರು ಸದನದಲ್ಲಿ ಎತ್ತಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ ಕೃಷಿ ಸಚಿವರಾದ ಎನ್. ಚೆಲುವರಾಯ ಸ್ವಾಮಿಯವರು, ಶಿವಮೊಗ್ಗದಲ್ಲಿರುವ
ಉಡುಪಿ ಜಿಲ್ಲೆಯಲ್ಲಿ ಕಲ್ಲು ಕ್ವಾರಿ ಪುನರಾರಂಭಕ್ಕೆ ಶಾಸಕ ಗಂಟಿಹೊಳೆ ಆಗ್ರಹ
ಬೈಂದೂರಿನಲ್ಲಿ ಹೋರಾಟದ ಸ್ವರೂಪ ಪಡೆದಿರುವ ಕಲ್ಲುಕ್ವಾರಿ ವಿಚಾರ ವಿಧಾನ ಮಂಡಲದ ಅಧಿವೇಶನದ ನಡುವೆಯೇ ಗಣಿ ಸಚಿವರ ಗಮನಕ್ಕೆ ತರುವಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಯಶಸ್ವಿಯಾಗಿದ್ದಾರೆ. ಬೈಂದೂರಿನಲ್ಲಿ ಹೋರಾಟದ ಸ್ವರೂಪ ಪಡೆದಿರುವ ಕಲ್ಲುಕ್ವಾರಿ ವಿಚಾರ ವಿಧಾನ ಮಂಡಲದ ಅಧಿವೇಶನದ ನಡುವೆಯೇ ಗಣಿ ಸಚಿವರ ಗಮನಕ್ಕೆ ತರುವಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಯಶಸ್ವಿಯಾಗಿದ್ದಾರೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು ಭೇಟಿ ಮಾಡಿದ ಶಾಸಕ ಗುರುರಾಜ್ ಅವರು,
ಇಷ್ಟು ದ್ವೇಷಕಾರುವ ನಿಲುವು ಯಾವ ಸರ್ಕಾರಕ್ಕೂ ಒಳಿತಲ್ಲ
ರಾಜ್ಯ ಸರ್ಕಾರದ ನಿರ್ಧಾರವನ್ನು ಕಟುವಾಗಿ ಖಂಡಿಸಿದ ಶಾಸಕ ಗುರುರಾಜ್ ಗಂಟಿಹೊಳೆ ಬೈಂದೂರು : ಶಿಕ್ಷಕರ ದಿನಾಚರಣೆ ಅಂಗವಾಗಿ ರಾಜ್ಯಮಟ್ಟದ ಉತ್ತಮ ಪ್ರಾಂಶುಪಾಲರಾಗಿ ಆಯ್ಕೆಯಾದ ಕುಂದಾಪುರ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಣ ಬಿ.ಜೆ. ಅವರಿಗೆ ಪ್ರಶಸ್ತಿ ನೀಡದೇ ರಾಜ್ಯ ಸರ್ಕಾರ ದ್ವೇಷ ಸಾಧಿಸಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಕಿಡಿಕಾರಿದ್ದಾರೆ. ಸರ್ಕಾರಿ ಶಾಲೆ ಸಹಿತ ಪದವಿ ಪೂರ್ವ ಕಾಲೇಜಿನ ವರೆಗೂ ಕಡ್ಡಾಯವಾಗಿ ಸಮವಸ್ತ್ರ ನಿಯಮ ಪಾಲನೆ ಮಾಡಬೇಕು ಎಂದು ಅಂದಿನ ಸರ್ಕಾರ ಹಾಗೂ ಕೋರ್ಟ್ ನಿರ್ದೇಶನ ನೀಡಿದ
ಚಿತ್ರಕೂಟ ಆಯುರ್ವೇದ ಸಂಸ್ಥೆ ಊರಿಗೆ ಹೆಮ್ಮೆ: ಶಾಸಕ ಗಂಟಿಹೊಳೆ
ಕುಂದಾಪುರ: ಚಿತ್ರಕೂಟ ಆಯುರ್ವೇದ ಸಂಸ್ಥೆಯನ್ನು ಆರಂಭಿಸುವ ಮೂಲಕ ಆಲೂರಿಗೆ ಡಾ| ಬಾಯರಿ ಅವರು ದೊಡ್ಡ ಕೊಡುಗೆ ನೀಡಿದ್ದಾರೆ. ಇದರ ಯಶಸ್ಸು ಕೇವಲ ಅವರಿಗೆ ಮಾತ್ರವಲ್ಲ, ಇಡೀ ಊರಿಗೆ ಸಲ್ಲುತ್ತದೆ. ಈ ಪುಟ್ಟ ಊರಿಗೆ ಚಿಕಿತ್ಸೆಗಾಗಿ ವಿದೇಶಿಗರು ಕೂಡ ಬರುತ್ತಿರುವುದು ಹೆಮ್ಮೆಯ ವಿಚಾರ. ಸಂಸ್ಥೆ ಇನ್ನಷ್ಟು ಪ್ರಗತಿ ಕಾಣಲಿ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು. ಅವರು ಗುರುವಾರ ಆಲೂರಿನ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ಪಾರ್ಶ್ವ ವಾಯು ಪುನರ್ವಸತಿ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದರು. ಸಮ್ಮಾನ
ಕ್ಷೇತ್ರದಲ್ಲಿ ಒಂದಾದರೂ ಗೋ ಶಾಲೆ ನಿರ್ಮಾಣ ಅತಿ ಶೀಘ್ರ ಆಗಬೇಕು
ಗೋಮಾಳ ಜಾಗ ಸರ್ವೇ ಪೂರ್ಣಗೊಳಿಸಿದ ಗ್ರಾ.ಪಂ. ಪಿಡಿಒಗಳ ಜತೆ ಶಾಸಕ ಗುರುರಾಜ್ ಗಂಟಿಹೊಳೆ ಸಭೆ ಬೈಂದೂರು: ಕ್ಷೇತ್ರವ್ಯಾಪ್ತಿಯ ಗೋಮಾಳ ಸರ್ವೇ ನಡೆಸುವ ಕಾರ್ಯ ಆದಷ್ಟುಬೇಗ ಪೂರ್ಣಗೊಳಿಸಬೇಕು ಹಾಗೂ ಮುಂದಿನ ಒಂದು ತಿಂಗಳೊಳಗೆ ಕನಿಷ್ಠ ಒಂದಾದರೂ ಗೋ ಶಾಲೆ ನಿರ್ಮಿಸಬೇಕು ಎಂದು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ನಿರ್ದೇಶಿಸಿದರು. ಗೋಮಾಳ ಸರ್ವೇ ಆದ ಗ್ರಾಮ ಪಂಚಾಯತಿಗಳ ಪಿಡಿಒ ಜೊತೆ ಸಭೆ ನಡೆಸಿದ ಶಾಸಕರು, ಸುಮಾರು 80 ಪ್ರತಿಶತ ತಯಾರಿಯಲ್ಲಿರುವ ನಾಡ ಗೋಮಾಳದ ಬಗ್ಗೆ ಮೊದಲು ಚರ್ಚಿಸಿದರು. ನಾಡದಲ್ಲಿ ನೀರಿಗಾಗಿ
ಬಿಜೂರಿನಲ್ಲಿ ಗಮನ ಸೆಳೆದ ಗ್ರಾಮ ಸಂವಾದ
ಬೈಂದೂರು: ಶಾಸಕ ಗುರುರಾಜ್ ಗಂಟಿಹೊಳೆಯವರ ಗ್ರಾಮ ಸಂವಾದ ಕಾರ್ಯಕ್ರಮ ಮುಂದುವರೆಯುತ್ತಿದ್ದು ವ್ಯಾಪಕ ಸ್ಪಂದನೆ ದೊರೆಯುತ್ತಿದೆ. ಬಿಜೂರು ಗ್ರಾಮದಲ್ಲಿ ಗ್ರಾಮ ಸಂವಾದ ನಡೆಸಿದ ಶಾಸಕ ಗುರುರಾಜ್ ಗಂಟಿಹೊಳೆಯವರಿಗೆ ತಮ್ಮ ಸ್ವಕ್ಷೇತ್ರದ ಮತದಾರರು ಸಮಸ್ಯೆಗಳ ಮಹಾಪೂರವನ್ನೇ ಕಣ್ಮುಂದೆ ವಿವರಿಸಿದರು. ಜೆಜೆಎಂ ಪೈಪ್ ಲೈನ್ ಅವ್ಯವಸ್ಥೆ, ಶಾಲಾ ಮಕ್ಕಳಿಗೆ ಕಾಲುಸಂಕಗಳು, ತೆರೆದ ಅಪಾಯಕಾರಿ ಚರಂಡಿ, ದಾರಿದೀಪದ ಸಮಸ್ಯೆ, ಗ್ರಾಮಕರಣಿಕರ ಅಲಭ್ಯತೆ, ಹೀಗೇ ಹಲವು ಸಮಸ್ಯೆಗಳನ್ನು ಶಾಸಕರಿಗೆ ಮನವರಿಕೆ ಮಾಡಿದರು. ಬಿಜೂರು ಗ್ರಾಮದಲ್ಲಿ ಜೆಜೆಎಂ ಪೈಪ್ ಲೈನ್ ಕಾಮಗಾರಿ ಪೂರ್ಣವಾಗಿಲ್ಲ ಎನ್ನುವುದನ್ನು ಬಿಜೂರು
ಅಂತಾರಾಷ್ಟ್ರೀಯ ಉದ್ಯೋಗ ಮೇಳ ಯಶಸ್ಸಿಗೆ ಸಭೆ
ಉಪ್ಪುಂದ: ಇದೇ ಮೊದಲ ಬಾರಿಗೆ ಬೈಂದೂರಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಉದ್ಯೋಗ ಮೇಳದ ಯಶಸ್ವಿಗಾಗಿ ಶಾಸಕರಾದ ಗುರುರಾಜ ಗಂಟಿಹೊಳೆಯವರು ಕಾರ್ಯಕರ್ತದಲ್ಲಿ ಪ್ರಮುಖರ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಿದರು. ಬೈಂದೂರು ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಅರ್ಹ ಅಭ್ಯರ್ಥಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸುವಂತೆ ಮಾಡಬೇಕು. ವಿಶೇಷವಾಗಿ ಬೈಂದೂರು ಕ್ಷೇತ್ರದ ಪ್ರತಿಬೂತ್ ನ ಪ್ರತಿ ಮನೆಗೂ ಉದ್ಯೋಗ ಮೇಳದ ಮಾಹಿತಿ ತಲುಪಿಸುವ ಕಾರ್ಯ ಆಗಬೇಕು. ವಿದೇಶಗಳಲ್ಲಿ ಲಭ್ಯವಿರುವ ಉದ್ಯೋಗಾವಕಾಶ ಮತ್ತು ಅದಕ್ಕೆ ಉಚಿತವಾಗಿ ನೀಡುವ ತರಬೇತಿ,
ವಾರಾಹಿ ಯೋಜನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು
ಬೈಂದೂರು ಕ್ಷೇತ್ರಕ್ಕೆ ನೀರುಣಿಸಲು ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚನೆ ಬೈಂದೂರು: ವಾರಾಹಿ ಯೋಜನೆಗೆ ಸಂಬಂಧಿಸಿದಂತೆ ಬೈಂದೂರು ವಿಧಾನ ಸಭಾ ಕ್ಷೇತ್ರಕ್ಕೆ ಆಗಲಿರುವ ಉಪಯೋಗ ಮತ್ತು ಯೋಜನೆ ಬೈಂದೂರಿನ ಗ್ರಾಮಗಳಿಗೆ ಸಮರ್ಪಕವಾಗಿ ಬಾರದೇ ಇರುವ ಬಗ್ಗೆ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಗ್ರಾಮಸ್ಥರ ಸಮ್ಮುಖದಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬುಧವಾರ ವಾರಾಹಿ ಕಚೇರಿಯಲ್ಲಿ ನಡೆದ ಅಧಿಕಾರಿಗಳು ಮತ್ತು ಗ್ರಾಮಸ್ಥರ ಸಭೆಯಲ್ಲಿ ಬೈಂದೂರು ಕ್ಷೇತ್ರದ ಗ್ರಾಮಗಳಿಗೆ ವಾರಾಹಿ ನೀರುಣಿಸಲು ಇರುವ ಯೋಜನೆಗಳ ಬಗ್ಗೆ ಶಾಸಕರು ಮಾಹಿತಿ ಒದಗಿಸುವಂತೆ ಅಧಿಕಾರಿಗಳಿಗೆ ತಿಳಿಸಿದಾಗ,
ಬೈಂದೂರಿನಲ್ಲಿ ಬೃಹತ್ ಅಂತಾರಾಷ್ಟ್ರೀಯ ಉದ್ಯೋಗ ಮೇಳ – ವಿದೇಶದಲ್ಲಿ ಉದ್ಯೋಗಾವಕಾಶ
ಬೈಂದೂರು : ವಿದೇಶದಲ್ಲಿ ಉದ್ಯೋಗ ಬಯಸುವವರಿಗೆ ಸುವರ್ಣಾವಕಾಶ. ಉಚಿತ ತರಬೇತಿ, ಉಚಿತ ವಸತಿ ವ್ಯವಸ್ಥೆ, ಊಟ, ಉಪಹಾರದ ಜತೆಗೆ ವೀಸಾ ಹಾಗೂ ವಿಮಾನ ಟಿಕೆಟ್ ಕೂಡ ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತವಾಗಲಿದ್ದು, ವಿದೇಶಿ ಭಾಷೆ ಕಲಿತು, ವಿದೇಶದಲ್ಲಿ ಉದ್ಯೋಗ ಮಾಡಬಹುದು. ಇಂತಹದ್ದೊಂದು ಅವಕಾಶ ಬೈಂದೂರಿಗೆ ಇದೇ ಮೊದಲ ಬಾರಿಗೆ ಬಂದಿದೆ. ಸಮೃದ್ಧ ಬೈಂದೂರು ವತಿಯಿಂದ ಕೇಂದ್ರ ಸರ್ಕಾರದ ಅಂಗಸಂಸ್ಥೆಯಾದ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ(ಅಂತಾರಾಷ್ಟ್ರೀಯ) ಹಾಗೂ ಅಜಿನುರಹಾ ಸಂಸ್ಥೆಯ ಸಹಭಾಗಿತ್ವದಲ್ಲಿ ಆಗಸ್ಟ್ 31ರಂದು ಬೈಂದೂರಿನ ಜೆ.ಎನ್.ಆರ್. ಅಡಿಟೋರಿಯಂನಲ್ಲಿ ನಡೆಯಲಿದೆ. ಇದೊಂದು