ನಮ್ಮ ಬೈಂದೂರಿನ ಯುವಕನ ಸಾಧನೆ ಎಲ್ಲರೂ ಮೆಚ್ಚುವಂತದ್ದು ಹಾಗೂ ಅವರ ಕ್ರೀಡಾ ಸಾಧನೆ ನಮ್ಮ ಊರಿನ ಯುವಕ, ಯುವತಿಯರಿಗೂ ಹಾಗೂ ಪ್ರತಿಭಾವಂತ ಕ್ರೀಡಾ ಪ್ರತಿಭೆಗಳಿಗೆ ಸ್ಫೂರ್ತಿ ಮಣಿಕಾಂತ್ ಹೋಬಳಿದಾರ್.
62ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ನಲ್ಲಿ ಸರ್ವಿಸಸ್ ತಂಡವನ್ನು ಪ್ರತಿನಿಧಿಸಿದ 21 ವರ್ಷದ ಮಣಿಕಾಂತ್ ಹೋಬಳಿದಾರ್ ಬೈಂದೂರು ಇವರು 100 ಮೀಟರ್ ಓಟದ ಸೆಮಿಫೈನಲ್ ಅಲ್ಲಿ ಕೇವಲ 10.23 ಸೆಕೆಂಡ್‌ಗಳಲ್ಲಿ ಓಡಿ ಈ ಮೂಲಕ ರಾಷ್ಟ್ರೀಯ ದಾಖಲೆ ಬರೆದ ಅವರು ಅಗ್ರಸ್ಥಾನದೊಂದಿಗೆ ಫೈನಲ್‌ಗೆ ಏರಿದರು. ಅದರ ಜೊತೆಗೆ ಮಣಿಕಾಂತ್ ಅವರು ಭಾರತದ ವೇಗದ ಓಟಗಾರ 100ಮೀಟರ್ ಓಟದಲ್ಲಿ ರಾಷ್ಟ್ರೀಯ ದಾಖಲೆಯನ್ನು ತಮ್ಮ ಹೆಸರಿಗೆ ದಾಖಲಿಸಿದರು.
ಈ ಹಿಂದೆ 2016 ರಲ್ಲಿ ಒಡಿಶಾದ ಅಮಿಯಾ ಕುಮಾರ್ ಮಲ್ಲಿಕ್ ಅವರು 10.26 ಸೆಕೆಂಡ್‌ಗಳಲ್ಲಿ 100 ಮೀಟರ್ ಓಡಿದ್ದ ಏಳು ವರ್ಷದ ರಾಷ್ಟ್ರೀಯ ದಾಖಲೆಯನ್ನು ಮುರಿದರು.