ಉಚಿತ ಕೊಡುಗೆಗಳ ಪರಿಪಾಠವೇ ಸಂಕಷ್ಟಕ್ಕೆ ಮೂಲ


ಉಚಿತ ಕೊಡುಗೆಗಳ ಸಂಸ್ಕೃತಿಯಿಂದಾಗಿ ಒಂದು ರಾಷ್ಟ್ರವು ಸಾಲದ ಸುಳಿಯಲ್ಲಿ ಸಿಲುಕಿ ಸ್ವಂತ ನಿರ್ಧಾರ ತೆಗೆದು ಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಕಡಿಮೆ ಬಂಡವಾಳ ಹೂಡಿಕೆಯಿಂದಾಗಿ ಮೂಲಸೌಕರ್ಯ ಸೃಷ್ಟಿ, ನಿರ್ವಹಣೆ, ನಿರ್ಮಾಣ ಸಾಮರ್ಥ್ಯ ಮತ್ತು ಮಾನವ ಬಂಡವಾಳದ ಉತ್ಪಾದನೆಯಲ್ಲಿ ಹಿನ್ನಡೆಯುಂಟಾಗುತ್ತದೆ. ಈ ರೀತಿ ಹಿನ್ನಡೆ ಸಾಧಿಸುವ ಮೊದಲೇ ಎಚ್ಚೆತ್ತುಕೊಳ್ಳುವುದು ಉತ್ತಮ.

ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ರಾಜಸ್ಥಾನ, ಛತ್ತೀಸ್ ಗಡ, ಮಧ್ಯಪ್ರದೇಶ ತೆಲಂಗಾಣ ಮತ್ತು ಮಿಜೋರಾಂಗಳಲ್ಲಿ ವಿಧಾನಸಭಾ ಚುನಾವಣೆಗೆ ಅಖಾಡ ಸಿದ್ಧವಾಗುತ್ತಿದೆ. ಎಲ್ಲ ಕಡೆ ರಾಜಕೀಯ ಭರ್ಜರಿಯಾಗಿ ಪ್ರಚಾರ ನಡೆಸುತ್ತಿದ್ದು, ಅನೇಕ ಉಚಿತ ಸೌಲಭ್ಯಗಳ ಘೋಷಣೆ ಮಾಡಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ೫ ಗ್ಯಾರಂಟಿ ಗಳ ಘೋಷಣೆಯಿಂದ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿತು.

ಕರ್ನಾಟಕದ ಉಚಿತ ಗ್ಯಾರಂಟಿಗಳ ಮಾದರಿಯಿಂದ ಪ್ರೇರಣೆ ಪಡೆದು ರಾಜಸ್ಥಾನದ ಕಾಂಗ್ರೆಸ್ ಸರಕಾರವು ಕೂಡಲೇ ಜಾರಿಗೆ ಬರುವಂತೆ ೧೦೦ ಯುನಿಟ್ ಗಳವರೆಗೆ ಉಚಿತ ವಿದ್ಯುತ್‌ ನೀಡುವುದಾಗಿ ಪ್ರಕಟ ಮಾಡಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ವಸತಿರಹಿತರಿಗೆ ಮನೆ, ೪,000 ರು. ವೃದ್ಧಾಪ್ಯ ವೇತನ, ಎಲ್ಲ ಮಹಿಳೆಯರಿಗೆ ಮಾಸಿಕ ೨,೫೦೦ ರು., ೫೦೦ ರು. ಗ್ಯಾಸ್‌ ಸಿಲಿಂಡರ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮತ್ತು ರು ೧೦ ಲಕ್ಷ ಆರೋಗ್ಯ ವಿಮೆ ಸೇರಿದಂತೆ ೬ ಭರವಸೆಗಳನ್ನು ಕಾಂಗ್ರೆಸ್ ನಾಯಕ ರಾಹುಲ್ಕಾಂ ಪಟ್ಟಿ ಮಾಡಿದ್ದಾರೆ. ಸಲಂಗಾಣ ಸರಕಾರವು ರು. ೯೯.೯೯ವರೆಗಿನ ಕೃಷಿ ಸಾಲ ಮನ್ನಾವನ್ನು ಘೋಷಿಸಿದೆ. ಕಾಂಗ್ರೆಸ್ ಪಕ್ಷ ಪೋಷಿಸುತ್ತಿರುವ ಉಚಿತಗಳನ್ನು ಗಮನಿಸಿದಲ್ಲಿ ದೇಶದ ಆರ್ಥಿಕತೆ ಮುಂದೊಂದು ದಿನ ಯಾವ ಮಟ್ಟವನ್ನು ತಲುಪಬಹುದು ಎಂಬ ಆತಂಕ ಕಾಡುತ್ತದೆ. ಏಕೆಂದರೆ ಉಚಿತ ಭಾಗ್ಯಗಳು ಅದೆಷ್ಟೋ ಬಡ ಅವರಿಗೆ ಸಹಕಾರಿ ಅಂತ ಅನಿಸಿದರೂ ಅವುಗಳಿಂದ ಸರಕಾರದ ಬೊಕ್ಕಸಕ್ಕೆ ಭಾರಿ ಹೊಡೆತ ಬೀಳುತ್ತದೆ. ಉಚಿತ ಕೊಡುಗೆಗಳು ಕೇವಲ ಮತಗಳನ್ನು ಲೂಟಿಮಾಡುವ ತಂತ್ರವೇ ಹೊರತು ವಾಸ್ತವದಲ್ಲಿ ಅವು ಸರಕಾರಕ್ಕೆ ಆರ್ಥಿಕ ಹೊರೆ ಅಷ್ಟೆ ಏಕೆಂದರೆ ಈಗಾಗಲೇ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ‘ಅಭಿವೃದ್ಧಿ ಕಾರ್ಯಕ್ಕೆ ಸರಕಾರದಲ್ಲಿ ಯಾವುದೇ ಅನುದಾನವಿಲ್ಲ’ ಎಂದಿದ್ದಾರೆ.

ಅಂದರೆ ಆರ್ಥಿಕ ಸಂಕಷ್ಟದತ್ತ ರಾಜ್ಯ ಸಾಗುತ್ತಿದೆ. ಕರ್ನಾಟಕ ಸರಕಾರ ಈಗಾಗಲೇ ಘೋಷಿಸಿರುವ ಗೃಹದ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವ ನಿಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹೆಣಗಾಡುತ್ತಿದೆ. ಈ ವರ್ಷ ಗರಿಷ್ಠ ೬೦,೦೦೦ ಕೋಟಿ ರುಪಾಯಿಗೂ ಅಧಿಕ ಹಣ ಬೇಕಾಗಬಹುದು. ರಾಜ್ಯದ ಒಟ್ಟು ಬಜೆಟ್ ಮೊದೇ ೩೨೦ ಲಕ್ಷ ಕೋಟಿ ರುಪಾಯಿ, ಇದರಲ್ಲಿ ಉಚಿತ ಕೊಡುಗೆಗಳಿಗೆ ಬಜೆಟ್‌ನ ಆರನೇ ಒಂದು ಭಾಗದಷ್ಟು ಹಣ ಬೇಕಾಗಬಹುದು. ಈ ಹಣವನ್ನು ಸರಕಾರ ಹೇಗೆ ಹೊಂದಿನ ಲಿದೆ ಎಂಬುದೇ ಸದ್ಯದ ಪ್ರಶ್ನೆ, ಉಚಿತಗಳ ಹಿಂದೋಡಿದರೆ ರಾಜ್ಯಗಳು ಯಾವಲ್ಲ ಸಂಕಷ್ಟಗಳಿಗೆ ತುತ್ತಾಗಬಹುದು ಎಂಬುದಕ್ಕೆ ಕರ್ನಾಟಕವೇ ಜ್ವಲಂತ ಉದಾಹರಣೆಯಾಗಿ ನಿಂತಿದೆ.

ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಲಭ್ಯವಿರುವ ಮಾಹಿತಿ ಹಾಗೂ ಆರ್ಥಿಕ ಸಮೀಕ್ಷೆಗಳ ಪ್ರಕಾರ ೨೦೨೩ರಲ್ಲಿ ತಮಿಳುನಾಡ ನ್ನು ಪ್ರಸ್ತುತ ಬೆಲೆಗಳಲ್ಲಿ ೨೪.೮ ಲಕ್ಷ ಕೋಟಿ ಜಿಎಸ್‌ಡಿಪಿಯೊಂದಿಗೆ ದಕ್ಷಿಣ ಭಾರತದ ಅತಿದೊಡ್ಡ ಆರ್ಥಿಕತೆಯ ರಾಜ್ಯವೆಂದು ಹೆಸರಿಸಲಾಗಿದೆ, ನಂತರ ಕರ್ನಾಟಕವು ೨೨.೪ ಲಕ್ಷ ಕೋಟಿ, ತೆಲಂಗಾಣ ೧೩.೩ ಲಕ್ಷ ಕೋಟಿ, ಆಂಧ್ರಪ್ರದೇಶ ೧೩ ೨ ಲಕ್ಷ ಕೋಟಿ ಮತ್ತು ಕೇರಳ ೧೦ ಲಕ್ಷ ಕೋಟಿ ಜೆಎಸ್‌ಡಿಪಿ ಹೊಂದಿರುವ ದಕ್ಷಿಣ ಭಾರತದ ಇತರ ಐದು ಪ್ರಮುಖ ರಾಜ್ಯಗಳಾಗಿವೆ.

ದಕ್ಷಿಣ ಭಾರತದ ಐದು ಪ್ರಮುಖ ರಾಜ್ಯಗಳಲ್ಲಿ, ತೆಲಂಗಾಣವು ಶೇ. ೨೫ ೩ರಷ್ಟು ಕಡಿಮೆ ಸಾಲ ಎಸ್‌ಪಿ ಅನುಪಾತವನ್ನು ಹೊಂದಿದೆ, ನಂತರ ಕರ್ನಾಟಕ (ಶೇ ೨೭೫), ತಮಿಳುನಾಡು (ಶೇ.೨೭.೭), ಆಂಧ್ರಪ್ರದೇಶ (ಶೇ.೩೨.೮) ಮತ್ತು ಕೇರಳ: (8.22.5) ಪಟ್ಟಿಯ ಕೆಳಭಾಗದಲ್ಲಿವೆ. ಇತ್ತೀಚೆಗೆ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು ಕರ್ನಾಟಕ ಸರಕಾರದ ಉಚಿತ ಯೋಜನೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸರಕಾರಗಳಿಗೆ ಆರ್ಥಿಕ ಶಿಸ್ತು ಅತಿ ಮುಖ್ಯ ಬೇಜವಾಬ್ದಾರಿಯ ಆರ್ಥಿಕ ನೀತಿಗಳು ಹಾಗೂ ಉಚಿತ ಯೋಜನೆಗಳು ಅಲ್ಪಾವಧಿಯಲ್ಲಿ ಜನಪ್ರಿಯತೆ ತಂದುಕೊಡಬಲ್ಲವೇ ಹೊರತು, ದೀರ್ಘಾವಧಿಯಲ್ಲಿ ದೊಡ್ಡ ಬೆಲೆ ತಿರಬೇಕಾದೀತು ಎಂದು ಎಚ್ಚರಿಸಿದ್ದಾರೆ. ಆರ್ಥಿಕ ನೀತಿ ಸರಿಯಿಲ್ಲದ ಇತರ ದೇಶಗಳು ಮತ್ತು ರಾಜ್ಯಗಳು ಎದುರಿಸುತ್ತಿರುವ ದುದಂತ ಪರಿಸ್ಥಿತಿ ಇಂದು ನಮ್ಮ ಕಣ್ಣಮುಂದಿದೆ. ಭ್ರಷ್ಟಾಚಾರ, ಉಚಿತ ಯೋಜನೆಗಳಿಂದ ಪಂಜಾಬ್ ಸರಕಾರದ ಸಾಲ ಹೆಚ್ಚಾಗುತ್ತಲೇ ಇದೆ, ಆ ರಾಜ್ಯದ ಜಿಡಿಪಿ ಶೇ.೫೦ರಷ್ಟಿದೆ, ಆದರೆ ಆರ್ಥಿಕ ಶಿಸ್ತಿನ ಕೊರತೆಯಿಂದ ಪಂಜಾಬ್ ನಾಲದ ಹೊರೆಯಿಂದ ಬಳಲುತ್ತಿದೆ ಎಂದು ಸಿಧು ಆರೋಪಿಸಿದ್ದಾರೆ.

ಶ್ರೀಲಂಕಾದ ದುರ್ಬಲ ಅರ್ಥಿಕ ನೀತಿಯೇ ಅದರ ಅರಾಜಕತೆಗೆ ಕಾರಣವಾಗಿದ್ದನ್ನು ನೋಡಿದ್ದೇವೆ. ಶ್ರೀಲಂಕಾ ಇಂದು ಸುಮಾರು ೫೦ ಬಿಲಿಯನ್‌ ಡಾಲ‌ಗಿಂತ ಅಧಿಕ ವಿದೇಶಿ ಸಾಲದ ಹೊರೆ ಹೊಂದಿದೆ. ಪಾಕಿಸ್ತಾನ ಈಗಾಗಲೇ ಹಣದುಬ್ಬರದ ಸಮಸ್ಯೆಯನ್ನು ಎದುರಿಸುತ್ತಿದೆ, ಬಾಂಗ್ಲಾದೇಶ ಕೂಡ ಆರ್ಥಿಕ ಕುಸಿತದ ಸನಿಹದಲ್ಲಿದೆ. ವಿಶ್ವಬ್ಯಾಂಕ್‌ನ ೨೦೨೨ರ ವರದಿಯ ಪ್ರಕಾರ, ದೇಶಗಳ ಸಾಲದ ಜಿಡಿಪಿ ಅನುಪಾತವು ೭೭ ಪ್ರತಿಶತಕ್ಕಿಂತ ಹೆಚ್ಚಾದರೆ ಸಂಪನ್ಮೂಲಗಳ ಕೊರತೆ ಮತ್ತು ಅರ್ಥಿಕ ಸಂಕಷ್ಟಗಳಿಗೆ ಈಡಾಗು ತ್ತದೆ, ಜಗತ್ತಿನ ೨೯ ರಾಷ್ಟ್ರಗಳು ಈ ಹಂಸವನ್ನು ದಾಟಿಬಿಟ್ಟಿವೆ. ೭ ರಾಷ್ಟ್ರಗಳು ಈ ಹಂತವನ್ನು ತಲುಪಲು ಹತ್ತಿರದಲ್ಲಿವೆ.

ಜಪಾನ್ ಶೇ.೨೬೬, ಅಮೆರಿಕ ಶೇ.೧೨೮, ಗ್ರೀಸ್ ೫ ೨೦೬, ಇಟಲಿ ಶೇ.೧೫೬ ಜಿಡಿಪಿ ದರಕ್ಕೆ ನಾಲವನ್ನು ಹೊಂದಿವೆ. ಆದರೆ ಅಫ್ಘಾನಿಸ್ತಾನ (ಶೇ.೩೨), ರಷ್ಯಾ (ಶೇ.೧೬೮), ಎಸ್ಟೋನಿಯಾ (ಶೇ.೧೮.೨) ದೇಶಗಳು ಉತ್ತಮವಾಗಿ ಅರ್ಥಿಕ ಸ್ಥಿರತೆಯನ್ನು ಕಾಯ್ದುಕೊಂಡಿವೆ. ಈ ವರದಿಯ ಪ್ರಕಾರ ದಕ್ಷಿಣ ಏಷ್ಯಾದಲ್ಲಿ ಭಾರತವು ಶೇ.೬೯.೬೨ರಷ್ಟು ಹೊಂದುವ ಮೂಲಕ ಸ್ಥಿರವಾದ ಆರ್ಥಿಕತೆಯನ್ನು ಕಾಯ್ದುಕೊಂಡಿದೆ. ಶ್ರೀಲಂಕಾ ಮತ್ತು ಪಾಕಿಸ್ತಾನವು ಕ್ರಮವಾಗಿ ಶೇ.೮೬೬೨ ಮತ್ತು ಶೇ.೮೪.೮೦ ದರವನ್ನು ಹೊಂದುವ ಮೂಲಕ ಅರ್ಥಿಕ ಸಂಕಷ್ಟಕ್ಕೆ ಗುರಿಯಾಗಿವೆ. ಇವೆಲ್ಲ ಭಾರತಕ್ಕೆ ಎಚ್ಚರಿಕೆಯ ಗಂಟೆಯಾಗಿವೆ. ಅಂಬೇಡ್ಕರ್ ಆದಿಯಾಗಿ ಭಾರತದ ಅನೇಕ ಚಿಂತಕರು ಆರ್ಥಿಕತೆ ಒಂದು ದೇಶದ ಬೆಳವಣಿಗೆಯಲ್ಲಿ ಎಷ್ಟು ಮುಖ್ಯ ಪಾತ್ರ ವಹಿಸುತ್ತದೆ ಎಂಬುದನ್ನು ಆಯಾ ಕಾಲಕ್ಕೆ ಅಗತ್ಯವಿದ್ದ ರೀತಿಯಲ್ಲಿ ತಿಳಿಸಿದ್ದಾರೆ. ಸಬಲ ಸಮಾಜದ ಹೆಗ್ಗನಸು ಹೊತ್ತಿದ್ದ ಬಸವಣ್ಣನವರು ಕಾಯಕ ಸಂಸ್ಕೃತಿಯನ್ನು ಪ್ರೋತ್ಸಾಹಿಸಿದ್ದರು. ದುಡಿಮೆ ಮಾತ್ರ ಮನುಷ್ಯನನ್ನು ಸ್ವಾವಲಂಬಿಯಾಗಿಸ ಬಲ್ಲದು ಎಂಬುದನ್ನು ಅರಿತಿದ್ದರು. ಯೋಗ ಉತ್ಪಾದನೆ, ಯೋಗ್ಯ ಬಳಕೆ ಮತ್ತು ಯೋಗ್ಯ ವಿತರಣೆ ಇವು ಮೂರು ಬಸವಣ್ಣ ನವರ ಅರ್ಥಶಾಸ್ತ್ರದ ಪ್ರಮುಖ ಅಂಶಗಳಾಗಿವೆ. ಕಾಯಕವೆಂದರೆ ಯೋಗ್ಯವಾದುದನ್ನೇ ಉತ್ಪಾದಿಸುವ ಕ್ರಿಯೆ. ಯೋಗ್ಯ, ಬಳಕೆ, ಯೋಗ, ವಿತರಣೆಗಳು, ಉತ್ಪಾದಿಸಿದ್ದನ್ನು ಅಗತ್ಯಕಕ್ಕೆ ತಕ್ಕಂತೆ ಬಳಸುವುದನ್ನೂ, ಯೋಗ್ಯರೊಂದಿಗೆ ಹಂಚಿಕೊಂಡು ಬದುಕುವುದನ್ನೂ ಸೂಚಿಸುತ್ತದೆ: ಬಸವಣ್ಣನವರ ದೂರದರ್ಶಿತ್ವದ ಚಿಂತನೆ ಇಂದಿಗೂ ಪ್ರಸ್ತುತ ಭಾರತ ಕಂಡ ಶ್ರೇಷ್ಠ ಅರ್ಥಶಾಸಜ್ಞ ಕೌಟಿಲ್ಯ ಅಂದು ಮಂಡಿಸಿದ ಅರ್ಥನೀತಿ ಇಂದಿಗೂ ಬಹಳ ಪ್ರಸ್ತುತವೆನಿಸುತ್ತದೆ, ರಾಜ ಮತ್ತು ರಾಜನೀತಿ, ಆದಾಯದ ಗಳಿಕೆ, ಭ್ರಷ್ಟಾಚಾರ, ಸರಕಾರಿ ಅಧಿಕಾರಿಗಳ ಲಂಚ ಕೋರನಗಳ ನಿಯಂತ್ರಣ, ಆರೋಗ್ಯ ಸುಧಾರಣೆ, ಶುಚಿತ್ವ ಮತ್ತು ಆಸ್ಪತ್ರೆಯ ಕಟ್ಟಡ ನಿರ್ಮಾಣ ನಿರ್ವಹಣೆಗೆ ಖರ್ಚು ಇವೆಲ್ಲವುಗಳ ಕುರಿತು ಕೌಟಿಲ್ಯ ನಮಗ್ರ ಮಾಹಿತಿಗಳನ್ನು ನೀಡಿದ್ದಾನೆ.

ಆತ ಉಲ್ಲೇಖಿಸುವಂತೆ ಜನತೆಗೆ ಬೇಕಾದ ಮೂಲಸೌಕರ್ಯ ಒದಗಿಸುವುದು ರಾಜನ ಮೊದಲ ಆದ್ಯತೆ. ಜನರ ಪರಮೋಚ್ಚ ನಾಯಕನಾದ ರಾಜನು ಅತಿಯಾಗಿ, ಕ್ರೋಧ, ಪ್ರಲೋಭನೆ ಮತ್ತು ಕಾಮಗಳಿಂದ ಮುಕ್ತನಾಗಿರಬೇಕು. ತನ್ನ ವೈಯಕ್ತಿಕ ಆಸೆ- ಆಕಾಂಕ್ಷೆಗಳನ್ನೂ ಭಯವನ್ನೂ ತ್ಯಜಿಸಿ ಸಂಪೂರ್ಣ ಸಮರ್ಪಣಾ ಭಾವದಿಂದ ಜನರ ಸೇವೆ ಮಾಡಬೇಕು ಎಂದು ಆತ ತಿಳಿಸು ತಾನೆ ಕೌಟಿಲ್ಯನ ಅರ್ಥಶಾಸ್ಪದ ಮೂಲಕ ರಾಜಕೀಯ ಆರ್ಥಿಕತೆಯ ವಿಶ್ಲೇಷಣೆ ಮಾಡುವುದು ಇಂದು ಅಗತ್ಯವೇನೋ ಹೌದು.

ಆದರೆ ಈಗಿನ ರಾಜಕೀಯ ಪಕ್ಷಗಳನ್ನು ನೋಡುವಾಗ ಆಗ ಕೌಟಿಲ್ಯ ಕಂಡ ಪ್ರಜಾರಾಜ, ರಾಜ್ಯದ ನಿರ್ವಹಣೆ ಮತ್ತು ಆಡಳಿತ ರೀತಿಗಳು ಅವನದ್ದೇ ಕನಸಿನ ಭಾರತದಲ್ಲಿ ಮರೆಯಾಗಿಹೋದವೇ? ಎಂದು ಬೇದವಾಗುತ್ತದೆ, ಈ ಪ್ರೀಬಿ ಸಂಸ್ಕೃತಿಯಿಂದಾಗಿ ಒಂದು ರಾಷ್ಟ್ರವು ಸಾಲದ ಸುಳಿಯಲ್ಲಿ ಸಿಲುಕಿ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಕಡಿಮೆ ಬಂದ ವಾಳ ಹೂಡಿಕೆಯಿಂದಾಗಿ ಮೂಲಸೌಕರ್ಯ ಸೃಷ್ಟಿ, ನಿರ್ವಹಣೆ, ನಿರ್ಮಾಣ ಸಾಮರ್ಥ್ಯ ಮತ್ತು ಮಾನವ ಬಂಡವಾಳದ ಉತ್ಪಾದನೆಯಲ್ಲಿ ಹಿನ್ನಡೆಯುಂಟಾಗುತ್ತದೆ, ಈ ರೀತಿ ಹಿನ್ನಡೆ ಸಾಧಿಸುವ ಮೊದಲೇ ಎಚ್ಚೆತ್ತುಕೊಳ್ಳುವುದು ಉತ್ತಮ. ಆದಾಯದ ವೆಚ್ಚ ಮತ್ತು ಬಂಡವಾಳ ವೆಚ್ಚ ಎರಡರಲ್ಲೂ ಸಮತೋಲವನ್ನು ಕಾಯ್ದುಕೊಳ್ಳಬೇಕಾದದ್ದು ಸರಕಾರಗಳ ಮುಂದಿರುವ ಸವಾಲು.

ನಮ್ಮ ದೇಶದ ಪ್ರಧಾನಮಂತ್ರಿಗಳು ದೇಶ ಆರ್ಥಿಕವಾಗಿ ಸದೃಢವಾಗುವಂಥ ಅರ್ಥನೀತಿಗಳನ್ನು ಜಾರಿ ಮಾಡುತ್ತಿದ್ದಾರೆ. ಪ್ರೀಬಿ ಸಂಸ್ಕೃತಿಯಿಂದ ದೇಶವನ್ನು ಮುಕ್ತಗೊಳಿಸುವುದು ಕೂಡ ಆರ್ಥಿಕ ಸಬಲತೆಯ ಒಂದು ಮಾರ್ಗ ಉಚಿತ ಯೋಜನೆಗಳನ್ನು ಅನುಷ್ಠಾನ ಮಾಡುವ ಮೊದಲು ಆ ರಾಜ್ಯಕ್ಕೆ ಆದರ ಅನಿವಾರ್ಯತೆ ಮತ್ತು ಅಗತ್ಯ ಎಷ್ಟು ಎಂಬುದರ ಬಗ್ಗೆ ಸ್ಪಷ್ಟವಾದ ಅರಿವು ಇರಬೇಕಾಗುತ್ತದೆ. ಪ್ರೀಬಿ ಸಂಸ್ಕೃತಿಯೆಂಬ ಹೊನ್ನಶೂಲ ದೇಶವನ್ನು ಆರ್ಥಿಕ ಕುಸಿತಕ್ಕೆ ಒಡ್ಡದಿರಲಿ ಎಂದು ಆಶಿಸೋಣ.