Blog
Your blog category
ಬಂಡುಕೋರರ ಬಿಗಿಮುಷ್ಠಿಯಲ್ಲಿ ಮ್ಯಾನ್ಮಾರ್
ಒಂದು ದೇಶಕ್ಕೆ ಸೇನಾ ವ್ಯವಸ್ಥೆ ಬಹಳ ಮುಖ್ಯ. ಅದು ರಕ್ಷಾಕವಚವಾಗಿರಬೇಕು. ಆದರೆ ಅದೇ ಸೇನೆ ಆಳುವ ಸರಕಾರವನ್ನೇ ದಮನ ಮಾಡಲು ಹೊರಟರೆ, ಆಡಳಿತ ಸರಕಾರದ ವಿರುದ್ಧ ನಿಂತರೆ ದೇಶಕ್ಕೆ ನೇಣಿನ ಕುಣಿಕೆಯಾಗುತ್ತದೆ. ದೇಶದ ರಕ್ಷಣೆಗೆ ಪ್ರತಿಜ್ಞೆ ತೆಗೆದುಕೊಂಡ ಸೈನಿಕರು ತಮ್ಮದೇ ಸರಕಾರದ ವಿರುದ್ಧ ತೊಡೆ ತಟ್ಟಿ ನಿಂತು, ಪ್ರಜೆಗಳ ಹತ್ಯೆಗೆ ಕಾರಣರಾಗುತ್ತಾರೆ ಎಂದರೆ ಅವರ ಪ್ರತಿಜ್ಞೆಗೆ ಏನು ಬೆಲೆ ಕೊಟ್ಟಂತಾಗುತ್ತದೆ? ಇದೀಗ ಮಿಲಿಟರಿ ಆಡಳಿತಕ್ಕೆ ಒಳಪಟ್ಟ ರಾಷ್ಟ್ರಗಳಲ್ಲಿ ಒಂದಾದ, ನಮ್ಮ ನೆರೆಯ ರಾಷ್ಟ್ರ ಮಯನ್ಮಾರ್‌ನಲ್ಲಿ ಮಿಲಿಟರಿ ಬಂಡುಕೋರರ
ಜನಮನದ ಧ್ವನಿ ‘ಎನ್‌ಇಪಿ ಬೇಕು’ ಅಭಿಯಾನ
ಮಕ್ಕಳ ಸರ್ವಾಂಗೀಣ ಪ್ರಗತಿಯಾಗುವ ರೀತಿಯಲ್ಲಿ ಬದಲಾವಣೆಗಳನ್ನು ತರಲು ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ರೂಪಿಸಿದ್ದು, ಇದಕ್ಕಾಗಿ ಕೇಂದ್ರ ಸರಕಾರ ‘ನಿಪುಣ್ ಭಾರತ್’ ಯೋಜನೆಯನ್ನು ಜಾರಿಮಾಡಿದೆ. ವಿದ್ಯಾರ್ಥಿ ತನ್ನ ಜೀವನದ ಗುರಿಯತ್ತ ಹೆಚ್ಚಿನ ಗಮನವನ್ನು ಕೊಡುವಂತೆ ಇಲ್ಲಿ ಅವರನ್ನು ಸಿದ್ದಪಡಿಸಲಾಗುತ್ತದೆ. ಇಂದಿನ ಯುವಜನಾಂಗವೇ ದೇಶದ ಮುಂದಿನ ಭವಿಷ್ಯ. ಅವರನ್ನು ನಾವು ಹೇಗೆ ಸುಶಿಕ್ಷಿತ, ಸುಶೀಲ, ಸೃಜನಶೀಲರನ್ನಾಗಿ ಬೆಳೆಸುತ್ತೇವೆಯೋ ಅಷ್ಟು ನಮ್ಮ ದೇಶ ಸುಭದ್ರವಾಗಿರುತ್ತದೆ. ಇದಕ್ಕೆಲ್ಲ ಭದ್ರಬುನಾದಿ ದೇಶದ ಶಿಕ್ಷಣ ವ್ಯವಸ್ಥೆ, ನಮ್ಮ ಶಿಕ್ಷಣ ವ್ಯವಸ್ಥೆ ಸುಧಾರಣೆ ಆದಾಗಲೇ ನಮ್ಮ ಯುವಪೀಳಿಗೆಯ
ಕರಾವಳಿಯ ಪ್ರಗತಿಗೆ ಸರಕಾರದ ನಿರಾಸಕ್ತಿ
ರಾಜ್ಯದ ಈ ವರ್ಷದ ಆಯವ್ಯಯದಲ್ಲಿ ಕರಾವಳಿ ಭಾಗವನ್ನು ನಿರ್ಲಕ್ಷಿಸಿದಂತೆ ಕಾಣುತ್ತಿದೆ. ರಾಜ್ಯದ ಪ್ರಗತಿಗೆ ಪೂರಕವಾದ ಬಜೆಟ್ ಎಂದು ಹೇಳುತ್ತಾ ಮಾಡಿದ ಎರಡೂ ಮುಕ್ಕಾಲು ಗಂಟೆಗಳಷ್ಟು ಸುದೀರ್ಘ ಭಾಷಣದಲ್ಲಿ ಕರಾವಳಿ ಭಾಗಕ್ಕೆ ಸಂಬಂಧಿಸಿ ಯಾವುದೇ ಮಹತ್ವದ ಯೋಜನೆಗಳಿರಲಿಲ್ಲ. ವಿಶ್ವ ಮೀನುಗಾರಿಕಾ ದಿನವನ್ನು ಮೊನ್ನೆಯಷ್ಟೇ ಎಲ್ಲೆಡೆ ಆಚರಿಸಲಾಗಿದೆ. ಮೀನುಗಾರಿಕೆಯ ಪ್ರಗತಿ, ಮೀನುಗಾರರ ರಕ್ಷಣೆ, ಬಂದರುಗಳ ಅಭಿವೃದ್ಧಿ ಮೊದಲಾದ ಸಂಗತಿಗಳ ಕುರಿತು ಮಾತು, ಚರ್ಚೆ ನಡೆದಿವೆ, ಭರವಸೆಗಳು ಹೊಮ್ಮಿವೆ. ರಾಜ್ಯ ಸರಕಾರವೂ ಮೀನುಗಾರಿಕಾ ದಿನವನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಭರ್ಜರಿಯಾಗಿ ಆಚರಿಸಿದ್ದು,
ಉಚಿತ ಕೊಡುಗೆಗಳ ಪರಿಪಾಠವೇ ಸಂಕಷ್ಟಕ್ಕೆ ಮೂಲ
ಉಚಿತ ಕೊಡುಗೆಗಳ ಸಂಸ್ಕೃತಿಯಿಂದಾಗಿ ಒಂದು ರಾಷ್ಟ್ರವು ಸಾಲದ ಸುಳಿಯಲ್ಲಿ ಸಿಲುಕಿ ಸ್ವಂತ ನಿರ್ಧಾರ ತೆಗೆದು ಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಕಡಿಮೆ ಬಂಡವಾಳ ಹೂಡಿಕೆಯಿಂದಾಗಿ ಮೂಲಸೌಕರ್ಯ ಸೃಷ್ಟಿ, ನಿರ್ವಹಣೆ, ನಿರ್ಮಾಣ ಸಾಮರ್ಥ್ಯ ಮತ್ತು ಮಾನವ ಬಂಡವಾಳದ ಉತ್ಪಾದನೆಯಲ್ಲಿ ಹಿನ್ನಡೆಯುಂಟಾಗುತ್ತದೆ. ಈ ರೀತಿ ಹಿನ್ನಡೆ ಸಾಧಿಸುವ ಮೊದಲೇ ಎಚ್ಚೆತ್ತುಕೊಳ್ಳುವುದು ಉತ್ತಮ. ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ರಾಜಸ್ಥಾನ, ಛತ್ತೀಸ್ ಗಡ, ಮಧ್ಯಪ್ರದೇಶ ತೆಲಂಗಾಣ ಮತ್ತು ಮಿಜೋರಾಂಗಳಲ್ಲಿ ವಿಧಾನಸಭಾ ಚುನಾವಣೆಗೆ ಅಖಾಡ ಸಿದ್ಧವಾಗುತ್ತಿದೆ. ಎಲ್ಲ ಕಡೆ ರಾಜಕೀಯ ಭರ್ಜರಿಯಾಗಿ
ಭಾರತ ವಿಶ್ವ ಗುರು ಆಗುವ ದಿನಗಳಿನ್ನು ದೂರವಿಲ್ಲ
ನವ ಭಾರತ ನಿರ್ಮಾಣದಲ್ಲಿ ವಿಶ್ವ ನಾಯಕ ನರೇಂದ್ರ ಮೋದಿ ಯೋಜನೆಗಳೇ ದೂರದೃಷ್ಟಿ ಆಲೋಚನೆಯುಳ್ಳ ಯೋಜನೆಗಳು. ನವ ಭಾರತ, ವಿಶ್ವ ಗುರು ಭಾರತದ ಕನಸು ಕಂಡಿರುವ ಮೋದಿ ಒಂದೊಂದಾಗಿ ತಮ್ಮ ಕನಸುಗಳನ್ನ ಈಡೇರಿಸುವ ಮುಖಾಂತರ ವಿಶ್ವಕ್ಕೆ ಭಾರತದ ಶಕ್ತಿಯನ್ನು ಪರಿಚಯಿಸಿದ್ದಾರೆ. ಬದಲಾಗುತ್ತಿದೆ ಭಾರತ ಎನ್ನುವ ನೈಜ್ಯ ಚಿತ್ರಣ ಭಾರತದ ಪ್ರತಿಯೊಬ್ಬ ಪ್ರಜೆಗೂ ಅರ್ಥವಾಗುತ್ತಿದೆ.ಇದಕ್ಕೆ ಉತ್ತಮ ಉದಾಹರಣೆಯೇ ಆರ್ಟಿಕಲ್ 370 ರದ್ದುಗೊಳಿಸಿದ್ದು, ಕಾಶ್ಮೀರಕ್ಕೆ ಕಾಂಗ್ರೇಸ್ ಅವಧಿಯಲ್ಲಿ ನೀಡಿದ ವಿಶೇಷ ಸ್ಥಾನಮಾನಗಳನ್ನು ರದ್ದುಗೊಳಿಸಿ ಬದಲಾವಣೆಗೆ ಹೊಸ ಭಾಷ್ಯ ಬರೆದಿದ್ದು ನಮ್ಮೆಲ್ಲರ ಹೆಮ್ಮೆಯ
ರಾಷ್ಟ್ರಪ್ರೇಮಕ್ಕಾಗಿ ನಮ್ಮ ಬೆಂಬಲ, ಭಯೋತ್ಪಾದನೆಗಲ್ಲ
ಈ ಹಿಂದೆ ರಷ್ಯಾ ಹಾಗೂ ಉಕ್ರೇನ್ ಯುದ್ಧವನ್ನು ನಾವು ನೋಡಿದ್ದೇವೆ, ಅದರ ಪರಿಣಾಮವಾಗಿ ಅವೆರಡು ದೇಶಗಳು ಸಾಕಷ್ಟು ಹಿನ್ನಡೆಯನ್ನು ಅನುಭವಿಸುತ್ತಿವೆ. ಆ ಯುದ್ಧದ ಸಂದರ್ಭದ ಸಾವು, ನೋವು, ಆಕ್ರಂದನ ಮನುಕುಲವನ್ನೇ ಬೆಚ್ಚಿ ಬೀಳಿಸುತ್ತಿದೆ. ಜಗತ್ತು ಆ ಯುದ್ಧದ ಭಯಾನಕತೆಯಿಂದ ಇನ್ನೂ ಹೊರಬರುವ ಮೊದಲೇ ಇನ್ನೊಂದು ಘೋರ ಯುದ್ಧ ಮನುಕುಲವನ್ನು ಕಲಕುತ್ತಿದೆ. ಹೌದು, ಅದು ಇಸ್ರೇಲ್ ಹಾಗೂ ಪ್ಯಾಲೆಸ್ಟೆöÊನ್ ಯುದ್ಧ. ಈಗಾಗಲೇ ಸಾಕಷ್ಟು ಜನ ಈ ಯುದ್ಧದ ಪರಿಣಾಮವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಅದೆಷ್ಟೋ ಕಂದಮ್ಮಗಳು ಹಸಿವಿನಿಂದ ಸಾವು ಬದುಕಿನ
ಮೂಲಸೌಕರ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಿ
ಇತ್ತೀಚೆಗಷ್ಟೇ ದೇಶಾದ್ಯಂತ ಗಾಂಧಿ ಜಯಂತಿ ವಿಜೃಂಭಣೆಯಿಂದ ನಡೆದಿದೆ. ಸತ್ಯ, ಅಹಿಂಸೆಗಳಷ್ಟೇ ಸ್ವಚ್ಛತೆಗೂ ಪ್ರಾಮುಖ್ಯ ಕೊಟ್ಟ ಗಾಂಧೀಜಿಯವರ ಆದರ್ಶವನ್ನು ಕೃತಿಮುಖೇನ ಪಾಲಿಸಬೇಕು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ ಯೋಜನೆಯನ್ನು ಜಾರಿಗೆ ತಂದಿದ್ದರು. ಮೊನ್ನೆಯೂ ಮಾನ್ಯ ಪ್ರಧಾನಿಗಳ ಅಪೇಕ್ಷೆಯಂತೆ ದೇಶಾದ್ಯಂತ ‘ಸ್ವಚ್ಛತೆಯೇ ಸೇವೆ’ ಎಂಬ ಘೋಷವಾಕ್ಯದೊಂದಿಗೆ ಸ್ವಚ್ಛತಾ ಅಭಿಯಾನವನ್ನು ನಡೆಸಲಾಯಿತು. ಪ್ರಧಾನಿಯವರ ಎಲ್ಲ ಕರೆಗಳನ್ನು ವಿರೋಧಿಸುವ ಅಥವಾ ನಿರ್ಲಕ್ಷಿಸುವ ಕಾಂಗ್ರೆಸಿಗರು ಮೊನ್ನೆ ಮಾತ್ರ ತಾವೂ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಗಾಂಧೀಜಿಯ ಹೆಸರನ್ನಿಟ್ಟುಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುವ,
ಮಳೆಗಾಲದಲ್ಲೂ ಲೋಡ್ ಶೆಡ್ಡಿಂಗ್ ಪ್ರಾಬ್ಲಮ್!
ಕರ್ನಾಟಕ ರಾಜ್ಯ ಸರ್ಕಾರ ತನ್ನ ಬಿಟ್ಟಿ ಭಾಗ್ಯಗಳನ್ನ ಪೂರೈಸುವ ಆಲೋಚನೆಯಲ್ಲಿ ಜನರ ಮೂಲಭೂತ ಸಮಸ್ಯೆಗಳಿಗೆ ಉತ್ತರಿಸದೆ ಕೈಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿಗೆ ತಲುಪಿದ್ದಾರೆ. ರಾಜ್ಯದ ಜನರ ದುರದೃಷ್ಟವೋ ಅಥವಾ ಕಾಕಥಾಳಿಯೋ ಗೊತ್ತಿಲ್ಲ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಜನ ಬರಗಾಲ ಅನುಭವಿಸಿದ್ದೇ ಹೆಚ್ಚು.ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು,ಉಷ್ಣತೆ ವಾಡಿಕೆಗಿಂತ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ವಿದ್ಯುತ್ ಉತ್ಪಾದನೆ ಕುಂಟಿತವಾದ ಹಿನ್ನೆಲೆ ಈಗಾಗಲೇ ರಾಜ್ಯದಲ್ಲಿ ಅಘೋಷಿತ ಲೋಡ್ ಶೆಡ್ಡಿಂಗ್ ಪ್ರಾರಂಭ ಮಾಡಲಾಗಿದೆ. ಇದರಿಂದ ಸಾರ್ವಜನಿಕರಿಗೆ ರೈತರಿಗೆ ಸಾಕಷ್ಟು
ಸನಾತನ ಧರ್ಮದ ಅಪಮಾನ, ಅವನತಿಗೆ ಆಹ್ವಾನ!
ನಮ್ಮದೇ ಮಣ್ಣಲ್ಲಿ ಹುಟ್ಟಿ ನಮ್ಮ ಸನಾತನ ಧರ್ಮದ ತಳಹದಿಯಲ್ಲಿ ಬೆಳೆದು ಕೊನೆಗೆ ತಮ್ಮ ಧರ್ಮದ ಬಗ್ಗೆಯೇ ಟೀಕೆ ಮಾಡುವ ಪ್ರಚಾರದ ತೆವಲು ಹಿಡಿದ ಸಾಕಷ್ಟು ಮಂದಿಗಳ ಗುಂಪು ನಮ್ಮ ದೇಶದಲ್ಲಿದೆ.ಈ ಗುಂಪಿಗೆ ಹೊಸದೊಂದು ಹೆಸರು ಸೇರ್ಪಡೆಯಾಗಿದ್ದು, ಆ ಹೆಸರೇ ತಮ್ಮ ಅಪ್ಪ ಹಾಗೂ ಅಜ್ಜನ ಹೆಸರಿನಿಂದ ಅಧಿಕಾರಕ್ಕೆ ಬಂದ ಉಪನಿಧಿ ಸ್ಟಾಲಿನ್. ಸನಾತನ ಧರ್ಮ ಒಂದು ಡೇಂಘೀ, ಮಲೇರಿಯಾ ಇದ್ದಂತೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದು, ಕೇವಲ ಹಿಂದೂ ಧರ್ಮಕ್ಕೆ ಮಾತ್ರವಲ್ಲ ಸನಾತನ ಧರ್ಮದ ಮೇಲೆ ನಿಂತಿರುವ