Blog
Your blog category
ಪರಿಹಾರಕ್ಕಿಂತ ಬರ ಪಟ್ಟಿಯ ಪಿಆರ್ ತಂತ್ರಕ್ಕೆ ಸೀಮಿತವಾಗದಿರಲಿ ಸರಕಾರ
ಇತ್ತೀಚೆಗಷ್ಟೇ ರಾಜ್ಯ ಸರಕಾರವು 101 ತಾಲೂಕುಗಳನ್ನು ‘ಬರಪೀಡಿತ’ ಎಂದು ಘೋಷಣೆ ಮಾಡಿ ಕೈತೊಳೆದುಕೊಂಡಿದೆ. ಆದರೆ, ಮಳೆಯಿಲ್ಲದೆ ಬರದ ಬೇಗೆಗೆ ಸಿಲುಕಿ ನಲುಗುತ್ತಿರುವ ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಕರಾವಳಿ ಹಾಗೂ ಕಲಬುರಗಿಯಂತಹ ಅನೇಕ ಪ್ರಮುಖ ಜಿಲ್ಲೆಗಳ ಬಹುತೇಕ ತಾಲೂಕುಗಳು ಈ ಪಟ್ಟಿಯಿಂದಲೇ ನಾಪತ್ತೆಯಾಗಿವೆ! ಬರಗಾಲವು ರಾಜ್ಯದ ಅಂಗಳಕ್ಕೆ ಕಾಲಿಟ್ಟಾಗಲೆ, ವಾಸ್ತವಿಕ ಸಂಕಷ್ಟಗಳಿಗೆ ಸ್ಪಂದಿಸುವುದಕ್ಕಿಂತ ಹೆಚ್ಚಾಗಿ ಅಂಕಿ-ಅಂಶಗಳನ್ನು ತಿರುಚುವ, ಪರಿಸ್ಥಿತಿಯ ಗಂಭೀರತೆಯನ್ನು ಮರೆಮಾಚುವ ಮತ್ತು ಸುಳ್ಳು ಸುದ್ದಿಗಳ ಮೂಲಕ ಜನರನ್ನು ದಿಕ್ಕುತಪ್ಪಿಸುವ ಕಸರತ್ತುಗಳಿಗೆ ಸರಕಾರ ಮುಂದಾಗುತ್ತದೆ. ಪ್ರಕೃತಿಯ ವಿಕೋಪಕ್ಕೆ
ಇಂದಿನ ಪರೀಕ್ಷಾ ಪದ್ಧತಿಗಳಿಂದ ಪ್ರಾಮಾಣಿಕ ಬದುಕು ಸಾಧ್ಯವೇ?
ಒಂದು ಪ್ರಾಮಾಣಿಕ ಪರೀಕ್ಷಾ ವ್ಯವಸ್ಥೆಯು ಅಂತಹ ಬಡ ಪ್ರತಿಭೆಗಳಿಗೆ ಯಾವುದೇ ಶಿಫಾರಸು ಅಥವಾ ಹಣವಿಲ್ಲದೆಯೂ ತಮ್ಮ ಕಠಿಣ ಪರಿಶ್ರಮದಿಂದ ಮಾತ್ರ ಉನ್ನತ ಹುದ್ದೆಯನ್ನು ಅಲಂಕರಿಸಲು ಸಮಾನ ಅವಕಾಶವನ್ನು ಕಲ್ಪಿಸುತ್ತದೆ. ಆದರೆ, ಪ್ರಸ್ತುತ ಜೀರ್ಣಗೊಂಡಿರುವ ನೇಮಕಾತಿ ವ್ಯವಸ್ಥೆಯು ಅಂತಹ ಪ್ರಾಮಾಣಿಕ ಯುವಕರ ಆ ಕನಸುಗಳನ್ನು ಕ್ರೂರವಾಗಿ ದಮನಿಸುತ್ತಿದೆ. ಸಮಾಜದ ಕಟ್ಟಕಡೆಯ ಬಡ ಹಾಗೂ ಮಧ್ಯಮ ವರ್ಗದ ಯುವಕರಿಗೆ ಮುಖ್ಯವಾಹಿನಿಗೆ ಬರಲು, ತಮ್ಮ ಬಡತನದ ರೇಖೆಯನ್ನು ದಾಟಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸರಕಾರಿ ಉದ್ಯೋಗಗಳೇ ಏಕೈಕ ಪ್ರಮುಖ ಮತ್ತು ಭದ್ರವಾದ
ಲೈಕ್-ಶೇರ್ʼಗಳ ಭರಾಟೆಯಲ್ಲಿ ಸುದ್ದಿಯೆಷ್ಟು, ಸತ್ಯವೆಷ್ಟು ?
ಕೇವಲ ಒಂದು ಸುಳ್ಳು ಫಾರ್ವರ್ಡ್, ಒಟ್ಟಿಗೆ ಬಾಳುತ್ತಿದ್ದ ನಮ್ಮೂರಿನ ಜನರನ್ನೇ ಎರಡು ಗುಂಪು ಗಳಾಗಿ ವಿಭಜಿಸಿ ಎಷ್ಟು ಸುಲಭವಾಗಿ ರಕ್ತಪಾತದ ಹಂತಕ್ಕೆ ಉದ್ರೇಕಗೊಳಿಸಬಹುದು ಎಂಬುದನ್ನು ಕಣ್ಣಾರೆ ಕಂಡು ನನಗೆ ನಿಜಕ್ಕೂ ಆಘಾತವಾಯಿತು. ಮಾಹಿತಿ ತಂತ್ರಜ್ಞಾನದ ಈ ಅತ್ಯದ್ಭುತ ಯುಗದಲ್ಲಿ, ಜಗತ್ತಿನ ಯಾವುದೇ ಮೂಲೆಯ ಸುದ್ದಿಯಾದರೂ ಕ್ಷಣಮಾತ್ರದಲ್ಲಿ ನಮ್ಮ ಅಂಗೈಯಲ್ಲಿರುವ ಮೊಬೈಲ್ ಪರದೆಯ ಮೇಲೆ ಬಂದು ನಿಲ್ಲುತ್ತದೆ. ಇತ್ತೀಚೆಗೆ ನಡೆದ ಒಂದು ಘಟನೆ ನನ್ನನ್ನು ತೀವ್ರವಾಗಿ ಕಾಡುತ್ತಿದೆ. ಕೆಲವು ದಿನಗಳ ಹಿಂದೆ, ನನಗೆ ಪೊಲೀಸ್ ಅಧಿಕಾರಿಗಳಿಂದ ಒಂದು ತುರ್ತು
ಖಾಸಗಿ ಡೀಮ್ಡ್ ವಿವಿಗಳ ರೀತಿ ರಾಜ್ಯ ವಿವಿಗಳೇಕೆ ಮಿಂಚುತ್ತಿಲ್ಲ ?
ಒಂದು ಕಾಲದಲ್ಲಿ ಜ್ಞಾನದ ಸೃಷ್ಟಿ ಮತ್ತು ಹೊಸ ಆವಿಷ್ಕಾರಗಳಿಗೆ ಹೆಸರಾಗಿದ್ದ ಈ ಸಂಸ್ಥೆಗಳು, ಇಂದು ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ. ವಿದ್ಯಾರ್ಥಿಗಳಿಗೆ ಉತ್ತಮ ಪ್ರಯೋ ಗಾಲಯಗಳು, ಸುಸಜ್ಜಿತ ಗ್ರಂಥಾಲಯಗಳು ಮತ್ತು ಸೂಕ್ತ ಮಾರ್ಗದರ್ಶನ ಸಿಗುತ್ತಿಲ್ಲ. ಇದರಿಂದಾಗಿ ಬಡ ವಿದ್ಯಾರ್ಥಿ ಗಳು ಅತ್ಯುನ್ನತ ಮಟ್ಟದ ಶೈಕ್ಷಣಿಕ ಸ್ಪರ್ಧೆಯಲ್ಲಿ ಹಿಂದುಳಿಯುವಂತಾಗಿದೆ. ಹಳೆಯ ಪಠ್ಯಕ್ರಮಗಳನ್ನೇ ಇಂದಿಗೂ ಬೋಧಿಸುತ್ತಿರುವುದರಿಂದ ಆಧುನಿಕ ತಂತ್ರಜ್ಞಾನದ ಅರಿವು ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ. ರಾಜ್ಯದ ಸರಕಾರಿ ವಿಶ್ವವಿದ್ಯಾಲಯಗಳು ಕೇವಲ ಉನ್ನತ ಶಿಕ್ಷಣದ ಕೇಂದ್ರಗಳಲ್ಲ, ಅವು ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳ ಪಾಲಿಗೆ
ಹಾತಿಕಟ್ಟೆಯ ಹೊಂಡಗಳಲ್ಲಿರುವ ಈ ಮೀನುಮರಿಗಳ ಕಥೆ ಕೇಳಿ !
ಮೀನು ಮರಿ ಉತ್ಪಾದನಾ ಕೇಂದ್ರದಿಂದ ತಂದ ಸಣ್ಣ ಮೀನು ಮರಿಗಳನ್ನು ಫಲಾನುಭವಿಗಳಿಗೆ ಉಚಿತ ವಾಗಿ ಅಥವಾ ಭಾರಿ ಸಹಾಯಧನದ ರೂಪದಲ್ಲಿ ಒದಗಿಸಲಾಗುತ್ತಿತ್ತು. ಸಣ್ಣ ರೈತರು ತಮ್ಮ ಜಮೀನಿನ ಹೊಂಡಗಳಲ್ಲಿ ಈ ಮರಿಗಳನ್ನು ಪೋಷಿಸಿ ಬೆಳೆಸುತ್ತಿದ್ದರು. ಮೀನುಗಳು ಸ್ವಲ್ಪ ದೊಡ್ಡದಾದ ನಂತರ ದಳಿಗಳ ಹಾವಳಿಯನ್ನು ತಪ್ಪಿಸಿ ಸರಕಾರವೇ ಅವುಗಳನ್ನು ನ್ಯಾಯಯುತ ಬೆಲೆಗೆ ರೈತರಿಂದ ನೇರವಾಗಿ ಖರೀದಿಸುತ್ತಿತ್ತು. ಇತ್ತೀಚೆಗೆ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರ ನೇತೃತ್ವದಲ್ಲಿ ನಾವು ಬರ ಅಧ್ಯಯನಕ್ಕೆ ತೆರಳಿದ್ದಾಗ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ
ದಯವಿಟ್ಟು ಕ್ಷಮಿಸಿ, ರಾಜ್ಯದಲ್ಲಿ ಸದ್ಯಕ್ಕೆ ಆರೋಗ್ಯ ಸೇವೆ ಲಭ್ಯವಿಲ್ಲ
ಸರಕಾರ ಮತ್ತು ಸೇವಾ ಪೂರೈಕೆದಾರ ಸಂಸ್ಥೆಗಳ ನಡುವಿನ ಗುತ್ತಿಗೆ ವಿವಾದಗಳು ಹಾಗೂ ಆರ್ಥಿಕ ಭಿನ್ನಾಭಿಪ್ರಾಯಗಳಿಂದಾಗಿ ನೂರಾರು ಆಂಬ್ಯುಲೆನ್ಸ್‌ಗಳು ರಸ್ತೆಗೆ ಇಳಿಯದೆ ಗ್ಯಾರೇಜ್ ಸೇರುತ್ತಿವೆ. ತಳಮಟ್ಟದಲ್ಲಿ ತುರ್ತು ಚಿಕಿತ್ಸೆಯ ಅಗತ್ಯವಿರುವ ರೋಗಿಗಳಿಗೆ ಸಕಾಲದಲ್ಲಿ ಈ ಸೇವೆ ಲಭ್ಯ ವಾಗುತ್ತಿಲ್ಲ ಎಂಬುದಕ್ಕೆ ಉಡುಪಿ ಜಿಲ್ಲೆಯ ವಾಸ್ತವ ಸ್ಥಿತಿಯೇ ಸ್ಪಷ್ಟ ನಿದರ್ಶನವಾಗಿದೆ. ಒಂದು ಕಾಲದಲ್ಲಿ ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶಗಳ ರೋಗಿಗಳಿಗೆ ಜೀವನಾಡಿಯಾಗಿದ್ದ ಹಾಗೂ ಇಡೀ ಆರೋಗ್ಯ ಕ್ಷೇತ್ರದ ‘ಡ್ರೀಮ್ ಪ್ರಾಜೆಕ್ಟ್’ ಎಂದೇ ಕರೆಸಿಕೊಳ್ಳುತ್ತಿದ್ದ 108 ‘ಆರೋಗ್ಯ ಕವಚ’ ಆಂಬ್ಯುಲೆನ್ಸ್
ರಾಜಕೀಯ ನೆಪಗಳಾಚೆಗಿನ ಇಚ್ಛಾಶಕ್ತಿ ಮಾದರಿಗಳು
ತುರ್ತು ಪರಿಹಾರದ ಜೊತೆಗೆ ಬರಗಾಲಕ್ಕೆ ಶಾಶ್ವತ ಮುಕ್ತಿ ನೀಡುವ ನಿಟ್ಟಿನಲ್ಲಿ ಫಡ್ನವೀಸ್ ಅವರು 2014ರ ‘ಜಲಯುಕ್ತ ಶಿವಾರ್’ ಎಂಬ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಾರಿಗೆ ತಂದಿದ್ದರು. ದೊಡ್ಡ ಅಣೆಕಟ್ಟುಗಳಿಗಿಂತ ವಿಕೇಂದ್ರೀಕೃತ ಸಣ್ಣ ನೀರಾವರಿ ಜಾಲಕ್ಕೆ ಆದ್ಯತೆ ನೀಡಿದ ಈ ಯೋಜನೆ ಯಡಿ, ಪ್ರತಿ ವರ್ಷ 5000 ಹಳ್ಳಿಗಳನ್ನು ಆಯ್ಕೆ ಮಾಡಿ ಸಣ್ಣ ಹಳ್ಳಗಳ ಆಳ ಹೆಚ್ಚಿಸುವುದು, ಚೆಕ್ ಡ್ಯಾಂ ಕಟ್ಟುವುದು ಮತ್ತು ಕೃಷಿ ಹೊಂಡಗಳನ್ನು ತೋಡುವ ಕೆಲಸವನ್ನು ಯುದ್ಧೋಪಾದಿಯಲ್ಲಿ ಮಾಡಲಾಯಿತು. ಕಳೆದ 2-3 ವಾರಗಳಲ್ಲಿ ಕೈ ಕಾಲು ಮುರುಟಿ
ಬರವನ್ನು ಎದುರಿಸುವ ಬಲವಾದ ಇಚ್ಛಾಶಕ್ತಿ ಇದೆಯೇ?
ರಾಜ್ಯದಲ್ಲಿ ಮಳೆ ಕೊರತೆಯ ತೀವ್ರತೆ ಎಷ್ಟಿದೆ ಎಂಬುದನ್ನು ಈ ಬಾರಿಯ ಅಂಕಿ-ಅಂಶಗಳು ಕಣ್ಣಿಗೆ ಕಟ್ಟುವಂತೆ ತೋರಿಸುತ್ತಿವೆ. ಜೂನ್ ತಿಂಗಳಲ್ಲಿ ರಾಜ್ಯವು ವಾಡಿಕೆಯ 199 ಮಿ.ಮೀ ಮಳೆಯ ಬದಲಾಗಿ ಕೇವಲ 116 ಮಿ.ಮೀ ಮಳೆಯನ್ನು ಪಡೆದಿದ್ದು, 42% ರಷ್ಟು ಬೃಹತ್ ಮಳೆ ಕೊರತೆ ದಾಖಲಾಗಿತ್ತು. ಜುಲೈ 11ರ ಅಂಕಿ-ಅಂಶಗಳ ಪ್ರಕಾರ, ವಾಡಿಕೆಯ 292 ಮಿ.ಮೀ ಮಳೆಯ ಬದಲಾಗಿ 203 ಮಿ.ಮೀ ಮಾತ್ರ ಸುರಿದಿದ್ದು, ರಾಜ್ಯದಲ್ಲಿ ಒಟ್ಟಾರೆ 30% ಮಳೆ ಕೊರತೆ ಉಂಟಾಗಿದೆ. ಈ ವರ್ಷದ ಮುಂಗಾರು ಹಂಗಾಮಿನ ಮೇಲೆ
ಕರ್ನಾಟಕದಲ್ಲಿ ಒಂದರಿಂದ ಹಲವು ಬೆಂಗಳೂರು ಆಗಲಿಲ್ಲವೇಕೆ ?
ದಕ್ಷಿಣ ಭಾರತದ ಮ್ಯಾಂಚೆಸ್ಟರ್ ಎಂದೇ ಖ್ಯಾತವಾಗಿರುವ ಕೊಯಮತ್ತೂರು ಜವಳಿ, ನಿಖರ ಎಂಜಿನಿಯರಿಂಗ್, ಪಂಪ್ ಉತ್ಪಾದನೆ ಮತ್ತು ಫೌಂಡ್ರಿ ಘಟಕಗಳ ಜಾಗತಿಕ ಕೇಂದ್ರವಾಗಿ ಬೆಳೆದಿದ್ದರೆ; ಸಾಮಾನ್ಯ ಗಡಿ ಭಾಗವಾಗಿದ್ದ ಹೊಸೂರು ಇಂದು ಟಿವಿಎಸ್ ಮತ್ತು ಟಾಟಾ ಎಲೆಕ್ಟ್ರಾನಿಕ್ಸ್‌ನಂತಹ ದೈತ್ಯ ಕಂಪನಿಗಳ ಮೂಲಕ ವಾಹನ ಉತ್ಪಾದನೆ, ಭಾರಿ ಎಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ಸ್ ತಯಾರಿಕಾ ಕೇಂದ್ರವಾಗಿ ಬದಲಾಗಿದೆ. ದಶಕಗಳಿಂದ, ಅಭಿವೃದ್ಧಿಶೀಲ ಆರ್ಥಿಕತೆಗಳಲ್ಲಿ ಕೇವಲ ಒಂದು ಬೃಹತ್ ನಗರವನ್ನು ಮಾತ್ರ ಬೆಳೆಸುವ ಮಾದರಿ ರೂಢಿಯಲ್ಲಿದೆ. ಬಂಡವಾಳ, ಪ್ರತಿಭೆ ಮತ್ತು ಮೂಲಸೌಕರ್ಯಗಳೆಲ್ಲವೂ ಕೇವಲ ಒಂದು
ಬಿಡದಿ ಟೌನ್ʼಶಿಪ್ʼಗೆ ಬಿಡದ ಹಠ: ಬೇರೆಲ್ಲೂ ಯಾಕಿಲ್ಲ ?
ಸರಕಾರ ಸುಮಾರು 20 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ ಬಿಡದಿಯಲ್ಲಿ ತರುತ್ತಿರುವ ದೊಡ್ಡ ಹೈಟೆಕ್ ಸಿಟಿ ತರಹದ ಟೌನ್‌ಶಿಪ್ ಯೋಜನೆಗಳು ರಾಜ್ಯದ ಬೇರೆ ಯಾವ ಭಾಗದಲ್ಲೂ ಯಾಕೆ ಬರುತ್ತಿಲ್ಲ? ನಮ್ಮ ಅಧಿಕಾರಿಗಳು ಮತ್ತು ಪ್ಲಾನಿಂಗ್ ಮಾಡುವವರಿಗೆ ಎಲ್ಲವನ್ನೂ ರಾಜಧಾನಿಯ ಸುತ್ತಲೇ ಮಾಡಬೇಕು ಅನ್ನೋ ಹಠ ಇರೋದೇ ಇದಕ್ಕೆ ಮುಖ್ಯ ಕಾರಣ. ಕರ್ನಾಟಕದ ಕೈಗಾರಿಕಾ ನೀತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅದು ಕೇವಲ ಒಂದು ನಗರಕ್ಕೆ ಅಥವಾ ಅದರ ಸುತ್ತಮುತ್ತಲಿನ ಸೀಮಿತ ಪ್ರದೇಶಕ್ಕೆ ಮಾತ್ರ ರತ್ನಗಂಬಳಿ ಹಾಸುತ್ತಿರುವುದು ಸ್ಪಷ್ಟವಾಗಿ
