Blog
Your blog category
ಮಧುಕರಣ್ಣನ ಮಾತಿನಲ್ಲಿ ತುರ್ತುಪರಿಸ್ಥಿತಿಯ ಕರಾಳದಿನ !
ನಮ್ಮ ಕೆಲ ಹಿರಿಯರನ್ನು ಭೇಟಿ ಮಾಡಲು ನಾಯಕರುಗಳು ಊರಿಗೆ ಬರುತ್ತಿದ್ದುದರಿಂದ, ಅವರನ್ನು ಗುಪ್ತವಾಗಿ ಕರೆದುಕೊಂಡುಬರುವ ಮತ್ತು ಬೇರೊಂದು ಊರಿಗೆ ಸುರಕ್ಷಿತವಾಗಿ ಕಳುಹಿಸಿ ಕೊಡುವ ಹೊಣೆಯೂ ನನ್ನದಾಗಿತ್ತು. ಇದೆಲ್ಲವನ್ನು ಯಶಸ್ವಿಯಾಗಿ ಮಾಡುತ್ತಾ ಬರುತ್ತಿದ್ದೆ. ಇದೆಲ್ಲವೂ ಪೊಲೀಸಿನವರಿಗೆ ತಿಳಿಯಿತು. ನನ್ನ ಮೇಲೆ ತೀವ್ರ ನಿಗಾ ಇಡಲು ಶುರು ಮಾಡಿದರು. ನಾನು ಆಗ ಸಿಂಡಿಕೇಟ್ ಬ್ಯಾಂಕ್ನ ಉದ್ಯೋಗಿಯಾಗಿದ್ದೆ. ಆಫೀಸಿನಲ್ಲಿ, ನೆರೆಹೊರೆಯಲ್ಲಿ ಗುಸು ಗುಸು ಸುದ್ಧಿ ಹರಿದಾಡುತ್ತಿತ್ತು. ನ್ಯಾಯಾಲಯದ ತೀರ್ಪು ಇಂದಿರಾಗಾಂಧಿ ವಿರುದ್ಧ ಬಂದಿದ್ದರಿಂದ, ದೇಶದಲ್ಲಿ ಏನೋ ಒಂದು ಕಠಿಣ ನಿರ್ಧಾರ ಕೈಗೊಳ್ಳಲಿದ್ದಾರೆ
ಯೋಧನನ್ನೂ ದೇವರೆಂದು ಪೂಜಿಸುವ ಸಂಸ್ಕೃತಿ ನಮ್ಮದು !
ಭಾರತೀಯ ಸೈನಿಕರು ಈ ಭಾಗದಲ್ಲಿ ಆಪತ್ಕಾಲ ದಲ್ಲಿದ್ದಾಗ, ಬಾಬಾ ಅಲ್ಲಿಗೆ ಬಂದು ರಕ್ಷಿಸಿದ ಹಲವು ಪ್ರತ್ಯಕ್ಷ, ಅಪ್ರತ್ಯಕ್ಷ ಘಟನೆಗಳು ನಡೆದಿವೆ. ಈ ಘಟನೆಗಳು ಬಾಯಿಯಿಂದ ಬಾಯಿಗೆ ಹರಯ, ಸೇನೆಯು ಅವರು ಮರಣಾನಂತರವೂ ಗಡಿಯ ರಕ್ಷಣೆಯಲ್ಲಿ ತೊಡಗಿದ್ದಾರೆ ಎಂಬ ನಂಬಿಕೆಗೆ ಕಾರಣವಾಯಿತು. ಬಾಬಾ ಅವರ ಪವಿತ್ರ ಆತ್ಮವು ನಮ್ಮ ಸೈನ್ಯಕ್ಕೆ ನೆರವಾಗುತ್ತಿದೆ ಎಂಬ ಭಾವಕ್ಕೆ ಧಾರ್ಮಿಕ ರೂಪ, ಗೌರವ ಕೊಟ್ಟು ಅವರ ಗೌರವಾರ್ಥ ಬಾಬಾ ಮಂದಿರ ದೇವಾಲಯವನ್ನು ಭಾರತೀಯ ಸೇನೆಯು ನಾಥುಲಾ ಪಾಸ್ ಹತ್ತಿರ ನಿರ್ಮಿಸಿತು. ನದಿಗಳೂ ಸಹ
ಸಿಕ್ಕಿಂಗೆ 50ರ ಸಂಭ್ರಮ: Act ಈಸ್ಟ್ ನಿಂದ Act ಫಾಸ್ಟ್ ನತ್ತ
ಪೂರ್ವ ಹಿಮಾಲಯಗಳ ಮಡಿಲಲ್ಲಿ ಅಲಂಕರಿಸಲ್ಪಟ್ಟಿರುವ ಸಿಕ್ಕಿಂ, ಭಾರತದಲ್ಲಿನ ಎರಡನೇ ಅತಿ ಸಣ್ಣ ಮತ್ತು ವೈವಿಧ್ಯಮಯ ಪರಿಸರ ಹೊಂದಿರುವ ರಾಜ್ಯ. ಅದ್ಭುತ ನೈಸರ್ಗಿಕ ಸೌಂದರ್ಯ, ಸಂಸ್ಕೃತಿಯ ವೈವಿಧ್ಯತೆ ಹಾಗೂ ಪ್ರಗತಿಪರ ನೀತಿಗಳಿಂದ ಸಿಕ್ಕಿಂ ದೇಶದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಪೂರ್ವ ಹಿಮಾಲಯದ ಮನಮೋಹಕ ಮೋಡಿಗಾರ ಈ ಸಿಕ್ಕಿಂ. ಭಾರತ-ಚೀನಾದ ನಡುವೆ ರಕ್ಷಣಾತ್ಮಕ ವಲಯವಾಗಿ ನಿಂತಿದ್ದು, 333 ವರ್ಷಗಳ ಕಾಲ ರಾಜರ ಆಡಳಿತದ ನಂತರ, ಜನಮತದ ಮೂಲಕ 1975ರಲ್ಲಿ 22ನೇ ರಾಜ್ಯವಾಗಿ ಭಾರತದೊಳಗೆ ವಿಲೀನಗೊಂಡಿತು. ಈ ಬೆಸುಗೆಗೆ
ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದಕ್ಕೆ ಎಣ್ಣೆ: ಇದ್ಯಾವ ಸೀಮೆ ನ್ಯಾಯ ?!
‘ಕ್ರೈಸ್’ನಿಂದ ಬೇರ್ಪಟ್ಟು, 2015-16ರಲ್ಲಿ ಅಲ್ಪಸಂಖ್ಯಾತ ವಸತಿಶಾಲೆಗಳಿಗೆ ಪ್ರತ್ಯೇಕ ನಿರ್ದೇಶನಾಲಯ ರಚನೆಯಾಗಿದೆ. ಆದರೆ, ಇದೇ ‘ಕ್ರೈಸ್’ ಅಡಿಯಲ್ಲಿ ದಶಕಗಳಿಂದ ಪಾಠ ಮಾಡುತ್ತಿರುವ ಎಸ್ಸಿ, ಎಸ್ಟಿ, ಒಬಿಸಿ ಇಲಾಖೆಗಳಿಗೆ ಸೇರಿದ ಉಪನ್ಯಾಸಕರನ್ನು ಮಾತ್ರ ಇನ್ನಿಲ್ಲ ದಂತೆ ಕಡೆಗಣಿಸಲಾಗುತ್ತಿದೆ. ‘ಶಿಕ್ಷಣ ದಲ್ಲಿ ಭೇದಭಾವ ತೋರಬಾರದು ಎಂಬುದನ್ನು ನಮ್ಮ ಸಂವಿಧಾನವೇ ಹೇಳಿದೆ’ ಎಂದು ನಮಗೇ ತಿಳಿಸಿ ಹೇಳುವಂಥ ಶಿಕ್ಷಕರಿಗೇ ಭೇದಭಾವ ಮಾಡುವುದು ಸರಿಯೇ? ರಾಜೇಶ ಮತ್ತು ರಮೇಶ ಇಬ್ಬರೂ ಅಣ್ಣ-ತಮ್ಮಂದಿರು ಇರುತ್ತಾರೆ. ಇಬ್ಬರೂ ಒಂದೇ ವಿದ್ಯಾರ್ಹತೆ ಹೊಂದಿದ್ದು, ಸರಕಾರಿ ಇಲಾಖೆ ಅಡಿಯಲ್ಲಿ ನೌಕರಿಗೆ
ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಘೋಷ್ ಶಂಖನಾದ
ಸಮಸ್ತ ಮಾನವಜಾತಿಯ ಕಲ್ಯಾಣದ ಉದ್ದೇಶವನ್ನಿಟ್ಟುಕೊಂಡು ಸ್ಥಾಪಿತವಾದ ಸನಾತನ ಸಂಸ್ಥೆಯ ರಜತ ಮಹೋತ್ಸವದ ಪ್ರಯುಕ್ತ ಮೇ 17ರಿಂದ 19ರವರೆಗೆ ಐಐಟಿ ಗೋವಾ ಕ್ಯಾಂಪಸ್ ನಲ್ಲಿ ನಡೆದ ‘ಸನಾತನ ರಾಷ್ಟ್ರ ಶಂಖನಾದ’ ಎಂಬ ಕಾರ್ಯಕ್ರಮವನ್ನು ಡಾ.ಜಯಂತ ಬಾಳಾಜಿ ಅಠವಲೆಯವರ 83ನೇ ಜನ್ಮದಿನೋತ್ಸವದ ಸಂದರ್ಭದಲ್ಲಿ ಆಯೋಜಿಸಲಾಗಿತ್ತು. ಜಗತ್ತಿನ ಯಾವುದೇ ಮೂಲೆಯಲ್ಲಿ ಇರುವ, ಹಿಂದೂ ದಂಪತಿಗಳಿಗೆ ಹುಟ್ಟುವ ಮಗು, ಜನನವಾದ ಕೂಡಲೇ ಭಾರತ ದೇಶದ ನಾಗರಿಕನಾಗುತ್ತಾನೆ, ಹಿಂದೂ ಎಂದು ಪರಿಗಣಿಸಲ್ಪಡುತ್ತಾನೆ ಎಂಬ ಕಾನೂನು ತರಬೇಕು ಎನ್ನುತ್ತಾರೆ ಘೋಷ್! ಬಾಂಗ್ಲಾ ಹಿಂದೂಗಳ ರಕ್ಷಣೆಗೆ ಘೋಷ್
ಬೆಳ್ಳಿಹಬ್ಬದ ಸಾರ್ಥಕತೆ ಕಂಡ ಸರಕಾರಿ ಶಿಕ್ಷಣ ಯೋಜನೆ !
ಭಾರತದಲ್ಲಿ ಯೋಜನೆಗಳು ಘೋಷಣೆಯಾಗುವುದು ಸರಕಾರಿ ದಾಖಲೆಗಳಲ್ಲಿ ಇರುವುದಕ್ಕೆ ಮಾತ್ರ ಎಂದು ಜನಸಾಮಾನ್ಯರೂ ಆಡಿಕೊಳ್ಳುವ ಕಾಲದಲ್ಲಿ, ಸದ್ದಿಲ್ಲದೆ ಸಮಾಜದ, ಜನಸಮುದಾಯದ ಜೊತೆಗೆ ಸರಕಾರಿ ಆಡಳಿತ ವಲಯದಲ್ಲೂ ಒಟ್ಟೊಟ್ಟಿಗೆ ಅತ್ಯದ್ಭುತ ಯಶಸ್ಸು ಕಂಡ ಒಂದು ವಿಶಿಷ್ಟ ಶಿಕ್ಷಣ ಯೋಜನೆಯಾಗಿದೆ ಸರ್ವಶಿಕ್ಷಾ ಅಭಿಯಾನ! ಸರ್ವ ಶಿಕ್ಷಾ ಅಭಿಯಾನ (ಎಸ್ಎಸ್ಎ) ಭಾರತ ಸರಕಾರವು ಪ್ರಾರಂಭಿಸಿದ ಪ್ರಮುಖ ಕಾರ್ಯಕ್ರಮ ವಾಗಿದ್ದು, ಭಾರತ ಸಂವಿಧಾನದ ಆಶಯದಂತೆ ಸಮಯಕ್ಕೆ ಅನುಗುಣವಾಗಿ ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕರಣವನ್ನು (ಯುಇಇ) ಸಾಧಿಸಲು ಇದನ್ನು ಪ್ರಾರಂಭಿಸಲಾಯಿತು. ಭಾರತದ ಸಂವಿಧಾನದ 86ನೇ ತಿದ್ದುಪಡಿಯು ಶಿಕ್ಷಣದ
ಲೇಖಕ ರಂಗನಾಥನ್ ಅವರು ಎತ್ತಿದ ಮತ್ತಷ್ಟು ಪ್ರಶ್ನೆಗಳು !
ಕಳೆದ ವಾರ ‘ನ್ಯಾಯಾಂಗ v/s ಶಾಸಕಾಂಗ’ ಎಂಬ ಲೇಖನದಲ್ಲಿ ನ್ಯಾಯಾಂಗ ವ್ಯವಸ್ಥೆ ಮತ್ತು ಕೆಲವರ ಮಿಶ್ರ ಅಭಿಪ್ರಾಯಗಳನ್ನು ಸೂಕ್ಷ್ಮವಾಗಿ ತೆರೆದಿಡುವ ಪ್ರಯತ್ನ ಮಾಡಿದ್ದೆವು. ಇದಕ್ಕೆ ಓದುಗರು, ಹಿತೈಷಿ ಗಳು ವೈಯಕ್ತಿಕವಾಗಿ ಕರೆ ಮಾಡಿ, ವಾಸ್ತವ ಕಟ್ಟಿಕೊಡಲು ಯತ್ನಿಸಿದ್ದೀರಿ ಎಂದರಲ್ಲದೆ, ಇನ್ನೊಂದಿಷ್ಟು ವಿಚಾರಗಳ ಕುರಿತು ಬರೆಯುವಂತೆ ಚರ್ಚಿಸಿ ಲೇಖನಕ್ಕೆ ಸಲಹೆ ನೀಡಿದರು. ಆ ಲೇಖನಕ್ಕೆ ಪೂರಕವಾಗಿ, ಚಿಂತಕ, ಲೇಖಕ ಆನಂದ್ ರಂಗನಾಥನ್ ಅವರು ಎತ್ತಿದ ಕೆಲವು ವಿಚಾರಗಳನ್ನು ಲೇಖಕರ ಗಮನಕ್ಕೆ ತಂದು, ಅವುಗಳ ಬಗ್ಗೆ ವಿಶ್ಲೇಷಿಸುವಂತೆ ಒತ್ತಾಯಿಸಿದ ಕಾರಣ,
ಆಪತ್ಕಾಲದ ನಂಬಿಕೆಯ ಹುಂಡಿ – PM-NRF
ಶಾಸಕರ ಮನೆ, ಕಛೇರಿಯ ಮುಂದೆ ನಿಂತಿರುವ ಜನಸಾಮಾನ್ಯ, ತನ್ನ ಆಪತ್ಕಾಲಕ್ಕೆ, ಅಪಘಾತ ದಂತಹ ಚಿಕಿತ್ಸೆಗೆ ಖಂಡಿತ ಸಹಾಯ ದೊರಕುವುದು ಎಂಬ ನಂಬಿಕೆ ಹೊಂದಿರುತ್ತಾನೆ. ನೂರೆಂಟು ಒತ್ತಡಗಳ ನಡುವೆ ಆ ಜನಪ್ರತಿನಿಧಿಯೂ ಸಹ ಖಂಡಿತವಾಗಿಯೂ ನಿನ್ನ ಸಂಕಷ್ಟ ಸರಿಯಾಗುತ್ತದೆ ಎಂದು ಬೆನ್ನು ತಟ್ಟಿ ಧೈರ್ಯ ಹೇಳುತ್ತಾನೆ. ಹೀಗೆ ಮಾಡುವವರಿಗೂ, ಇದರ ಸಹಾಯ ಪಡೆಯು ವವರಿಗೂ ಒಟ್ಟಿಗೇ ನಂಬಿಕೆ ಮೂಡಿಸಿರುವ ವಿಶಿಷ್ಟ ಯೋಜನೆ ನಮ್ಮ ಪ್ರಧಾನಮಂತ್ರಿ ಪರಿಹಾರನಿಧಿ! ಆರಂಭಿಕ ಕಾಲದಿಂದಲೂ ನಮ್ಮ ಸಮಾಜದಲ್ಲಿ ದೇಗುಲಕ್ಕೆ ಭೇಟಿಕೊಟ್ಟಾಗ ಸಹಜವಾಗಿಯೇ ದಕ್ಷಿಣೆ ರೂಪದಲ್ಲಿ
ಕೊರಗ ಜನಾಂಗದ ಅಭಿವೃದ್ಧಿಗೆ ಮೋದಿ ಸರಕಾರದ ಕಾಳಜಿ !
ಮಾನವ ಜೀವಸಂಕುಲ ಆರಂಭಗೊಂಡದ್ದು ನಾಗರಿಕತೆಯ ಪೋಷಣೆಯಲ್ಲಿ. ಪ್ರಸ್ತುತ ಜಗತ್ತಿನ ಮೂಲ ನಾಗರಿಕತೆ ಇತಿಹಾಸ ಹೊಂದಿರುವ ಏಳು ದೇಶಗಳು ನಮ್ಮ ಸುತ್ತಮುತ್ತಲಿವೆ. ಇವುಗಳಲ್ಲಿ, ಅತ್ಯಂತ ಪುರಾತನವಾದ ಭಾರತದ ನಾಗರಿಕತೆಯೂ ಒಂದು. ಆದಿಮಾನವನಿಂದ ನಾಗರಿಕ ನಾಗುವತ್ತ ಸಾಗಿದ ಮಾನವನ ಜೀವನಪಯಣದಲ್ಲಿ ಕಾಡುಮೇಡುಗಳಲ್ಲಿ, ಬುಡಕಟ್ಟು ಸಮುದಾಯವಾಗಿ, ವಿವಿಧ ಪಂಗಡಗಳ ಮೂಲಕ, ಸಾವಿರಾರು ವರ್ಷಗಳ ಕಾಲ ಜೀವನ ನಡೆಸುತ್ತ ಇಂದಿನ ಆಧುನಿಕತೆಗೆ ತನ್ನನ್ನು ತೆರೆದುಕೊಂಡಿದ್ದಾನೆನ್ನಬಹುದು. ಬಲಾಢ್ಯ ಸಮುದಾಯಗಳಿಗೆ ನೂರಾರು ಕೋಟಿ ಸುರಿಯುವ, ಜಾತಿಗಳ ಅಂಕಿ-ಸಂಖ್ಯೆ ಅರಿಯಲು ಗಣತಿ ನಡೆಸುವ ವಿಭಜನಾ ನೀತಿಗಿಂತ, ಒಂದು
ನ್ಯಾಯಾಗ v/s ಶಾಸಕಾಂಗ: ಅರ್ಥವಾಗದ ಹಿರಿಯರ ಹಿರಿ ಚರ್ಚೆಗಳು !
ಭಾರತೀಯ ಸಂವಿಧಾನದಲ್ಲಿ ‘ಚೆಕ್ ಆಂಡ್ ಬ್ಯಾಲೆ’ ಎಂಬ ವಿಧಾನವಿದ್ದು, ಇದು ಸಂವಿಧಾನದ ಯಾವುದೇ ಅಂಗವು ತನ್ನದೇ ಆದ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳದ ವ್ಯವಸ್ಥೆಯಾಗಿದೆ. ಪರಿಶೀಲನೆಗಳು ಮತ್ತು ಸಮತೋಲನಗಳು ಒಂದು ಅಂಗವು ತುಂಬಾ ಶಕ್ತಿಶಾಲಿಯಾಗದಂತೆ ನೋಡಿ ಕೊಳ್ಳುತ್ತದೆ. ನಮ್ಮ ಸಂವಿಧಾನ ನಿರ್ಮಾತೃಗಳು ಅತ್ಯಂತ ಸ್ಪಷ್ಟವಾಗಿ ಮೂರೂ ಅಂಗಗಳ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಪ್ರತ್ಯೇಕಿಸಿ ನೀಡಿದ್ದಾರೆ. ಭಾರತದಲ್ಲಿ ಸುಪ್ರೀಂ ಕೋರ್ಟ್ ಬಗ್ಗೆ ಗೌರವ ಮತ್ತು ಘನತೆಯನ್ನು ಯಾವ ಮಟ್ಟದಲ್ಲಿ ಕಾಪಾಡಿಕೊಂಡು ಬರುತ್ತಿದ್ದೇವೆಂದರೆ, ಪ್ರಜಾಪ್ರಭುತ್ವದಲ್ಲಿ ಆಧುನಿಕ ಜಗತ್ತಿನ ಯಾವ ದೇಶದಲ್ಲೂ ಇಂಥಾ ದ್ದೊಂದು
