ಕೇಂದ್ರ ಸಚಿವರಾದ ಶ್ರೀ ಭುಪೇಂದ್ರ ಯಾದವ್‌ ಅವರನ್ನು ಭೇಟಿಯಾದ ಶಾಸಕ ಗುರುರಾಜ್‌ ಗಂಟಿಹೊಳೆ

ಸಮೃದ್ಧ ಬೈಂದೂರು ಈ ಕಲ್ಪನೆಯನ್ನು ಸಾಕಾರಗೊಳಿಸಲೆಂದು ನಮ್ಮ ನೆಚ್ಚಿನ ಶಾಸಕರಾದ ಶ್ರೀ ಗುರುರಾಜ್‌ ಗಂಟಿಹೊಳೆ ಅವರು ಇಂದು ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯ ಮತ್ತು ಕೇಂದ್ರ ಪ್ರಾಕೃತಿಕ ಸಚಿವರಾದ ಶ್ರೀ ಭುಪೇಂದ್ರ ಯಾದವ್ ಅವರನ್ನು ನಮ್ಮ ಹೆಮ್ಮೆಯ ಸಂಸದರಾದ ಶ್ರೀ ಬಿ. ವೈ. ರಾಘವೇಂದ್ರ ಮತ್ತು ಮಾಜಿ ಸಚಿವರಾದ ಶ್ರೀ ಅರಗ ಜ್ಞಾನೇಂದ್ರ ಅವರೊಂದಿಗೆ ಶ್ರೀ ಭುಪೇಂದ್ರ ಯಾದವ್‌ ಅವರ ದೆಹಲಿಯ ನಿವಾಸದಲ್ಲಿ ಭೇಟಿ ಮಾಡಿ, ವಿವಿಧ ಯೋಜನೆಗಳು ಮತ್ತು ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಚರ್ಚಿಸಿದರು. ಸಮೃದ್ಧ ಬೈಂದೂರು ಕಲ್ಪನೆಯನ್ನು ವಿವರಿಸಿದರು.