ತುರ್ತು ರಕ್ತದಾನ ಮಾಡಿದ ಶಾಸಕ ಗುರುರಾಜ್ ಗಂಟೆಹೊಳೆ

ಬೈಂದೂರು : ಶಂಕರನಾರಾಯಣ ಭಾಗದ ಉದಯ್ ಆಚಾರ್ಯ ಎಂಬವರು ಅನಾರೋಗ್ಯ ನಿಮಿತ್ತ ಕುಂದಾಪುರದ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ತುರ್ತಾಗಿ ರಕ್ತದ ಅವಶ್ಯಕತೆ ಇದ್ದು ಬಡ್ ಬ್ಯಾಂಕ್‌ಗಳಲ್ಲಿ ರಕ್ತ ಸಿಗದ ಕಾರಣ ಬೈಂದೂರು ಶಾಸಕ ಗುರುರಾಜ್ ಗಂಟೆಹೊಳೆ ಅವರೇ ಖುದ್ದಾಗಿ ರಾತ್ರಿ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ರಕ್ತ ನೀಡಿದರು.

ಅನಾರೋಗ್ಯ ಪೀಡಿತ ನಮ್ಮ ಕಾರ್ಯಕರ್ತ ಶೀಘ್ರವಾಗಿ ಗುಣಮುಖರಾಗಲಿ ಎಂದು ತಾಯಿ ಮೂಕಾಂಬಿಕೆಯಲ್ಲಿ ಪ್ರಾರ್ಥನೆ ಜೊತೆಗೆ ಬ್ಲಡ್ ಬ್ಯಾಂಕ್‌ನಲ್ಲಿ ರಕ್ತವಿಲ್ಲವಂತೆ ಹೆಚ್ಚಿನ ಸಂಖ್ಯೆಯಲ್ಲಿ ನೀವೆಲ್ಲರು ರಕ್ತದಾನ ಮಾಡಿ, ರಕ್ತವನ್ನು ಶೇಖರಿಸಿ ಇಡುವಲ್ಲಿ ಸಹಕರಿಸಿ. ರಕ್ತದಾನ ಮಾಡಿ ಜೀವ ಉಳಿಸಿ ಎಂದು ಗಂಟೆಹೊಳೆ ಸಾರ್ವಜನಿಕರಿಗೆ ವಿನಂತಿಸಿದ್ದಾರೆ.