ರಾಷ್ಟ್ರಪ್ರೇಮಕ್ಕಾಗಿ ನಮ್ಮ ಬೆಂಬಲ, ಭಯೋತ್ಪಾದನೆಗಲ್ಲ

ಈ ಹಿಂದೆ ರಷ್ಯಾ ಹಾಗೂ ಉಕ್ರೇನ್ ಯುದ್ಧವನ್ನು ನಾವು ನೋಡಿದ್ದೇವೆ, ಅದರ ಪರಿಣಾಮವಾಗಿ ಅವೆರಡು ದೇಶಗಳು ಸಾಕಷ್ಟು ಹಿನ್ನಡೆಯನ್ನು ಅನುಭವಿಸುತ್ತಿವೆ. ಆ ಯುದ್ಧದ ಸಂದರ್ಭದ ಸಾವು, ನೋವು, ಆಕ್ರಂದನ ಮನುಕುಲವನ್ನೇ ಬೆಚ್ಚಿ ಬೀಳಿಸುತ್ತಿದೆ. ಜಗತ್ತು ಆ ಯುದ್ಧದ ಭಯಾನಕತೆಯಿಂದ ಇನ್ನೂ ಹೊರಬರುವ ಮೊದಲೇ ಇನ್ನೊಂದು ಘೋರ ಯುದ್ಧ ಮನುಕುಲವನ್ನು ಕಲಕುತ್ತಿದೆ. ಹೌದು, ಅದು ಇಸ್ರೇಲ್ ಹಾಗೂ ಪ್ಯಾಲೆಸ್ಟೆöÊನ್ ಯುದ್ಧ. ಈಗಾಗಲೇ ಸಾಕಷ್ಟು ಜನ ಈ ಯುದ್ಧದ ಪರಿಣಾಮವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಅದೆಷ್ಟೋ ಕಂದಮ್ಮಗಳು ಹಸಿವಿನಿಂದ ಸಾವು ಬದುಕಿನ ನಡುವೆ ಹೋರಾಡುತ್ತಿವೆ. ಅನೇಕ ಜನರು ತಮ್ಮ ಜೀವ ಉಳಿಸಿಕೊಳ್ಳಲು ಪರದಾಟ ನಡೆಸುತ್ತಿದ್ದಾರೆ. ಇಸ್ರೇಲ್ ಹಾಗೂ ಪ್ಯಾಲೆಸ್ಟೆöÊನ್ ನಡುವಿನ ಈ ಕದನ ವಿಶ್ವಮಟ್ಟದಲ್ಲಿ ಒಂದು ಕರಾಳ ಅಧ್ಯಾಯಕ್ಕೆ ಸಾಕ್ಷಿಯಾಗಿದೆ. ಒಂದು ಮತ್ತು ಎರಡನೇ ಮಹಾಯುದ್ಧಗಳನ್ನು ನೋಡಿ ಸಾಕಷ್ಟು ದೇಶಗಳು ಯುದ್ಧದ ಬಗ್ಗೆ ಯೋಚಿಸುವುದನ್ನು ಬಿಟ್ಟು ಶಾಂತಿಯಿಂದ ಬದುಕುವ ಎನ್ನುವ ಸಂಕಲ್ಪ ಮಾಡಿದ್ದವು. ಆದರೆ ಇಂದು ನಡೆಯುತ್ತಿರುವ ಇಸ್ರೇಲ್-ಪ್ಯಾಲೆಸ್ಟೆöÊನ್ ಯುದ್ಧ ಭಯಾನಕ ವಿಧ್ವಂಸಗಳಿಗೆ ಕಾರಣವಾಗುತ್ತಿದೆ. ಒಂದು ಯುದ್ಧ ಇಡೀ ದೇಶದ ಚಿತ್ರಣವನ್ನೇ ಬದಲಿಸಿಬಿಡುತ್ತದೆ. ದೇಶ ದೇಶಗಳ ನಡುವೆ ಯುದ್ಧ ನಡೆದರೆ ಅಲ್ಲಿ ಬಲಿಯಾಗುವುದು ಅಪಾರ ಸೈನಿಕ ಬಳಗ ಹಾಗೂ ಆ ದೇಶಗಳ ಮುಗ್ಧ ಪ್ರಜೆಗಳು. ಈಗಾಗಲೇ ಅಪಾರ ಸಾವು ನೋವುಗಳಿಗೆ ಇಸ್ರೇಲ್ ಹಾಗೂ ಪ್ಯಾಲೆಸ್ಟೆöÊನ್ ದೇಶಗಳು ಸಾಕ್ಷಿಯಾಗಿವೆ. ಗಾಜಾದಿಂದ ಇಸ್ರೇಲ್ ಮೇಲೆ ಸಾಕಷ್ಟು ರಾಕೆಟ್ ದಾಳಿ ಎಡಬಿಡದೆ ಮುಂದುವರಿದಿದೆ. ಹಮಾಸ್ ಉಗ್ರಗಾಮಿ ಸಂಘಟನೆ ಈಗಾಗಲೇ ೫,೦೦೦ಕ್ಕಿಂತಲೂ ಅಧಿಕ ರಾಕೆಟ್ ದಾಳಿಯನ್ನು ಇಸ್ರೇಲ್ ಮೇಲೆ ಪ್ರಯೋಗ ಮಾಡಿದೆ.

ಇಸ್ರೇಲ್ ಹಾಗೂ ಪ್ಯಾಲೆಸ್ಟೆöÊನ್ ದ್ವೇಷ ನಿನ್ನೆ ಮೊನ್ನೆಯದೇನಲ್ಲ. ಇದಕ್ಕೆ ೨೦೦ ವರ್ಷಗಳ ಇತಿಹಾಸವಿದೆ. ಮೊದಲನೇ ಮಹಾಯುದ್ಧದ ಸಮಯ, ಒಟ್ಟೋಮನ್ ಸಾಮ್ರಾಜ್ಯವನ್ನು ಸೋಲಿಸಿ ತದನಂತರ ಯಹೂದಿ ಅಲ್ಪಸಂಖ್ಯಾತರು ಮತ್ತು ಅರಬ್ ಬಹುಸಂಖ್ಯಾತರು ವಾಸವಾಗಿದ್ದ ಪ್ಯಾಲೆಸ್ಟೈನ್ ಮೇಲೆ ಬ್ರಿಟನ್ ತನ್ನ ಹಿಡಿತವನ್ನು ಸಾಧಿಸಿತು. ಪ್ಯಾಲೆಸ್ಟೈನ್‌ನಲ್ಲಿ ಯಹೂದಿಗಳ ತಾಯ್ನಾಡನ್ನು ರಚಿಸಿಕೊಳ್ಳುವ ಜವಾಬ್ದಾರಿಯೊಂದನ್ನು ಅಂತಾರಾಷ್ಟ್ರೀಯ ಸಮುದಾಯವು ಬ್ರಿಟಿನ್‌ಗೆ ನೀಡಿತು. ೧೯೨೦ ಹಾಗೂ ೧೯೪೦ರ ಸಂದರ್ಭದಲ್ಲಿ ಪ್ಯಾಲೆಸ್ಟೆöÊನ್‌ಗೆ ವಲಸೆ ಬರುವ ಯಹೂದಿಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿತು. ಯುರೋಪಿಯನ್ನರಿಂದ ನಡೆದ ಕಿರುಕುಳದಿಂದ ಯಹೂದಿಗಳು ಯುರೋಪ್‌ನಿಂದ ಪ್ಯಾಲೆಸ್ಟೆöÊನ್‌ಗೆ ವಲಸೆ ಬಂದುಬಿಟ್ಟರು. ಇತ್ತ ೧೯೪೭ರಲ್ಲಿ ಯುನೈಟೆಡ್ ನೇಷನ್ಸ್ ಯಹೂದಿ ಮತ್ತು ಅರಬ್ಬರಿಗೆ ಪ್ರತ್ಯೇಕವಾಗಿ ರಾಜ್ಯಗಳನ್ನು ವಿಂಗಡಣೆ ಮಾಡಲು ಮತಯಾಚನೆ ಪ್ರಾರಂಭ ಮಾಡಿತ್ತು. ಯಹೂದಿ ನಾಯಕತ್ವ ಈ ಯೋಜನೆಯನ್ನು ಸ್ವೀಕರಿಸಿದರೆ, ಅರಬ್ ಪಡೆಗಳು ಈ ಯೋಜನೆಯನ್ನು ತಿರಸ್ಕರಿಸಿಬಿಟ್ಟರು. ೧೯೪೮ರ ಸಂದರ್ಭದಲ್ಲಿ ಯಹೂದಿ ಹಾಗೂ ಅರಬ್‌ರ ಕದನವನ್ನು ಕೊನೆಗೊಳಿಸಲು ಸಾಧ್ಯವಾಗಲಿಲ್ಲ. ಹಾಗೆಯೇ ಯಹೂದಿ ನಾಯಕರು ಇಸ್ರೇಲ್ ಸ್ಥಾಪನೆ ಬಗ್ಗೆ ಘೋಷಣೆ ಮೊಳಗಿಸಿದರು. ಆದರೆ ಈ ಘೋಷಣೆಗೆ ಪ್ಯಾಲೆಸ್ಟೆöÊನ್ ತೀವ್ರ ವಿರೋಧ ವ್ಯಕ್ತಪಡಿಸಿತು, ಅಷ್ಟೇ ಅಲ್ಲದೆ ಯುದ್ಧಕ್ಕೂ ಈ ಸನ್ನಿವೇಶ ನಾಂದಿ ಹಾಡಿತು. ೧೧ ಜುಲೈ ೨೦೦೦ರಂದು ಅಂದಿನ ಯುಎಸ್ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ನೇತೃತ್ವದಲ್ಲಿ ‘ಕ್ಯಾಂಪ್ ಡೇವಿಡ್ ಶೃಂಗಸಭೆ’ಯನ್ನು ಕರೆಯಲಾಯಿತು. ಇಸ್ರೇಲ್ ಪ್ರಧಾನ ಮಂತ್ರಿ ಎಹುದ್ ಬರಾಕ್ ಹಾಗೂ ಪ್ಯಾಲೆಸ್ಟೆöÊನ್ ಪ್ರಾಧಿಕಾರ ಅಧ್ಯಕ್ಷ ಯಾಸರ್ ಅರಾಫತ್ ಮಾತುಕತೆಗೆ ಮುಂದಾದರು. ಈ ಮಾತುಕತೆ ಯಾವುದೇ ಶಾಂತಿ ಸೌಹಾರ್ದತೆಗೆ ಕಾರಣವಾಗದೆ ಮತ್ತೆ ಇಸ್ರೇಲ್ ಹಾಗೂ ಪ್ಯಾಲೆಸ್ಟೆöÊನ್ ಕದನ ಮುಂದುವರಿಯಲು ಕಾರಣವಾಯಿತು. ಅಂದಿನಿಂದ ಪ್ರಾರಂಭವಾದ ಇಸ್ರೇಲ್ ಹಾಗೂ ಪ್ಯಾಲೆಸ್ಟೆöÊನ್ ಕದನ ಇದೀಗ ಮತ್ತೆ ಮರುಜೀವ ಪಡೆದುಕೊಂಡಿದೆ.

ಪ್ಯಾಲೆಸ್ಟೆöÊನ್ ಬಂಡುಕೋರರು ಮಾಡುತ್ತಿರುವ ಹಿಂಸೆ, ದೌರ್ಜನ್ಯಗಳನ್ನ ಕಂಡ ಜನರು ಈಗಾಗಲೇ ಅವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಆದರೆ ಭಾರತದಲ್ಲಿ ಕಾಂಗ್ರೆಸ್ ಪಕ್ಷ ಮಾತ್ರ ಪ್ಯಾಲಿಸ್ಟಿನಿಯನ್ನರ ಪರವಾಗಿ ಮಾತನಾಡಲು ಪ್ರಾರಂಭಿಸಿದೆ. ಈ ಕಾಂಗ್ರೆಸ್ ಪಕ್ಷಕ್ಕೆ ದೇಶದ್ರೋಹಿಗಳೆಲ್ಲರೂ ದೇಶಪ್ರೇಮಿಗಳಾಗಿ ಕಾಣ ಸುವುದು ಇದೇ ಮೊದಲೆನಲ್ಲ. ಎಂದಿನಿಂದಲೂ ದೇಶದ್ರೋಹಿಗಳ ಪೋಷಣೆ ಮಾಡುತ್ತಾ ಬಂದಿರುವ ಕಾಂಗ್ರೆಸ್ ಪಕ್ಷ ಇದೀಗ ಪ್ಯಾಲೆಸ್ಟೆöÊನ್ ಉಗ್ರರಿಗೆ ಬೆಂಬಲ ನೀಡಿರುವುದರಲ್ಲಿ ಆಶ್ಚರ್ಯವೇನಿಲ್ಲ. ಇಸ್ರೇಲ್ ವಿರುದ್ಧ ಸಮರ ಸಾರಲು ಹಮಾಸ್ ಪಡೆಗಳು ವೆಸ್ಟ್ ಬ್ಯಾಂಕ್ ಹಾಗೂ ಅರಬ್ ಹೋರಾಟಗಾರರಿಗೆ ಆಹ್ವಾನ ನೀಡಿವೆ. ಗಾಜಾದಲ್ಲಿ ವಾಸವಾಗಿರುವ ಜನಗಳು ಈಗಾಗಲೇ ನೀರು, ಆಹಾರ ಸಿಗದೇ ಪರದಾಡುವ ಸ್ಥಿತಿಗೆ ತಲುಪಿದ್ದಾರೆ. ಇತ್ತ ಇಸ್ರೇಲ್ ಹಮಾಸ್ ಆಯುಧಗಳನ್ನು ಪಡೆಯದೇ ಇರುವ ಹಾಗೆ ನೋಡಿಕೊಳ್ಳಲು ಗಾಜಾದ ಗಡಿಭಾಗದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದೆ. ಹಮಾಸ್ ತನ್ನ ಕ್ರೂರ ಬುದ್ಧಿಯನ್ನು ಪದೇ ಪದೇ ತೋರಲು ಪ್ರಾರಂಭ ಮಾಡಿದ್ದು, ಯುದ್ಧ ದಿನೇ ದಿನೇ ಉಗ್ರ ಸ್ವರೂಪವನ್ನು ಪಡೆಯುತ್ತಿದೆ. ಯುದ್ಧವು ಭಯಾನಕ ಸ್ವರೂಪ ಪಡೆದಿದ್ದು, ಸಾವಿನ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ಇಸ್ರೇಲ್ ದೇಶವು ಹಿಂದೆಂದೂ ಕಂಡರಿಯದಂಥ ದುರಂತಕ್ಕೆ ಸಾಕ್ಷಿಯಾಗುತ್ತಿದೆ. ಯುದ್ಧದ ಪರಿಣಾಮಗಳು ತೀವ್ರಗೊಳ್ಳುತ್ತಿದ್ದಂತೆ, ಯುದ್ಧಪ್ರದೇಶದಲ್ಲಿರುವ ಜನರು ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳನ್ನು ಹುಡುಕುತ್ತಿದ್ದಾರೆ. ಇಸ್ರೇಲ್ ಮೇಲಿನ ಹಮಾಸ್ ದಾಳಿಗೆ ಇಸ್ರೇಲ್ ದೇಶದ ಶತ್ರುರಾಷ್ಟ್ರ ಇರಾನ್ ಈಗಾಗಲೇ ಸಂಭ್ರಮ ವ್ಯಕ್ತಪಡಿಸಿದೆ. ಮನುಕುಲವೇ ಅಸಹ್ಯ ಪಡುವಂತಹ ಘಟನೆಗಳು ಕಣ್ಣ ಮುಂದೆಯೇ ನಡೆಯುತ್ತಿದ್ದರೂ ಇರಾನ್ ಮಾತ್ರ ತನ್ನ ಆಂತರಿಕ ಲಾಭಕ್ಕಾಗಿ ಉಗ್ರರಿಗೆ ಬೆಂಬಲ ಕೊಡುತ್ತಿದೆ. ಇರಾನ್ ಮುಂದಿನ ದಿನಗಳಲ್ಲಿ ಇದಕ್ಕೆ ಬೆಲೆ ತೆರೆಬೇಕಾಗುವುದು ನಿಸ್ಸಂಶಯ.

ಈ ಪ್ರಮುಖ ಯುದ್ಧಕ್ಕೆ ಸಾಕಷ್ಟು ಕಾರಣಗಳನ್ನು ನೀಡಬಹುದು. ಈ ಹಿಂದೆ ೧೯೬೭ರ ಸಂದರ್ಭದಲ್ಲಿ ಸಿರಿಯಾದ ಬೆಂಬಲ ಪಡೆದ ಪ್ಯಾಲೆಸ್ಟೆöÊನ್ ಗೆರಿಲ್ಲಾ ಪಡೆ ಇಸ್ರೇಲ್ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ಅರಬ್ ರಾಷ್ಟ್ರಗಳು ಬೆಂಬಲ ಸೂಚಿಸಿದ್ದವು. ಇದಕ್ಕೆ ಕೆರಳಿ ಕೆಂಡಾಮಂಡಲವಾದ ಇಸ್ರೇಲ್ ದೊಡ್ಡ ಪ್ರತಿದಾಳಿಯನ್ನು ನಡೆಸಿತ್ತು. ೧೯೬೭ರಲ್ಲಿ ೬ ದಿನಗಳ ಕಾಲ ನಡೆದ ಯುದ್ಧದಲ್ಲಿ ಇಸ್ರೇಲ್ ಪೂರ್ವ ಜೆರುಸೆಲಂ ಹಾಗೂ ವೆಸ್ಟ್ ಬ್ಯಾಂಕ್ ಪ್ರದೇಶಗಳನ್ನು ವಶಕ್ಕೆ ಪಡೆದಿತ್ತು. ಇದೇ ಕಾರಣಕ್ಕೆ ಜೆರುಸೆಲಂ ಅನ್ನು ಪುನಃ ತನ್ನ ವಶಕ್ಕೆ ಪಡೆಯಲೇಬೇಕೆಂದು ಪ್ಯಾಲೆಸ್ಟೆöÊನ್ ಪದೇ ಪದೇ ಇಸ್ರೇಲ್ ಜೊತೆ ಸಂಘರ್ಷ ಮಾಡುತ್ತಲೇ ಇರುತ್ತದೆ. ಈಗಲೂ ಕೂಡ ಇದೇ ವಿಚಾರಕ್ಕೆ ಹಮಾಸ್ ಉಗ್ರರ ಪಡೆ ಇಸ್ರೇಲ್ ಜೊತೆ ಸಮರ ಪ್ರಾರಂಭಿಸಿದೆ. ಇಸ್ರೇಲ್ ಹಾಗೂ ಪ್ಯಾಲೆಸ್ಟೆöÊನ್ ನಡುವಿನ ಯುದ್ಧ ವಿಶ್ವಮಟ್ಟದಲ್ಲಿ ಸಾಕಷ್ಟು ಚಿಂತೆಗೀಡು ಮಾಡಿದೆ. ಭಾರತದೆಲ್ಲೆಡೆ ಮುಸ್ಲಿಮರನ್ನು ಓಲೈಕೆ ಮಾಡುತ್ತಾ ರಾಜಕಾರಣ ಮಾಡುವ ಸೋ ಕಾಲ್ಡ್ ನಾಯಕರು ಇನ್ನಾದರೂ ಮುಸ್ಲಿಮರ ಮತಾಂಧತೆ ಮತ್ತು ಹಿಂಸಾಚಾರವನ್ನು ನೋಡಿ ಬುದ್ಧಿ ಕಲಿಯಬೇಕು. ಈ ಹಿಂದೆ ಅಫ್ಘಾನಿಸ್ತಾನದಲ್ಲಿ ನಡೆದ ಉಗ್ರರ ಅಟ್ಟಹಾಸವನ್ನು ಇಡೀ ಜಗತ್ತು ನೋಡಿದೆ. ತಮ್ಮನ್ನು ಶಾಂತಿದೂತರೆಂದು ಕರೆದುಕೊಂಡು ವಿಶ್ವಕ್ಕೆ ಶಾಂತಿಯ ಪಾಠ ಮಾಡುವವರು ಜಗತ್ತಿನಾದ್ಯಂತ ಭಯೋತ್ಪಾದಕತೆಯನ್ನು ಬಿತ್ತುತ್ತಿರುವುದನ್ನು ಓಲೈಕೆ ರಾಜಕಾರಣ ಅರ್ಥ ಮಾಡಿಕೊಳ್ಳಬೇಕು. ಈಗಾಗಲೇ ಭಾರತ ಸೇರಿದಂತೆ ಅಮೆರಿಕಾ, ಯುಕೆ, ಆಸ್ಟ್ರೇಲಿಯಾ, ಫ್ರಾನ್ಸ್, ನಾರ್ವೆ ಮೊದಲಾದ ದೇಶಗಳು ಇಸ್ರೇಲ್‌ಗೆ ಬೆಂಬಲ ನೀಡಿವೆ. ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲ್‌ನ ಮುಗ್ಧ ಪ್ರಜೆಗಳೊಂದಿಗೆ ನಾವಿದ್ದೇವೆ ಎಂಬ ಭಾವನಾತ್ಮಕ ಸಂದೇಶ ನೀಡಿದ್ದಾರೆ. ಇಸ್ರೇಲ್ ಏನೋ ಶತ್ರುರಾಷ್ಟ್ರಗಳನ್ನು ಸುತ್ತ ಇಟ್ಟುಕೊಂಡು, ದೇಶಪ್ರೇಮ ಎಂಬ ಇಂಧನಮಾತ್ರದಿಂದ ಜಗತ್ತಿಗೆ ಮಾದರಿಯಾಗಿ ಬದುಕುತ್ತಿದೆ. ಅದು ಇಂಥ ದಾಳಿಗಳನ್ನು ಹಿಂದೆ ಸಾಕಷ್ಟು ಬಾರಿ ಕಂಡಿದೆ. ತನ್ನನ್ನು ಕೆಣಕಿದವರಿಗೆ ಮುಟ್ಟಿನೋಡಿಕೊಳ್ಳುವಂಥ ಪಾಠಗಳನ್ನೂ ಕಲಿಸಿದೆ. ಭಯೋತ್ಪಾದಕ ರಾಷ್ಟ್ರಗಳ ನಡುವೆ ಸಾಕಷ್ಟು ಯುದ್ಧಗಳ ಕುಲುಮೆಯಲ್ಲಿ ಬೆಂದು ಗಟ್ಟಿಯಾದ ಇಸ್ರೇಲ್ ಇದೀಗ ಮತ್ತೊಂದು ಸವಾಲಿಗೆ ಎದೆಸೆಟೆದಿದೆ.

ಛಲ ಬಿಡದ ತ್ರಿವಿಕ್ರಮ ಬುದ್ಧಿಯ ಇಸ್ರೇಲ್ ಈ ಯುದ್ಧದಲ್ಲೂ ಗೆಲುವು ಸಾಧಿಸುವುದರಲ್ಲಿ ಸಂಶಯವಿಲ್ಲ. ಆದರೆ ಇಸ್ರೆಲ್‌ನ ಇಂದಿನ ಪರಿಸ್ಥಿತಿ ಹದಗೆಟ್ಟಿದೆ. ಜನರ ಸಾವು-ನೋವು, ಆಕ್ರಂದನ ಮುಗಿಲು ಮುಟ್ಟಿದೆ. ಇಡೀ ದೇಶ ಬಾಂಬ್ ದಾಳಿಗೆ ಸಿಲುಕಿ ಕರಕಲಾಗುತ್ತಿದೆ. ಅಲ್ಲಿನ ಹೃದಯ ವಿದ್ರಾವಕ ಸನ್ನಿವೇಶಗಳು ಜಗತ್ತಿನ ನಾಗರಿಕ ಸಮಾಜವನ್ನು ಕಲಕಿವೆ. ಉದ್ಯೋಗವನ್ನು ಅರಸಿಕೊಂಡು ಇಸ್ರೇಲ್‌ಗೆ ತೆರಳಿದ ಲಕ್ಷಾಂತರ ಭಾರತೀಯರೂ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತ ಜೀವ ಕೈಯಲ್ಲಿ ಹಿಡಿದು ಬದುಕುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರೆಲ್ಲರಿಗೆ ನೈತಿಕ ಸ್ಥೆöÊರ್ಯ ತುಂಬುವ ಕೆಲಸವಾಗಬೇಕು. ಕೇವಲ ಭಾರತೀಯರಿಗಷ್ಟೇ ಅಲ್ಲದೆ ಇಡೀ ಇಸ್ರೇಲ್ ದೇಶದ ಅಮಾಯಕ ಪ್ರಜೆಗಳ ಉಳಿವಿಗಾಗಿ ನಮ್ಮ ಪ್ರಾರ್ಥನೆಗಳು ಸಲ್ಲಬೇಕು. ರಾಜಕಾರಣವನ್ನು ಬದಿಗಿಟ್ಟು ಎಲ್ಲ ನಾಯಕರೂ ಒಟ್ಟಾಗಿ ಮುಗ್ಧ ಜನರ ಹಿತರಕ್ಷಣೆಯತ್ತ ಗಮನ ಹರಿಸಬೇಕು. ಈಗಾಗಲೇ ಇಸ್ರೇಲ್‌ನಲ್ಲಿ ವಾಸವಾಗಿರುವ ನಮ್ಮ ಬೈಂದೂರು ಕ್ಷೇತ್ರದ ಯುವಕರನ್ನು ಮಾತನಾಡಿಸಿ ಅವರ ಸುರಕ್ಷತಾ ಕ್ರಮಗಳ ಬಗ್ಗೆ ಗಮನ ಹರಿಸಿದ್ದೇವೆ. ಈ ಯುದ್ಧದಲ್ಲಿ ಸಾವು ನೋವಿನ ಪ್ರಕರಣಗಳು ಹೆಚ್ಚಾಗದಿರಲಿ, ಜನಸಾಮಾನ್ಯರು ಆದಷ್ಟು ಬೇಗ ಈ ಯುದ್ಧದಿಂದ ಹೊರಬಂದು ಇಸ್ರೇಲ್ ಮೊದಲಿನಂತಾಗಲಿ ಎಂದು ನಾವೆಲ್ಲರೂ ಹಾರೈಸೋಣ. ನಮ್ಮ ಬೆಂಬಲ ಕೇವಲ ರಾಷ್ಟ್ರಪ್ರೇಮಕ್ಕಾಗಿ, ಭಯೋತ್ಪಾದನೆಗಲ್ಲ ಎಂಬುದನ್ನು ಪುನರುಚ್ಚರಿಸೋಣ.