ಗಂಗೊಳ್ಳಿ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರ ಗೆಲುವಿಗೆ ಸಹಕರಿಸಿದ ಬೈಂದೂರು
ಮಂಡಲದ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಮತದಾರರಿಗೆ ಶಾಸಕ ಗುರುರಾಜ್ ಗಂಟಿಹೊಳೆ ಅಭಿನಂದನೆ ಸಲ್ಲಿಸಿದ್ದಾರೆ.
ಬೈಂದೂರು ಕ್ಷೇತ್ರದಿಂದ 56,789 ಲೀಡ್ ದೊರೆತಿದೆ. ಮತದಾರರನ್ನು ದಿಕ್ಕು ತಪ್ಪಿಸುವ ಕುತಂತ್ರದ ನಡುವೆಯೂ ಸಾಧಿಸಿದ ಈ ಗೆಲುವು ಪ್ರಜಾಪ್ರಭುತ್ವದ ನೈಜ ಗೆಲುವಾಗಿದೆ. ಬಿಜೆಪಿ ಕಾರ್ಯಕರ್ತರ ಹಾಗೂ ಮುಖಂಡರ ಅಹರ್ನಿಶಿ ಹೋರಾಟ ಹಾಗೂ ಪರಿಶ್ರಮ ಫಲ ನೀಡಿದೆ ಎಂದು ಪ್ರ ಕಟಣೆಯಲ್ಲಿ ತಿಳಿಸಿದ್ದಾರೆ.
https://x.com/gantihole/status/1797984230120853984
Courtesy : Vijayavani