ಬೈಂದೂರು ತಾಲೂಕಿನ ಅರ್ಹ ಕೃಷಿಕರಿಗೆ ಸವಲತ್ತು ವಿತರಣೆಯಲ್ಲಿ ಬೈಂದೂರು ಶಾಸಕ ಗಂಟಿಹೊಳೆ ಸೂಚನೆ
ಬೈಂದೂರು ತಾಲೂಕು ಕಚೇರಿ ಮುಂಭಾಗದಲ್ಲಿ ಕೃಷಿ ಇಲಾಖೆಯ ಕೇಂದ್ರ ಹಾಗೂ ರಾಜ್ಯ ಪುರಸ್ಕೃತ ಯೋಜನೆಯಡಿ ಬೈಂದೂರು ತಾಲೂಕಿನ ಅರ್ಹ ರೈತರಿಗೆ ವಿವಿಧ ಕೃಷಿ ಯಂತ್ರೋಪಕರಣಗಳನ್ನು ಬೈಂದೂರು ಶಾಸಕರಾದ ಶ್ರೀ ಗುರುರಾಜ್ ಗಂಟಿಹೊಳೆಯವರು ವಿತರಣೆ ಮಾಡಿದರು. ಬಳಿಕ ಮಾತನಾಡಿದ ಶಾಸಕರು ರೈತರು ಶ್ರಮ ಜೀವಿಗಳು, ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ಈಗಲೂ ಕೃಷಿಯನ್ನೇ ನೆಚ್ಚಿ ಕೊಂಡ ಹಲವಾರು ಕುಟುಂಬಗಳು ತಾಲೂಕಿನಲ್ಲಿ ಇದ್ದು, ತಾಲೂಕಿನ ಈ ವರ್ಷ ಮಳೆ ಕೊರತೆ,ಬರ ಪರಿಸ್ಥಿತಿಯ ಹಿನ್ನಲೆಯಲ್ಲಿ ರೈತಾಪಿ ವರ್ಗದ ಕಾಳಜಿಯನ್ನು ಕೃಷಿ ಅಧಿಕಾರಿಗಳು ಮಾಡಬೇಕು ಎಂದರು.ಕೇಂದ್ರ ಸರಕಾರದ ಸನ್ಮಾನ್ಯ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೃಷಿ ಉತ್ತೇಜನಕ್ಕೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ರೈತರು ಇದರ ಪ್ರಯೋಜನ ಪಡೆಯಲು ಹಾಗೂ ಯೋಜನೆಗಳ ಬಗ್ಗೆ ಗ್ರಾಮೀಣ ರೈತರುಗಳಿಗೆ ಸಮರ್ಪಕ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.


ಬೈಂದೂರು ತಾಲೂಕಿನ 3 ಮಂದಿ ರೈತರಿಗೆ ನಾಟಿ ಯಂತ್ರ, 3 ಮಂದಿ ರೈತರಿಗೆ ಪವರ್ ಟಿಲ್ಲರ್, 3 ಮಂದಿ ರೈತರಿಗೆ ಪವರ್ ವೀಡರ್, 3 ಮಂದಿಗೆ ಪವರ್ ಸ್ಪ್ರೇಯರ್ ಸಹಿತ ಒಟ್ಟು 12 ಜನರಿಗೆ ಕೃಷಿ ಯಂತ್ರೋಪಕರಣ ಹಸ್ತಾಂತರ ಮಾಡಲಾಯಿತು.
