ಮೆಟ್ಟಿನಹೊಳೆ ಶಾಲೆಯ ನೂತನ ಕೊಠಡಿಗಳ ಕಾಮಗಾರಿಗೆ ಶಂಕುಸ್ಥಾಪನೆ

ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಮೆಟ್ಟಿನಹೊಳೆ ಶಾಲೆಯಲ್ಲಿ ಸಮೃದ್ಧ ಬೈಂದೂರು 300 ಟ್ರೀಸ್ ಯೋಜನೆಯಡಿಯಲ್ಲಿ MRPL ನಿಂದ ಸಿಎಸ್ಆರ್ ನಿಧಿ ರೂಪಾಯಿ 45 ಲಕ್ಷ ಮೂರು ಕೊಠಡಿಗಳಿಗೆ ಮಂಜೂರಾಗಿದ್ದು ಕೊಠಡಿಗಳ ಕಾಮಗಾರಿಯ ಶಂಕುಸ್ಥಾಪನೆಯನ್ನು ಇಂದು ಮಾನ್ಯ ಶಾಸಕರಾದ ಶ್ರೀ ಗುರುರಾಜಶೆಟ್ಟಿ ಗಂಟಿ ಹೊಳೆಯವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಪ್ರೀತಮ್ ಸುಶಾಂತ್ ರೈ ಮಂಗಳೂರು ಶ್ರೀ ಮಹಾಲಿಂಗ ನಾಯ್ಕ ಸದಸ್ಯರು ಶ್ರೀ ಕೊಲ್ಲೂರು ಆಡಳಿತ ವ್ಯವಸ್ಥಾಪನ ಸಮಿತಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ನಾಗೇಶ್ ನಾಯ್ಕ ಉಪಸ್ಥಿತರಿದ್ದರು. ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ಭಾಸ್ಕರ್ ದೇವಾಡಿಗ ಕಾಲ್ತೊಡು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಶ್ರೀ ಚಿಕ್ಕಯ್ಯ ಶೆಟ್ಟಿ ಸದಸ್ಯರಾದ ಶ್ರೀ ಶೇಖರ್ ಶೆಟ್ಟಿ ಶ್ರೀಮತಿ ಶಾರದಾ ಕುಲಾಲ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಚಂದು ಕುಲಾಲ್ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಸೀತಾರಾಮ್ ಕುಲಾಲ್ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಮಂಜುನಾಥ ನಾಯ್ಕ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಉಮಾ ಬಿ ಎನ್ ಹಾಗೂ ಎಲ್ಲಾ ಶಿಕ್ಷಕರು ಅತಿಥಿ ಶಿಕ್ಷಕರು ಹಾಗೂ ಗೌರವ ಶಿಕ್ಷಕರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಪ್ರದೀಪ್ ಶೆಟ್ಟಿ ಕಾರ್ಯದರ್ಶಿ ಶ್ರೀ ಸುರೇಶ್ ಕುಲಾಲ್ ಹಾಗೂ ಎಲ್ಲಾ ಸದಸ್ಯರು ಶ್ರೀ ವಿನಾಯಕ ಮೇರ್ಟ್ ಮುಖ್ಯ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಲ್ತೋಡು, ಈ ಹಿಂದೆ ನಮ್ಮ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ ಮಂಜುನಾಥ್ ದೇವಾಡಿಗ, ಹಾಗೂ ಶ್ರೀಧರ ಜೋಯಿಸರು ಹಾಗೂ ಊರ ನಾಗರಿಕರು ಹಳೆ ವಿದ್ಯಾರ್ಥಿಗಳು ಹಾಜರಿದ್ದರು. ಪ್ರಥಮ ದರ್ಜೆ ಗುತ್ತಿಗೆದಾರರಾದ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ ಲಘು ಉಪಹಾರದ ವ್ಯವಸ್ಥೆ ಮಾಡಿದರು. ಶ್ರೀ ಕರುಣಾಕರ ಶೆಟ್ಟಿ ಅಧ್ಯಕ್ಷರು ಶ್ರೀ ಜೈನ ಜಟ್ಟಿಗೇಶ್ವರ ದೇವಸ್ಥಾನ ಮೆಟ್ಟಿನಹೊಳೆ ಕಾರ್ಯಕ್ರಮ ನಿರ್ವಹಿಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ಪ್ರೀತಮ್ ಸುಶಾಂತ್ ರೈ ರವರನ್ನು ಸನ್ಮಾನಿಸಲಾಯಿತು. ಶಾಲೆಗೆ ಸಂಪರ್ಕಿಸುವ ರಸ್ತೆಗಳ ರಿಪೇರಿಗಾಗಿ ಹಾಗೂ ಶಾಲೆಗೆ ನೀರಿನ ಸೌಕರ್ಯಕ್ಕಾಗಿ ಶಾಸಕರಿಗೆ ಮನವಿ ಸಲ್ಲಿಸಲಾಯಿತು.