ಬೇರೆ ಬೇರೆ ಇಲಾಖೆಗಳ ಯೋಜನೆ, ಸೌಲಭ್ಯ ಜನರಿಗೆ ನೇರವಾಗಿ ತಲುಪಿಸಬೇಕು ಎನ್ನುವ ಉದ್ದೇಶದಿಂದ ಗ್ರಾಪಂ, ಸಂಜೀವಿನಿ ಸಂಘಗಳ ಮೂಲಕ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಪಂ ಮಟ್ಟದಲ್ಲಿ ಗ್ರಾಮೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ಹೊಸಾಡು ಗ್ರಾಪಂ, ಆರೋಗ್ಯ ಇಲಾಖೆ, ಕೃಷಿ ಇಲಾಖೆ, ಅರಣ್ಯ ಇಲಾಖೆ, ಗಂಗೊಳ್ಳಿ ಆರಕ್ಷಕ ಠಾಣೆ, ಪಶು ಸಂಪಗೋನಾ ಮತ್ತು ತೋಟಗಾರಿಕಾ, ಮೆಸ್ಕಾಂ, ಶಿಕ್ಷಣ ಇಲಾಖೆ, ಆಯುಷ್ ಮತ್ತು ಬ್ಯಾಂಕ್, ಹೊಸಾಡು ಸೌಪರ್ಣಿಕಾ ಸಂಜೀವಿನಿ ಗ್ರಾಮಮಟ್ಟದ ಒಕ್ಕೂಟ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಹೊಸಾಡು ಗ್ರಾಪಂ ವಠಾರದಲ್ಲಿ ಸೋಮವಾರ ನಡೆದ ಹೊಸಾಡು ಗ್ರಾಮೋತ್ಸವ-2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೊಸಾಡು ಪಂಚಾಯಿತಿ ಆಡಳಿತಾಧಿಕಾರಿ ಸತ್ಯನಾರಾಯಣ ಜಿ. ಅಧ್ಯಕ್ಷತೆ ವಹಿಸಿದ್ದರು. ಡಾ.ವಿನಿತಾ, ಡಾ.ಸುಲೋಚನಾ, ಸೌಪರ್ಣಿಕಾ ಸಂಜೀವಿನಿ ಒಕ್ಕೂಟ ಹೊಸಾಡು ಅಧ್ಯಕ್ಷೆ ಯಶೋದಾ, ಗಂಗೊಳ್ಳಿ ಠಾಣೆ ಪಿಎಸ್‌ಐ ಪವನ್ ನಾಯ್ಕ, ಹೊಸಾಡು ಗ್ರಾಮ ಆಡಳಿತಾಧಿಕಾರಿ ಮಾಧವ ಕೊಠಾರಿ, ಸೇನಾಪುರ ಗ್ರಾಮ ಆಡಳಿತಾಧಿಕಾರಿ ಅನಿಲ್ ಮೇತ್ರಿ, ಶರತ್ ಕುಮಾರ್ ಶೆಟ್ಟಿ ಬೆಳ್ಳಾಡಿ, ಹೊಸಾಡು ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ ಪೂಜಾರಿ, ಮಾಜಿ ಸದಸ್ಯ ರಮೇಶ್ ಆಚಾರ್ಯ, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಂಜೀವಿನಿ ಸಂಘದ ಸದಸ್ಯರು, ಹೊಸಾಡು ಮತ್ತು ಸೇನಾಪುರ ಗ್ರಾಮದ ಶಾಲೆ, ಅಂಗನವಾಡಿ ಶಾಲೆ ಶಿಕ್ಷಕರು ಉಪಸ್ಥಿತರಿದ್ದರು. ಹೊಸಾಡು ಪಿಡಿಒ ಶೋಭಾ ಸ್ವಾಗತಿಸಿದರು. ಸುಂದರ ಜಿ. ಕಾರ್ಯಕ್ರಮ ನಿರೂಪಿಸಿದರು.
