ಫಲಿತಾಂಶಕ್ಕಾಗಿ ಶಿಕ್ಷಣ ಮೌಲ್ಯ ಕಡಿಮೆಯಾಗದಿರಲಿ

ಬೈಂದೂರು ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪೂರ್ವ ಸಿದ್ಧತಾ ಸಭೆಯಲ್ಲಿ ಶಾಸಕ ಗುರುರಾಜ ಗಂಟಿಹೊಳೆ ವಾತನಾಡಿದರು. ಡಿಡಿಪಿಐ ಲೋಕೇಶ್, ಬೈಂದೂರು ಬಿಇಒ ನಾಗೇಶ ಕೆ. ನಾಯ್ಕ, ಕುಂದಾಪುರ ಬಿಇಒ ಶೋಭಾ ಶೆಟ್ಟಿ ಮತ್ತಿತರರಿದ್ದರು.

ಬೈಂದೂರು: ಈಗಾಗಲೇ ಬೈಂದೂರು ವ್ಯಾಪ್ತಿಯ ಕೆಲವು ಶಾಲೆಗಳು ಕಳೆದ ಸಾಲಿನ ಫಲಿತಾಂಶದಲ್ಲಿ ಹಿನ್ನಡೆ ಕಂಡಿದ್ದು, ಅಂತಹ ಶಾಲೆಗಳು ಈ ಸಾಲಿನಲ್ಲಿ ಸುಧಾರಿತ ಕ್ರಮಗಳ ಬಗ್ಗೆ ಚಿಂತನೆ ನಡೆಸಿದ್ದಾರೆ. ಕಳೆದ ಸಾಲಿನಲ್ಲಿ ಕಡಿಮೆ ಶೈಕ್ಷಣಿಕ ಸಾಧನೆ ತೋರಿದ ಶಾಲೆಗಳಲ್ಲಿ ಹೆಚ್ಚಿನ ಫಲಿತಾಂಶ ಕಾಣುವ ಪ್ರಯತ್ನ ವಾಡಬೇಕಾಗಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ಬೈಂದೂರು ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪೂರ್ವ ಸಿದ್ಧತಾ ಸಭೆಯಲ್ಲಿ ವಾತನಾಡಿದರು.
ಪಾಲಕರ, ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಸಮ್ಮಿಳಿತದ ಪ್ರಯತ್ನದಲ್ಲಿ ಪ್ರತಿ ಪ್ರೌಢಶಾಲೆಯೂ ಉತ್ತಮ ಫಲಿತಾಂಶದ ಗುರಿಯೆಡೆಗೆ ಸಾಗಬೇಕು. ಕೇವಲ ಫಲಿತಾಂಶಕ್ಕಾಗಿ ಶಿಕ್ಷಣದ ಮೌಲ್ಯ ಕಡಿಮೆಯಾಗಬಾರದು. ಶಿಕ್ಷಕರ ಸಮಸ್ಯೆಗಳು ಕೂಡ ಮಕ್ಕಳ ಭವಿಷ್ಯಕ್ಕೆ ವಾರಕವಾಗಬಾರದು ಎಂದರು.
ಒಟ್ಟು 20 ಪ್ರೌಢಶಾಲಾ ಮುಖ್ಯಶಿಕ್ಷಕರು, ಸಿಆರ್‌ಪಿ, ಬಿಆರ್‌ಪಿ, ಬಿಆರ್‌ಸಿ ಸಭೆಯಲ್ಲಿದ್ದರು. ಡಿಡಿಪಿಐ ಲೋಕೇಶ್, ಬೈಂದೂರು ಬಿಇಒ ನಾಗೇಶ ಕೆ. ನಾಯ್ಕ, ಕುಂದಾಪುರ ಬಿಇಒ ಶೋಭಾ ಶೆಟ್ಟಿ, ತಾಲೂಕು ಪೌಢಶಾಲಾ ಮುಖ್ಯಶಿಕ್ಷಕರ ಸಂ ಅಧ್ಯಕ್ಷ ಸುರೇಂದ್ರ ಶೆಟ್ಟಿ, ಸಹಶಿಕ್ಷಕರ ಸಂ ಅಧ್ಯಕ್ಷ ಸದಾನಂದ ಶೆಟ್ಟಿ ಇದ್ದರು.