ಸ್ವಚ್ಛ ಬೈಂದೂರು


ಕೇಂದ್ರ ಸರಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಸ್ವಚ್ಛ ಭಾರತ್‌ ಯೋಜನೆಯನ್ನು ಮಾದರಿಯಾಗಿ ಇರಿಸಿಕೊಂಡು, ಕ್ಷೇತ್ರದ ನೈರ್ಮಲ್ಯಕ್ಕೂ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೇವಲ ಪೇಟೆ ಪ್ರದೇಶಗಳು ಮಾತ್ರವಲ್ಲದೆ ಹಳ್ಳಿ ಮತ್ತು ಗ್ರಾಮ ಪಂಚಾಯತಿ ಪರಿಧಿಗಳಲ್ಲೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ, ಕಸ ವಿಲೇವಾರಿಗೆ ಆಧುನಿಕ ರೀತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವತ್ತ ಗಮನ ಹರಿಸಲಾಗುತ್ತಿದೆ.

ಕರಾವಳಿ ಪ್ರದೇಶವಾದ ಇಲ್ಲಿ ದೇಗುಲ, ಕಡಲ ಕಿನಾರೆ, ಶಾಲಾ ವಠಾರಗಳು ಸಹಿತ ಸ್ಥಳೀಯಾಡಳಿತ ಕೇಂದ್ರಗಳು, ವ್ಯಾಪಾರಿ ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ಶುಚಿತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಅದಕ್ಕೆ ಅನುಗುಣವಾಗಿ ಕಾರ್ಯಚರಿಸಲಾಗುವುದು. ಸ್ಚಚ್ಛತೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಿ ದೇಶದಲ್ಲೇ ಉತ್ತಮ ನೈರ್ಮಲ್ಯ ಕ್ಷೇತ್ರ ಎಂಬ ಹೆಸರು ಗಿಟ್ಟಿಸಲು ಶ್ರಮ ವಹಿಸಲಾಗುವುದು. ದೇಶದಲ್ಲಿ ಸ್ವಚ್ಛತೆಗೆ ಉತ್ತಮ ಮಾದರಿಯಾದಂತಹ ಮಧ್ಯಪ್ರದೇಶದ ಇಂದೋರ್‌ ರೀತಿಯಲ್ಲಿ ನಮ್ಮ ಕ್ಷೇತ್ರದಲ್ಲೂ ಮಾದರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.