ಗೋ ಕಳ್ಳರ ಬಂಧಿಸದಿದ್ದಲ್ಲಿ ಹೋರಾಟ – ಶಾಸಕ ಗಂಟಿಹೊಳೆ ಎಚ್ಚರಿಕೆ

ಬೈಂದೂರು: ಬೈಂದೂರು ಕ್ಷೇತ್ರದಲ್ಲಿ ಗೋವುಗಳ ಕಳ್ಳತನ, ಅಕ್ರಮ ಸಾಗಾಟ ಹೆಚ್ಚಳವಾಗಿದೆ. ಇತ್ತೀಚಿಗೆ ಶಿರೂರಿನ ಮುಖ್ಯ ಪೇಟೆಯ ಹೋಟೆಲ್ ಮುಂಭಾಗದಲ್ಲಿ ರಾತ್ರಿ ವೇಳೆ ಮಲಗಿದ್ದ ಹಸುಗಳನ್ನು ವಾಹನಕ್ಕೆ ತುಂಬಿಕೊಂಡು ಹೋಗುವುದು ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ. ತಡೆಯಲು ಯತ್ನಿಸಿದವರಿಗೆ ಮಾರಕಾಸ್ತ್ರ ತೋರಿಸಿ ಬೆದರಿಸಲಾಗಿದೆ. ಪೊಲೀಸರು ಕೂಡಲೇ ಗೋ ಕಳ್ಳರ ಬಂಧಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಗುರುರಾಜ ಗಂಟಿಹೊಳೆ ಒತ್ತಾಯಿಸಿದ್ದಾರೆ.

ಗೋ ಕಳ್ಳತನ ಹಾಗೂ ಗೋವುಗಳ ಅಕ್ರಮ ಸಾಗಾಟ ಸಹಿತ ಗೋವುಗಳ ಮೇಲೆ ಹಲ್ಲೆ ಸಹಿಸಲು ಸಾಧ್ಯವೇ ಇಲ್ಲ . ಕಠಿಣ ಕ್ರಮ ಕೈಗೊಳ್ಳದಿದ್ದರೆ ಇಂತಹ ಪ್ರಕರಣಗಳು ಮರುಕಳಿಸುತ್ತಲೇ ಇರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಗೋವುಗಳನ್ನು ರಕ್ಷಿಸುವುದು ನಮ್ಮ ಹೊಣೆ. ಗೋವುಗಳ ಅಕ್ರಮ ಸಾಗಾಟ ಬಂದ್ ಆಗಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ. ಈ ವಿಚಾರವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯುವೆ. ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವತ್ತ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ.

Courtesy : Vijayavani