ಇ.ಎಸ್.ಐ ಆರೋಗ್ಯ ವಿಮಾ ಯೋಜನೆಯಡಿ ಜಿಲ್ಲೆಯ ನೋಂದಾಯಿತ ಕಾರ್ಮಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ ಶಾಸಕರು

ಉಡುಪಿ ಜಿಲ್ಲೆಯಲ್ಲಿ ಕೆ.ಎಂ.ಸಿ ಮಣಿಪಾಲ ಆಸ್ಪತ್ರೆಯನ್ನು ಯೋಜನೆಯಡಿಯಲ್ಲಿ ಮುಂದುವರಿಸಲು ಆಗ್ರಹ.

ಇ-ಪೋರ್ಟಲ್ ನಲ್ಲಿ ತಿರಸ್ಕೃತಗೊಂಡ ಎಲ್ಲಾ ಆಸ್ಪತ್ರೆಗಳನ್ನು ಮತ್ತೊಮ್ಮೆ ಪರಿಗಣಿಸುವ ಪ್ರಸ್ತಾವನೆ ಸರಕಾರದ ಹಂತದಲ್ಲಿದೆ ಎಂದ ಕಾರ್ಮಿಕ ಸಚಿವರು.

ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ವಿಧಾನ ಮಂಡಲದ ವಿಶೇಷ ಅಧಿವೇಶನದಲ್ಲಿ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಂಟಿಹೊಳೆಯವರು ರಾಜ್ಯದಲ್ಲಿ ಇತ್ತೀಚಿಗೆ ಇ.ಎಸ್.ಐ ಎಂಪನೆಲ್ಡ್ ಆಸ್ಪತ್ರೆಗಳ ಸಂಖ್ಯೆಯನ್ನು ಕಡಿತ ಗೊಳಿಸಿರುವುದು ಮುಖ್ಯವಾಗಿ ಉಡುಪಿ ಜಿಲ್ಲೆಯಲ್ಲಿರುವ ಕಸ್ತೂರ್ಬಾ ಆಸ್ಪತ್ರೆಯನ್ನು ಇ.ಎಸ್.ಐ ಆರೋಗ್ಯ ಸೇವೆ ನೀಡುವ ಎಂಪನೆಲ್ಡ್ ಆಸ್ಪತ್ರೆಗಳ ಪಟ್ಟಿಯಿಂದ ಕೈ ಬಿಟ್ಟ ಕಾರಣ ಉಡುಪಿ ಜಿಲ್ಲೆ ಸೇರಿದಂತೆ ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಕಾರ್ಮಿಕರು ಮಣಿಪಾಲ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆಗಳನ್ನು ನಿರಂತರವಾಗಿ ಪಡೆಯುತ್ತಿದ್ದು, ಪ್ರಸ್ತುತ ಸದರಿ ಆಸ್ಪತ್ರೆಯನ್ನು ಕೈ ಬಿಟ್ಟಿರುವುದರಿಂದ ಸಾಕಷ್ಟು ಸಮಸ್ಯೆ ಆಗುತ್ತಿರುವುದರಿಂದ ಸದರಿ ಕೆಎಂಸಿ ಆಸ್ಪತ್ರೆಯನ್ನು ಮುಂದುವರಿಸುವಂತೆ ಕೇಳಿರುವ ಚುಕ್ಕೆ ರಹಿತ ಪ್ರಶ್ನೆಗೆ ಉತ್ತರಿಸಿದ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ರವರು ಕಾರ್ಮಿಕರ ರಾಜ್ಯ ಜೀವ ವಿಮಾ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆ ಗಳೊಂದಿಗೆ ಹೊಸದಾಗಿ ಟೆಂಡರ್ ಮೂಲಕ ಒಡಂಬಡಿಕೆ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಇ -ಟೆಂಡರ್ ಪೋರ್ಟಲ್ ನಲ್ಲಿ ಒಂದೇ ಪ್ಯಾನ್ ಕಾರ್ಡ್ ಮೂಲಕ ಹಲವು ಶಾಖೆಗಳಿಗೆ ಅರ್ಜಿ ಸಲ್ಲಿಸಿದ 30 ಆಸ್ಪತ್ರೆಗಳ ಅರ್ಜಿಗಳು ಇ – ಪೋರ್ಟಲ್ ನಲ್ಲಿ ತಿರಸ್ಕೃತ ಗೊಂದಿರುತ್ತದೆ. ಇ -ಪೋರ್ಟಲ್ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ತಿರಸ್ಕೃತಗೊಂಡಿರುವ ಎಲ್ಲಾ ಆಸ್ಪತ್ರೆಗಳ ಪ್ರಕರಣಗಳನ್ನು ಪರಿಗಣಿಸುವ ಪ್ರಸ್ತಾವನೆ ಸರಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ ಎಂದಿದ್ದಾರೆ.

ಅಂಕಿ ಅಂಶಗಳು:

ಪ್ರಸ್ತುತ ರಾಜ್ಯದಲ್ಲಿರುವ ಇ.ಎಸ್.ಐ ಎಂಪಾನೆಲ್ಡ್ ಆಸ್ಪತ್ರೆಗಳ ಸಂಖ್ಯೆ: 116

ಉಡುಪಿ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇರುವ ಇ.ಎಸ್.ಐ ನೋಂದಾಯಿತ ಕಾರ್ಮಿಕರ ಸಂಖ್ಯೆ: ಉಡುಪಿ- 69882, ಶಿವಮೊಗ್ಗ- 71200, ಉತ್ತರ ಕನ್ನಡ- 19745

ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ ಒಳಗೊಂಡಿರುವ ಆಸ್ಪತ್ರೆಗಳ ಸಂಖ್ಯೆ- 7( ಆದರ್ಶ ಆಸ್ಪತ್ರೆ ಉಡುಪಿ, ನ್ಯೂ ಸಿಟಿ ಉಡುಪಿ, ಹೈ ಟೆಕ್ ಮೆಡಿಕೆರ್ ಉಡುಪಿ, ಮಹೇಶ್ ಆಸ್ಪತ್ರೆ ಉಡುಪಿ, ಪ್ರಸಾದ್ ನೇತ್ರಾಲಯ ಉಡುಪಿ, ಡಾ. ಎ. ವಿ ಬಾಳಿಗ ಆಸ್ಪತ್ರೆ ಉಡುಪಿ, ಮಂಜುನಾಥ್ ಆಸ್ಪತ್ರೆ ಕುಂದಾಪುರ.