ಇಂದಿಲ್ಲವಾಗುತ್ತಿರುವ ಸಾಂಪ್ರದಾಯಿಕ ವಸ್ತುಗಳ ನಿರ್ಮಾಣ ಮತ್ತು ಮಾರುಕಟ್ಟೆ ವ್ಯವಸ್ಥೆಯ ಬಗ್ಗೆ ಸೂಕ್ತ ಅಧ್ಯಯನ ನಡೆಸಿ ತೆರೆಮರೆಗೆ ಸರಿಯುತ್ತಿರುವ ಮಣ್ಣಿನ ಪಾತ್ರೆಗಳನ್ನು ಮಾಡುವ ಕುಂಬಾರಿಕೆ, ನೇಯ್ಗೆ, ಕಲಾಕೃತಿಗಳು ಸೇರಿದಂತೆ ಯುವ ಸಮೂಹದ ಆರ್ಥಿಕ ಸ್ಥಿತಿಯನ್ನು, ಮಹಿಳೆಯರ ಗೃಹೋದ್ಯಮವನ್ನು ಉತ್ತೇಜಿಸುವ ಹಲವು ಉಪಕ್ರಮಗಳತ್ತ ಬೆಳಕು ಚೆಲ್ಲಲಾಗುವುದು. ಕೇಂದ್ರ ಸರಕಾರದ ಮುದ್ರಾ ಯೋಜನೆಯಡಿ ಸಣ್ಣ ಮತ್ತು ಮಧ್ಯಮ ಉದ್ಯಮ ಸೇರಿದಂತೆ ಗುಡಿ ಕೈಗಾರಿಕಾ ವಲಯದ ಅಭಿವೃದ್ಧಿಗೆ ಬೇಕಾದ ಎಲ್ಲಾ ಮಾರ್ಗಗಳನ್ನು ಪರಿಶೀಲಿಸಿ, ಮುನ್ನಡೆಸಲಾಗುವುದು.
ಕೇಂದ್ರ ಸರಕಾರವು ಈಗಾಗಲೇ ಗುಡಿ ಕೈಗಾರಿಕೆ ಸಹಿತ ಸಣ್ಣ ಉದ್ಯಮಗಳಿಗೆ ಸಾಕಷ್ಟು ಹಣಕಾಸು ಪ್ರೋತ್ಸಾಹವನ್ನು ನೀಡುತ್ತಿದ್ದು ಇದರ ಬಗ್ಗೆ ಗ್ರಾಮಸ್ಥರು ಮತ್ತು ಆಸಕ್ತರಿಗೆ ಸೂಕ್ತ ರೀತಿಯ ಮಾರ್ಗದರ್ಶನವನ್ನು ನೀಡಲಾಗಲಿದೆ.