Initiatives

ವಿದ್ಯಾರ್ಥಿ ಪಥ

ವಿದ್ಯಾರ್ಥಿಗಳು ದೇಶದ ಆಸ್ತಿ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ನಾಣ್ಣುಡಿಯಂತೆ ವಿದ್ಯಾರ್ಥಿಗಳಿಗೆ ಅಗತ್ಯವಾದ ಶೈಕ್ಷಣಿಕ ಮಾರ್ಗದರ್ಶನ ಸಹಿತ ಮಾನವ ಸಂಪನ್ಮೂಲದ ಸದ್ಬಳಕೆಯತ್ತ ದೃಷ್ಠಿ ನೆಟ್ಟು ಅವರಿಗೆ ಬೇಕಾದ ಅಗತ್ಯ ಮಾರ್ಗದರ್ಶನವನ್ನು ಶಿಕ್ಷಣ ತಜ್ಞರಿಂದ ನೀಡಲಾಗುವುದು. ವಿದ್ಯಾರ್ಥಿ ಪಥವು ವಿದ್ಯಾರ್ಥಿಗಳಲ್ಲಿ ಅದರಲ್ಲೂ ಯುವ ಸಮುದಾಯದಲ್ಲಿ ಭವಿಷ್ಯದ ಬಗ್ಗೆ ಉತ್ತಮ ರೀತಿಯಲ್ಲಿ ಆಲೋಚಿಸುವ ಮತ್ತು ಸವಾಲನ್ನು ಎದುರಿಸುವ ಕೈಂಕರ್ಯದಲ್ಲಿ ಸಹಾಯಕವಾಗಲಿದೆ. ಪದವಿಪೂರ್ವ ಶಿಕ್ಷಣದ ನಂತರ ಮುಂದೇನು? ಎಂಬ ಪ್ರಶ್ನೆಗೆ ಉತ್ತರವಾಗಿ, ಪದವಿ ಶಿಕ್ಷಣದ ನಂತರ ಉದ್ಯೋಗದ ಭರವಸೆಯೇನು? ಎಂಬುದಕ್ಕೆ

Read More

Initiatives

ಸ್ವ ಉದ್ಯೋಗ / ಗುಡಿ ಕೈಗಾರಿಕೆ

ಇಂದಿಲ್ಲವಾಗುತ್ತಿರುವ ಸಾಂಪ್ರದಾಯಿಕ ವಸ್ತುಗಳ ನಿರ್ಮಾಣ ಮತ್ತು ಮಾರುಕಟ್ಟೆ ವ್ಯವಸ್ಥೆಯ ಬಗ್ಗೆ ಸೂಕ್ತ ಅಧ್ಯಯನ ನಡೆಸಿ ತೆರೆಮರೆಗೆ ಸರಿಯುತ್ತಿರುವ ಮಣ್ಣಿನ ಪಾತ್ರೆಗಳನ್ನು ಮಾಡುವ ಕುಂಬಾರಿಕೆ, ನೇಯ್ಗೆ, ಕಲಾಕೃತಿಗಳು ಸೇರಿದಂತೆ ಯುವ ಸಮೂಹದ ಆರ್ಥಿಕ ಸ್ಥಿತಿಯನ್ನು, ಮಹಿಳೆಯರ ಗೃಹೋದ್ಯಮವನ್ನು ಉತ್ತೇಜಿಸುವ ಹಲವು ಉಪಕ್ರಮಗಳತ್ತ ಬೆಳಕು ಚೆಲ್ಲಲಾಗುವುದು. ಕೇಂದ್ರ ಸರಕಾರದ ಮುದ್ರಾ ಯೋಜನೆಯಡಿ ಸಣ್ಣ ಮತ್ತು ಮಧ್ಯಮ ಉದ್ಯಮ ಸೇರಿದಂತೆ ಗುಡಿ ಕೈಗಾರಿಕಾ ವಲಯದ ಅಭಿವೃದ್ಧಿಗೆ ಬೇಕಾದ ಎಲ್ಲಾ ಮಾರ್ಗಗಳನ್ನು ಪರಿಶೀಲಿಸಿ, ಮುನ್ನಡೆಸಲಾಗುವುದು. ಕೇಂದ್ರ ಸರಕಾರವು ಈಗಾಗಲೇ ಗುಡಿ ಕೈಗಾರಿಕೆ ಸಹಿತ

Read More

Initiatives

ಒನ್ ವಿಲ್ಲೇಜ್ ಒನ್ ಪ್ರೊಡಕ್ಟ್

ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಮತ್ತು ಯಶಸ್ವಿ ಯೋಜನೆಯಾದ ಒನ್ ಡಿಸ್ಟ್ರಿಕ್ಟ್, ಒನ್ ಪ್ರೊಡಕ್ಟ್ ನಂತೆಯೇ ಬೈಂದೂರು ಕ್ಷೇತ್ರದಲ್ಲಿರುವ ಹಲವು ಗ್ರಾಮಗಳನನು ಗಮನದಲ್ಲಿರಿಸಿ ಒನ್ ವಿಲ್ಲೇಜ್, ಒನ್ ಪ್ರೊಡಕ್ಟ್ ಯೋಜನೆಯನ್ನು ಸ್ಥಳೀಯವಾಗಿ ಅನುಷ್ಠಾನಗೊಳಿಸಲಾಗಿದೆ. ದೇಶದ ಜೀವಾಳವೇ ಗ್ರಾಮವಾಗಿರುವ ಕಾರಣ, ಪ್ರತಿ ಗ್ರಾಮದಲ್ಲೂ ಒಂದೊಂದು ವಿಶೇಷತೆಯಿರುತ್ತದೆ. ಸ್ಥಳೀಯವಾಗಿ ನಿರ್ಮಿತವಾಗುವ ವಸ್ತು, ಪರಿಕರಗಳನ್ನು ಉತ್ತೇಜಿಸುವ ಕಾರಣದಿಂದ ಇಲ್ಲಿನ ಸಾಂಪ್ರಾದಾಯಿಕತೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ವಿಶಿಷ್ಟ ಪರಿಕಲ್ಪನೆಯನ್ನು ಇರಿಸಲಾಗಿದೆ. ಒನ್ ವಿಲ್ಲೇಜ್, ಒನ್ ಪ್ರೊಡಕ್ಟ್ ಅಡಿಯಲ್ಲಿ ಸ್ಥಳೀಯವಾಗಿರುವ ಗೋ ಉತ್ಪನ್ನಗಳು, ಕರಕುಶಲ ವಸ್ತುಗಳು,

Read More

Initiatives

ಇಕೋ ಟೂರಿಸಂ

ಪ್ರಾಕೃತಿಕವಾಗಿ ಸಮೃದ್ಧವಾಗಿರುವ ಬೈಂದೂರು ಕ್ಷೇತ್ರವು ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿಯೂ ವೈಶಿಷ್ಟ್ಯವನ್ನು ಹೊಂದಿದೆ. ಕ್ಷೇತ್ರದಲ್ಲಿರುವ ಪ್ರವಾಸಿ ಧಾಮಗಳಲ್ಲಿ ಇಕೋ ಟೂರಿಸಂಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಕ್ಷೇತ್ರದಲ್ಲಿರುವ ಹಿನ್ನೀರು, ಸುಂದರ ಕರಾವಳಿ ತೀರ ಪ್ರದೇಶಗಳನ್ನು ಅಭಿವೃದ್ಧಿಪಡಿಸಿ, ಅಗತ್ಯ ಮೂಲಭೂತ ಸೌಕರ್ಯಗಳನ್ನು ಪೂರೈಸುವ ಮೂಲಕ ದೇಶ ವಿದೇಶಗಳ ಪ್ರವಾಸಿಗಳನ್ನು ಆಕರ್ಷಿಸುವತ್ತ ದೃಷ್ಠಿ ಹರಿಸಲಾಗಿದೆ. ಪ್ರವಾಸೋದ್ಯಮ ಅದರಲ್ಲೂ ಇಕೋ ಟೂರಿಸಂ ಮೂಲಕ ಕರಕುಶಲ ಉತ್ಪನ್ನಗಳ ಮಾರುಕಟ್ಟೆ ಸಾಧ್ಯತೆಗಳು ವಿಪುಲವಾಗಲಿದ್ದು, ಗುಡಿ ಕೈಗಾರಿಕೆಗೂ ಉತ್ತೇಜನ ಸಿಗಲಿದೆ. ಬೆಂಗಳೂರು, ಮಂಗಳೂರು ಸಹಿತ ನಗರ ಪ್ರದೇಶಗಳ ಮಂದಿ

Read More

Initiatives

ಕೆರೆ ಅಭಿವೃದ್ಧಿ ಮತ್ತು ಅಂತರ್ಜಲ ಮರುಪೂರಣ

ಮುಂಗಾರು ಆಧಾರಿತ ಕರಾವಳಿ ಜಿಲ್ಲೆಗಳಲ್ಲಿ 2023 ಸಾಲಿನಲ್ಲಿ ಮಳೆ ಪ್ರಮಾಣ ಕುಂಠಿತವಾಗಿದ್ದು ನೀರಿನ ಬಳಕೆಯ ಬಗ್ಗೆ ಅರಿವು ಮೂಡಿಸುವುದರ ಜೊತೆಯಲ್ಲಿ ಪುರಾತನ ಕೆರೆ ಕಟ್ಟೆಗಳ ಪುನರ್ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ. ಈ ಹಿಂದಿನ ಬಿಜೆಪಿ ಸರಕಾರದ ಕಾಲಾವಧಿಯಲ್ಲಿ ದೇಶದಲ್ಲಿಯೇ ಅತಿ ಹೆಚ್ಚಿನ ಕೆರೆಗಳ ಅಭಿವೃದ್ಧಿಯನ್ನು ರಾಜ್ಯ ಕಂಡಿದೆ. ಈ ಹಿನ್ನೆಲೆಯಲ್ಲಿ ಸರಕಾರದ ಮಾದರಿ ಕಾರ್ಯಗಳನ್ನು ಗಮನದಲ್ಲಿರಿಸಿ ಬೈಂದೂರು ಕ್ಷೇತ್ರದ ಪರಿಧಿಯಲ್ಲಿ ಬರುವಂತಹ ಕೆರೆ ಸರೋವರಗಳ ಹೂಳೆತ್ತಿ, ಸಂರಕ್ಷಣೆ ಮಾಡುವ ಕಾರ್ಯಕ್ಕೂ ಹೆಚ್ಚಿನ ಆದ್ಯತೆ ನೀಡಲಾಗುವುದು. ಕೃಷಿ

Read More

Initiatives

ಗೋ ಸಂರಕ್ಷಣೆ

ಗೋವುಗಳು ದೇಶದ ಸಂಪತ್ತು. ಹೈನುಗಾರರ ಆರ್ಥಿಕತೆಗೂ ಸಕಾರಣವಾಗಿರುವ ಗೋವುಗಳು ಕೃಷಿ ಆರ್ಥಿಕತೆಗೂ ಸಹಕಾರಿಯಾಗಿವೆ. ಇಂತಹ ಅಮೂಲ್ಯವಾದ ಗೋ ಸಂಪತ್ತಿನ ರಕ್ಷಣೆಗಾಗಿ ಹೈನುಗಾರಿಕೆ ಸಹಿತ ಹೈನುಗಾರಿಕಾ ಉದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗುವುದು. ಕ್ಷೇತ್ರದಲ್ಲಿರುವ ಗೋಶಾಲೆಗಳಿಗೆ ಅನುದಾನ ನೀಡಿ ಸ್ಥಳೀಯ ತಳಿ ಗೋವಿನ ರಕ್ಷಣೆಗೂ ಕಟಿಬದ್ಧತೆಯನ್ನು ತೋರಲಾಗಿದೆ. ಕರಾವಳಿಯ ಗೋ ತಳಿಗಳ ಉಳಿವಿಗೆ ಅದರಲ್ಲೂ ಗಿಡ್ಡ ತಳಿಯ ಸಂರಕ್ಷಣೆಗಾಗಿ ಸರಕಾರಿ ಅನುದಾನದಲ್ಲಿ ಸುಸಜ್ಜಿತ ಗೋಶಾಲೆಯ ನಿರ್ಮಾಣಕ್ಕೆ ಚಿಂತನೆ ನಡೆಸಲಾಗುತ್ತಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳ ತಯಾರಿ ಮಾರುಕಟ್ಟೆಗೂ ಉತ್ತೇಜನ ನೀಡಲಾಗುವುದು.

Read More

Initiatives

ಸ್ವಚ್ಛ ಬೈಂದೂರು

ಕೇಂದ್ರ ಸರಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಸ್ವಚ್ಛ ಭಾರತ್‌ ಯೋಜನೆಯನ್ನು ಮಾದರಿಯಾಗಿ ಇರಿಸಿಕೊಂಡು, ಕ್ಷೇತ್ರದ ನೈರ್ಮಲ್ಯಕ್ಕೂ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೇವಲ ಪೇಟೆ ಪ್ರದೇಶಗಳು ಮಾತ್ರವಲ್ಲದೆ ಹಳ್ಳಿ ಮತ್ತು ಗ್ರಾಮ ಪಂಚಾಯತಿ ಪರಿಧಿಗಳಲ್ಲೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ, ಕಸ ವಿಲೇವಾರಿಗೆ ಆಧುನಿಕ ರೀತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವತ್ತ ಗಮನ ಹರಿಸಲಾಗುತ್ತಿದೆ. ಕರಾವಳಿ ಪ್ರದೇಶವಾದ ಇಲ್ಲಿ ದೇಗುಲ, ಕಡಲ ಕಿನಾರೆ, ಶಾಲಾ ವಠಾರಗಳು ಸಹಿತ ಸ್ಥಳೀಯಾಡಳಿತ ಕೇಂದ್ರಗಳು, ವ್ಯಾಪಾರಿ ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ಶುಚಿತ್ವದ ಬಗ್ಗೆ

Read More

Initiatives

ಮಾದರಿ ಸರಕಾರಿ ಶಾಲೆಗಳು

ಸಕಲ ಮೂಲಭೂತ ಸೌಕರ್ಯಗಳನ್ನು ಕೊಡಮಾಡಿ ಸರಕಾರಿ ಶಾಲೆಗಳಲ್ಲಿ ಆಧುನಿಕ ಶಿಕ್ಷಣಕ್ಕೆ ಆದ್ಯತೆ ನೀಡಲಿದೆ ಬೈಂದೂರು. ಸರಕಾರಿ ಶಾಲೆಗಳನ್ನು ಕನಿಷ್ಠವಾಗಿ ನೋಡದೆ ಗರಿಷ್ಠ ಮಟ್ಟದಲ್ಲಿ ಭೌತಿಕ ಸೌಕರ್ಯಗಳನ್ನು ಕೊಡಮಾಡುವ ಧ್ಯೇಯ ನಮ್ಮದು. ಕನ್ನಡ ಶಾಲೆಗಳನ್ನು ಮೇಲ್ದರ್ಜೆಗೇರಿಸಿ ಕ್ಷೇತ್ರದಲ್ಲಿರುವ ಸರಕಾರಿ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು, ನಿರ್ಮಲ ಪರಿಸರ ಸಹಿತ ಸೂಕ್ತ ಶೌಚಾಲಯದ ವ್ಯವಸ್ಥೆಗಳನ್ನು ಇಲ್ಲಿ ಹಂತ ಹಂತವಾಗಿ ಪೂರೈಸಲಾಗುತ್ತಿದೆ. ಮಕ್ಕಳ ಸರ್ವಾಂಗೀಣ ಶೈಕ್ಷಣಿಕ ಆದ್ಯತೆಗಳನ್ನು ಗಮನದಲ್ಲಿರಿಸಿ ಶಾಲೆಯ ಕ್ರೀಡಾ ಮೈದಾನಗಳ ಅಭಿವೃದ್ಧಿ ಸಹಿತ ಇಲ್ಲಿನ ಗ್ರಂಥಾಲಯ, ಪ್ರಯೋಗಾಲಯಗಳಿಗೆ ಆದ್ಯತೆ

Read More

ಭತ್ತದ ಕೃಷಿ ಉತ್ತೇಜ‌ನಕ್ಕೆ ಸಮಗ್ರ ಅಧ್ಯಯ‌ನ ನಡೆಸಲು ಶಾಸಕ ಗುರುರಾಜ್ ಗಂಟಿಹೊಳೆ ಆಗ್ರಹ
Date : 17/12/2024

ಸೂಕ್ತ ಕ್ರಮದ ಭರವಸೆ ನೀಡಿದ ಸಚಿವ ಚಲುವರಾಯ ಸ್ವಾಮಿ ಬೈಂದೂರು: ಉಡುಪಿ ಜಿಲ್ಲೆಯಲ್ಲಿ

ಉಡುಪಿ ಜಿಲ್ಲೆಯಲ್ಲಿ ಕಲ್ಲು ಕ್ವಾರಿ ಪುನರಾರಂಭಕ್ಕೆ ಶಾಸಕ ಗಂಟಿಹೊಳೆ ಆಗ್ರಹ
Date : 17/12/2024

ಬೈಂದೂರಿನಲ್ಲಿ ಹೋರಾಟದ ಸ್ವರೂಪ ಪಡೆದಿರುವ ಕಲ್ಲುಕ್ವಾರಿ ವಿಚಾರ ವಿಧಾನ ಮಂಡಲದ ಅಧಿವೇಶನದ ನಡುವೆಯೇ

ಇಷ್ಟು ದ್ವೇಷಕಾರುವ ನಿಲುವು ಯಾವ ಸರ್ಕಾರಕ್ಕೂ ಒಳಿತಲ್ಲ
Date : 05/09/2024

ರಾಜ್ಯ ಸರ್ಕಾರದ ನಿರ್ಧಾರವನ್ನು ಕಟುವಾಗಿ ಖಂಡಿಸಿದ ಶಾಸಕ ಗುರುರಾಜ್ ಗಂಟಿಹೊಳೆ ಬೈಂದೂರು :

Classifieds