ಬೈಂದೂರು: ಬೈಂದೂರಿನ ಪ್ರವಾಸೋದ್ಯಮ ಕ್ಷೇತ್ರಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಎಕ್ಸ್‌ಪ್ಲೋರ್ ಬೈಂದೂರು ಎನ್ನುವ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದ್ದು ಇಂದು ಈ ಕಾರ್ಯಕ್ರಮಕ್ಕೆ ವಿಭಿನ್ನ ರೀತಿಯಲ್ಲಿ ಚಾಲನೆ ನೀಡಿದರು.
ಬೈಂದೂರಿನ ಸೋಮೇಶ್ವರ ತೀರದ ನೇರಕ್ಕೆ ಸಮುದ್ರ ಮಧ್ಯದ ನಾಯ್ಕನ ಕಲ್ಲು ಪ್ರದೇಶದ ಬಳಿ ಸಮುದ್ರದಾಳದಲ್ಲಿ ಸ್ಕೂಬಾ ಡೈವಿಂಗ್ ಮೂಲಕ ನೀರಿನಲ್ಲಿ ತೇಲಾಡುತ್ತಾ ಎಕ್ಸ್‌ಪ್ಲೋರ್ ಬೈಂದೂರು ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಮೃದ್ಧ ಬೈಂದೂರು ಎಂಬ ಪರಿಕಲ್ಪನೆಯಡಿಯಲ್ಲಿ ಈ ಕಾರ್ಯಕ್ರಮ ಮೂಡಿ ಬರುತ್ತಿದ್ದು, ಕಾರ್ಯಕ್ರಮದ ಭಾಗವಾಗಿ ವಿವಿಧ ರೀತಿಯ ಸ್ಪರ್ಧೆಗಳನ್ನು ಕೂಡ ಹಮ್ಮಿಕೊಂಡಿದ್ದಾರೆ. ಬೈಂದೂರಿನ ಸೌಂದರ್ಯವನ್ನು ಜಾಗತಿಕ ಮಟ್ಟದಲ್ಲಿ ಪಸರಿಸಲು ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ರೀಲ್ಸ್, ಫೋಟೋಗ್ರಫಿ, ಡ್ರೋನ್ ಶೂಟ್, ಲೋಗೋ ಡಿಸೈನ್ ಎಂಬ ಸ್ಪರ್ಧೆಗಳನ್ನು ಆಯೋಜಿಸಿದ್ದು, ಆಕರ್ಷಕ ಬಹುಮಾನ ಕೂಡ ಪ್ರಾಯೋಜಿಸಿದ್ದಾರೆ.
ಎಕ್ಸ್‌ಪ್ಲೋರ್ ಬೈಂದೂರು ಕಾರ್ಯಕ್ರಮದಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶವಿದ್ದು, ಪ್ರವಾಸಾಸಕ್ತರು, ಪ್ರವಾಸೋದ್ಯಮಿಗಳು, ಸಾಮಾಜಿಕ ಜಾಲತಾಣದ ಇನ್‌ಫ್ಲುಯೆನ್ಸರ್‌ಗಳು, ಕ್ಷೇತ್ರದ ಜನತೆ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಮತ್ತು ಹೆಚ್ಚಿನ ಮಾಹಿತಿ ಹಾಗೂ ಸಂಪರ್ಕಕ್ಕಾಗಿ 83102 90427 / 86189 54293 ಸಂಪರ್ಕಿಸಬಹುದು, contest.sb2024@gmail.com ಇ-ಮೇಲ್ ಮೂಲಕವೂ ಮಾಹಿತಿ ಪಡೆದುಕೊಳ್ಳಬಹುದು.
Media Reports
ಎಕ್ಸ್‌ಪ್ಲೋರ್ ಬೈಂದೂರು ಸ್ಪರ್ಧೆಯ ಪೋಸ್ಟರ್ ಸ್ಕೂಬಾ ಡೈವಿಂಗ್ ಮೂಲಕ ಅನಾವರಣ
Byndoor MLA launches ‘Explore Byndoor’ initiative mid-sea to attract tourists
ಎಕ್ಸ್‌ಪ್ಲೋರ್ ಬೈಂದೂರು ಕಾರ್ಯಕ್ರಮಕ್ಕೆ ಸಮುದ್ರದ ಮಧ್ಯೆ ಚಾಲನೆ
ಸ್ಕೂಬಾ ಡೈವಿಂಗ್ ಮೂಲಕ ಎಕ್ಸ್‌ಪ್ಲೋರ್ ಬೈಂದೂರು ಕಾರ್ಯಕ್ರಮಕ್ಕೆ ಶಾಸಕ ಗಂಟಿಹೊಳೆ ಚಾಲನೆ
ಸೋಮೇಶ್ವರ ಕಡಲ ಕಿನಾರೆಯಲ್ಲಿ ಸ್ಕೂಬಾ