ಕರಾಟೆ ಚಾಂಪಿಯನ್ ಶಿಪ್ : ಶಿಖಾ ಬಿಜೂರು ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಉಪ್ಪುಂದ : ಹುಬ್ಬಳ್ಳಿಯಲ್ಲಿ ಜರುಗಿದ 14ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ವಿಜೇತಳಾದ ಬ್ರಹ್ಮಾವರ ಲಿಟಲ್‌ರಾಕ್ ಇಂಡಿಯನ್ ಸ್ಕೂಲ್‌ನ 6ನೇ ತರಗತಿ ವಿದ್ಯಾರ್ಥಿನಿ ಶಿಖಾ ಬಿಜೂರು ರಾಷ್ಟ್ರ ಮಟ್ಟದ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ.

ಕುಂದಾಪುರದ ಇವೊಲ್ಯೂಷನ್ ಅಕಾಡೆಮಿ ಆಫ್ ಮೆಟೀರಿಯಲ್ ಆರ್ಟ್ಸ್ & ಫಿಟ್‌ನೆಸ್ ಸಂಸ್ಥೆಯಲ್ಲಿ ಗುರು ಗ್ರಷಮೇಶ್ ಕುಂದರ್ ಅವರಲ್ಲಿ ತರಬೇತಿ ಪಡೆಯುತ್ತಿರುವ ಶಿಖಾ ಬಿಜೂರು, ಅಖಿಲ ಕರ್ನಾಟಕ‌ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಆಯೋಜಿಸಿದ ರಾಜ್ಯ ಮಟ್ಟದ ಸ್ವರ್ಧೆಯಲ್ಲಿ 10 ವರ್ಷದೊಳಗಿನ ವೈಯಕ್ತಿಕ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿದ್ದಳು.

ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆಗೈದಿರುವ ಶಿಖಾ, ಶ್ರೀಧರ್ ಬಿಜೂರು ಹಾಗೂ ದೀಪಿಕಾ ಅವರ ಪುತ್ರಿ.