ಒನ್ ವಿಲ್ಲೇಜ್ ಒನ್ ಪ್ರೊಡಕ್ಟ್


ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಮತ್ತು ಯಶಸ್ವಿ ಯೋಜನೆಯಾದ ಒನ್ ಡಿಸ್ಟ್ರಿಕ್ಟ್, ಒನ್ ಪ್ರೊಡಕ್ಟ್ ನಂತೆಯೇ ಬೈಂದೂರು ಕ್ಷೇತ್ರದಲ್ಲಿರುವ ಹಲವು ಗ್ರಾಮಗಳನನು ಗಮನದಲ್ಲಿರಿಸಿ ಒನ್ ವಿಲ್ಲೇಜ್, ಒನ್ ಪ್ರೊಡಕ್ಟ್ ಯೋಜನೆಯನ್ನು ಸ್ಥಳೀಯವಾಗಿ ಅನುಷ್ಠಾನಗೊಳಿಸಲಾಗಿದೆ. ದೇಶದ ಜೀವಾಳವೇ ಗ್ರಾಮವಾಗಿರುವ ಕಾರಣ, ಪ್ರತಿ ಗ್ರಾಮದಲ್ಲೂ ಒಂದೊಂದು ವಿಶೇಷತೆಯಿರುತ್ತದೆ. ಸ್ಥಳೀಯವಾಗಿ ನಿರ್ಮಿತವಾಗುವ ವಸ್ತು, ಪರಿಕರಗಳನ್ನು ಉತ್ತೇಜಿಸುವ ಕಾರಣದಿಂದ ಇಲ್ಲಿನ ಸಾಂಪ್ರಾದಾಯಿಕತೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ವಿಶಿಷ್ಟ ಪರಿಕಲ್ಪನೆಯನ್ನು ಇರಿಸಲಾಗಿದೆ.

ಒನ್ ವಿಲ್ಲೇಜ್, ಒನ್ ಪ್ರೊಡಕ್ಟ್ ಅಡಿಯಲ್ಲಿ ಸ್ಥಳೀಯವಾಗಿರುವ ಗೋ ಉತ್ಪನ್ನಗಳು, ಕರಕುಶಲ ವಸ್ತುಗಳು, ಗ್ರಾಮೋದ್ಯೋಗದ ಅಡಿಯಲ್ಲಿ ಬರುವ ನೇಯ್ಗೆ ಬಟ್ಟೆ ಬರೆಗಳ ಉತ್ಪಾದನೆ ಮತ್ತು ಮಾರುಕಟ್ಟೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.