News & Events
“ನೆಚ್ಚಿನ ನಾಯಕರಿಗೆ ಮೆಚ್ಚಿದ ಪತ್ರ – ಕಾರ್ಯಕರ್ತನಿಂದ” – ಗುರುರಾಜ್ ಗಂಟಿಹೊಳೆ
ಮೈಸೂರು: ಬೈಂದೂರು ಬಿಜೆಪಿ ಶಾಸಕ ಗುರುರಾಜ್ ಗಂಟಿಹೊಳೆ ತಮ್ಮ ಮೈಸೂರು ಚಲೋ ಯಾತ್ರೆಯ ಅನುಭವನ್ನು “ನೆಚ್ಚಿನ ನಾಯಕರಿಗೆ ಮೆಚ್ಚಿದ ಪತ್ರ – ಕಾರ್ಯಕರ್ತನಿಂದ” ಎನ್ನುವ ಶೀರ್ಷಿಕೆಯ ಮುಖಾಂತರ ಪತ್ರವನ್ನು ಬರೆದು ಹಂಚಿಕೊಂಡಿದ್ದಾರೆ. ನೆಚ್ಚಿನ ನಾಯಕರಿಗೆ ಮೆಚ್ಚಿದ ಪತ್ರ – ಕಾರ್ಯಕರ್ತನಿಂದ. #MysuruChalo #ScamSarkara #ಪಾದಯಾತ್ರೆ pic.twitter.com/wcdVsPK1j5 — Gururaj Gantihole (@gantihole) August 10, 2024 ಶಾಸಕ ಗುರುರಾಜ್ ಗಂಟಿಹೊಳೆ ಸರಳತೆಗೆ ಹೆಸರಾಗಿರುವ ಉಡುಪಿ ಜಿಲ್ಲೆಯ ಶಾಸಕ. ಪಕ್ಷದ ನಾಯಕರು-ಸೇನಾನಿಗಳ ಜೊತೆ ಗಂಟಿಹೊಳೆ ಮೈಸೂರು ಚಲೋ ಪಾದಯಾತ್ರೆಯಲ್ಲಿ
ಬೈಂದೂರಿನ ಸ್ವಾಭಿಮಾನ ತಗ್ಗಿಸುವ ಪ್ರಯತ್ನಗಳನ್ನು ಸಹಿಸಲು ಸಾಧ್ಯವಿಲ್ಲ
ಕೋರ್ಟ್ ಬೇರೆಡೆ ವರ್ಗಾಯಿಸಲು ಬಿಡುವುದಿಲ್ಲ. ಇದಕ್ಕಾಗಿ ಹೋರಾಟಕ್ಕೂ ಸಿದ್ಧ: ಶಾಸಕ ಗುರುರಾಜ್ ಗಂಟಿಹೊಳೆ ಬೈಂದೂರಿನ ಸ್ವಾಭಿಮಾನ ತಗ್ಗಿಸುವ ಯಾವುದೇ ಪ್ರಯತ್ನವನ್ನು ಸಹಿಸಲು ಸಾಧ್ಯವಿಲ್ಲ. ಅಂತಹ ಘಟನೆಗಳು ನಡೆದಲ್ಲಿ ಬೀದಿಗಿಳಿದು ಹೋರಾಟಕ್ಕೂ ಸಿದ್ಧ. ಅಭಿವೃದ್ಧಿಯಲ್ಲಿ ಬೈಂದೂರು ಸದಾ ಮುಂದಿರಬೇಕು ಎಂಬುದು ನಮ್ಮ ಆಶಯ ಎಂದು ಶಾಸಕರಾದ ಗುರುರಾಜ್ ಗಂಟಿಹೊಳೆ ತಿಳಿಸಿದ್ದಾರೆ. ಬೈಂದೂರು ಕೋರ್ಟ್ ಕಟ್ಟಡ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಸಚಿವರೊಂದಿಗೂ ಮತ್ತು ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಬೈಂದೂರು ಎಲ್ಲಾ ಕ್ಷೇತ್ರದಲ್ಲೂ ಅಭಿವೃದ್ಧಿ
ಬೈಂದೂರಿನಲ್ಲಿ “ಮೂಕಾಂಬಿಕಾ ವಿಮಾನ ನಿಲ್ದಾಣ” ಮಂಜೂರಿಗೆ ಮನವಿ
ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈಗಾಗಲೇ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಿಸುವಲ್ಲಿ ಯಶಸ್ವಿಯಾದ ಸಂಸದ ಬಿ.ವೈ.ರಾಘವೇಂದ್ರ ಈಗ ತಮ್ಮ ಕ್ಷೇತ್ರ ವ್ಯಾಪ್ತಿಯ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಂದು ವಿಮಾನ ನಿಲ್ದಾಣ ಮಂಜೂರಾತಿಗಾಗಿ ಮನವಿ ಸಲ್ಲಿಸಿದ್ದಾರೆ. ಹೊಸದಿಲ್ಲಿಯಲ್ಲಿ ಕೇಂದ್ರ ವಿಮಾನಯಾನ ಸಚಿವ ಕಿಂಜರಾಪು ರಾಮ ಮೋಹನ ನಾಯ್ಡುರನ್ನು ಭೇಟಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ವ್ಯಾಪ್ತಿಯ ಒತ್ತಿನೆಣೆಯಲ್ಲಿ “ಮೂಕಾಂಬಿಕಾ ವಿಮಾನ ನಿಲ್ದಾಣ” ಮಂಜೂರು ಮಾಡಲು ಬುಧವಾರ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆಯವರ ಒಡಗೂಡಿ ಮನವಿ ಸಲ್ಲಿಸಿದರು. ಶಿವಮೊಗ್ಗ
ಸಾಗರದಾಚೆಯೂ ಸರ್ಕಾರಿ ಶಾಲೆ ಅಭಿವೃದ್ಧಿ ಚಿಂತನೆ
ಶಾಸಕರಾದ ಗುರುರಾಜ್ ಗಂಟಿಹೊಳೆ ಅವರ ದುಬೈ ಪ್ರವಾಸದಲ್ಲೂ ಕ್ಷೇತ್ರ ಶಾಲೆಗಳ ದತ್ತು ಮಾತುಕತೆ ಬೈಂದೂರು: ಕ್ಷೇತ್ರದ ಜನಪ್ರಿಯ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಸರ್ಕಾರಿ ಶಾಲೆಗಳ ಸೌಲಭ್ಯ ಸುಧಾರಣೆಗೆ ಈಗಾಗಲೇ ಸಮೃದ್ಧ ಬೈಂದೂರು ಪರಿಕಲ್ಪನೆಯಡಿ 300 ಟ್ರೀಸ್ ಕಾರ್ಯಕ್ರಮದ ಮೂಲಕ ಜಿಲ್ಲೆ, ರಾಜ್ಯ, ಹೊರ ರಾಜ್ಯಗಳ ದಾನಿಗಳು, ಸಂಸ್ಥೆಗಳಿಂದ ಕೊಡುಗೆ ಆಹ್ವಾನಿಸುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ಸಾಗರದಾಚೆಗೂ ಸಹಾಯಹಸ್ತ ಕೋರುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಇತ್ತೀಚೆಗೆ ದುಬೈ ಪ್ರವಾಸದ ಸಂದರ್ಭದಲ್ಲಿ ಶಾಸಕರಾಗ ಗುರುರಾಜ್ ಗಂಟಿಹೊಳೆ ಅವರು ಅಲ್ಲಿ
ಚೊಂಬು ಜಾಹೀರಾತು ನೀಡಿ, ಈಗ ರಾಜ್ಯದ ಜನತೆಗೆ ಚೊಂಬು ನೀಡುತ್ತಿರುವುದು ಯಾರು ಎಂಬುದು ಅರ್ಥವಾಗುತ್ತಿದೆ – ಶಾಸಕ ಗಂಟಿಹೊಳೆ
ಬೈಂದೂರು: ಗ್ಯಾರಂಟಿ ಯೋಜನೆಯನ್ನೂ ಸಮರ್ಪಕವಾಗಿ ಅನುಷ್ಠಾನ ಮಾಡದೇ, ಅಭಿವೃದ್ಧಿ ಕಾರ್ಯಗಳಿಗೂ ಅನುದಾನ ನೀಡದೇ ಏಕಾಏಕಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಜನ ಸಾಮಾನ್ಯರಿಗೆ ದೊಡ್ಡ ಆರ್ಥಿಕ ಹೊರ ನೀಡುತ್ತಿದೆ. ರಾಜ್ಯ ಸರ್ಕಾರ ತಕ್ಷಣವೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿ ಹೊರಡಿಸಿರುವ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ ಗಂಟೆಹೊಳೆಯವರು ಆಗ್ರಹಿಸಿದ್ದಾರೆ. ಲೋಕಸಭಾ ಚುನಾವಣೆಯ ಚುನಾವಣಾ ಫಲಿತಾಂಶದ ಸೋಲಿನ ಹತಾಶೆಯನ್ನು ರಾಜ್ಯ ಕಾಂಗ್ರೆಸ್
ಪೆಟ್ರೋಲ್, ಡೀಸೆಲ್ ದರ ಹೆಚ್ಚಳ: ಶಾಸಕ ಗಂಟಿಹೊಳೆ ಖಂಡನೆ
ಬೈಂದೂರು, ಜೂ.16: ಗ್ಯಾರಂಟಿ ಯೋಜನೆಯನ್ನೂ ಸಮರ್ಪಕವಾಗಿ ಅನುಷ್ಠಾನ ಮಾಡದೇ, ಅಭಿವೃದ್ಧಿ ಕಾರ್ಯಗಳಿಗೂ ಅನುದಾನ ನೀಡದೇ ಏಕಾಏಕಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ರಾಜ್ಯ ಅಭಿವೃದ್ಧಿ ಕಾರ್ಯಗಳಿಗೂ ಅನುದಾನ ನೀಡದೇ ಏಕಾಏಕಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಜನ ಸಾಮಾನ್ಯರಿಗೆ ದೊಡ್ಡ ಆರ್ಥಿಕ ಹೊರ ನೀಡುತ್ತಿದೆ ಎಂದು ಆರೋಪಿಸಿರುವ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ತಕ್ಷಣವೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿ ಹೊರಡಿಸಿರುವ ಆದೇಶವನ್ನು ರಾಜ್ಯ ಸರಕಾರ
ಮಳೆಗಾಲದ ಮುನ್ನೆಚ್ಚರಿಕೆಗೆ ನಿರ್ದೇಶನ – ಸಮಸ್ಯೆ ಪರಿಹಾರಕ್ಕೆ ಚಿಂತಿಸಿ : ಅಧಿಕಾರಿಗಳಿಗೆ ಶಾಸಕ ಗಂಟಿಹೊಳೆ ಸೂಚನೆ
ಬೈಂದೂರು : ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರ ಇದೆ. ಅಧಿಕಾರಿಗಳು ಕೇವಲ ಸಮಸ್ಯೆಗಳ ಪಟ್ಟಿ ಮಾಡುವುದಲ್ಲ. ಬದಲಾಗಿ ಸರಿಪಡಿಸುವ ಚಿಂತನೆಬೇಕು. ಮಳೆಗಾಲದಲ್ಲಿ ಸೂಕ್ತ ಮುನ್ನೆಚ್ಚರಿಕೆ ಅಗತ್ಯ. ಸಾರ್ವಜನಿಕರೊಂದಿಗೆ ವಿಶ್ವಾಸ ಬೆಳೆಸಿಕೊಂಡು ಕೆಲಸ ನಿರ್ವಹಿಸಬೇಕು ಎಂದು ಶಾಸಕ ಗುರುರಾಜ ಗಂಟಿಹೊಳೆ ಸೂಚಿಸಿದರು. ಬೈಂದೂರು ತಾಲೂಕು ಆಡಳಿತ ಸೌಧದಲ್ಲಿ ಮಳೆಗಾಲದ ಆರಂಭ ಮತ್ತು ಪ್ರಾಕೃತಿಕ ವಿಕೋಪ ಮುನ್ನೆಚ್ಚರಿಕೆ ಕುರಿತು ಗುರುವಾರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಕ್ಷೇತ್ರ ವ್ಯಾಪ್ತಿಯಲ್ಲಿ ಈ ಬಾರಿ ಮಳೆಗಾಲ ಆರಂಭವಾಗುತ್ತಿದ್ದಂತೆ ವಂಡ್ಸೆ ಹೋಬಳಿಯಲ್ಲಿ ಒಂದು ಜೀವ ಹಾನಿ ಸೇರಿ 55
ಗೋ ಕಳ್ಳರ ಬಂಧಿಸದಿದ್ದಲ್ಲಿ ಹೋರಾಟ – ಶಾಸಕ ಗಂಟಿಹೊಳೆ ಎಚ್ಚರಿಕೆ
ಬೈಂದೂರು: ಬೈಂದೂರು ಕ್ಷೇತ್ರದಲ್ಲಿ ಗೋವುಗಳ ಕಳ್ಳತನ, ಅಕ್ರಮ ಸಾಗಾಟ ಹೆಚ್ಚಳವಾಗಿದೆ. ಇತ್ತೀಚಿಗೆ ಶಿರೂರಿನ ಮುಖ್ಯ ಪೇಟೆಯ ಹೋಟೆಲ್ ಮುಂಭಾಗದಲ್ಲಿ ರಾತ್ರಿ ವೇಳೆ ಮಲಗಿದ್ದ ಹಸುಗಳನ್ನು ವಾಹನಕ್ಕೆ ತುಂಬಿಕೊಂಡು ಹೋಗುವುದು ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ. ತಡೆಯಲು ಯತ್ನಿಸಿದವರಿಗೆ ಮಾರಕಾಸ್ತ್ರ ತೋರಿಸಿ ಬೆದರಿಸಲಾಗಿದೆ. ಪೊಲೀಸರು ಕೂಡಲೇ ಗೋ ಕಳ್ಳರ ಬಂಧಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಗುರುರಾಜ ಗಂಟಿಹೊಳೆ ಒತ್ತಾಯಿಸಿದ್ದಾರೆ. ಗೋ ಕಳ್ಳತನ ಹಾಗೂ ಗೋವುಗಳ ಅಕ್ರಮ ಸಾಗಾಟ ಸಹಿತ ಗೋವುಗಳ ಮೇಲೆ ಹಲ್ಲೆ ಸಹಿಸಲು ಸಾಧ್ಯವೇ ಇಲ್ಲ
ಮತದಾರರಿಗೆ ಶಾಸಕ ಗಂಟಿಹೊಳೆ ಅಭಿನಂದನೆ
ಗಂಗೊಳ್ಳಿ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರ ಗೆಲುವಿಗೆ ಸಹಕರಿಸಿದ ಬೈಂದೂರು ಮಂಡಲದ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಮತದಾರರಿಗೆ ಶಾಸಕ ಗುರುರಾಜ್ ಗಂಟಿಹೊಳೆ ಅಭಿನಂದನೆ ಸಲ್ಲಿಸಿದ್ದಾರೆ. ಬೈಂದೂರು ಕ್ಷೇತ್ರದಿಂದ 56,789 ಲೀಡ್ ದೊರೆತಿದೆ. ಮತದಾರರನ್ನು ದಿಕ್ಕು ತಪ್ಪಿಸುವ ಕುತಂತ್ರದ ನಡುವೆಯೂ ಸಾಧಿಸಿದ ಈ ಗೆಲುವು ಪ್ರಜಾಪ್ರಭುತ್ವದ ನೈಜ ಗೆಲುವಾಗಿದೆ. ಬಿಜೆಪಿ ಕಾರ್ಯಕರ್ತರ ಹಾಗೂ ಮುಖಂಡರ ಅಹರ್ನಿಶಿ ಹೋರಾಟ ಹಾಗೂ ಪರಿಶ್ರಮ ಫಲ ನೀಡಿದೆ ಎಂದು ಪ್ರ ಕಟಣೆಯಲ್ಲಿ ತಿಳಿಸಿದ್ದಾರೆ. https://x.com/gantihole/status/1797984230120853984 Courtesy
ತುರ್ತು ರಕ್ತದಾನ ಮಾಡಿದ ಶಾಸಕ ಗುರುರಾಜ್ ಗಂಟೆಹೊಳೆ
ಬೈಂದೂರು : ಶಂಕರನಾರಾಯಣ ಭಾಗದ ಉದಯ್ ಆಚಾರ್ಯ ಎಂಬವರು ಅನಾರೋಗ್ಯ ನಿಮಿತ್ತ ಕುಂದಾಪುರದ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ತುರ್ತಾಗಿ ರಕ್ತದ ಅವಶ್ಯಕತೆ ಇದ್ದು ಬಡ್ ಬ್ಯಾಂಕ್‌ಗಳಲ್ಲಿ ರಕ್ತ ಸಿಗದ ಕಾರಣ ಬೈಂದೂರು ಶಾಸಕ ಗುರುರಾಜ್ ಗಂಟೆಹೊಳೆ ಅವರೇ ಖುದ್ದಾಗಿ ರಾತ್ರಿ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ರಕ್ತ ನೀಡಿದರು. ಅನಾರೋಗ್ಯ ಪೀಡಿತ ನಮ್ಮ ಕಾರ್ಯಕರ್ತ ಶೀಘ್ರವಾಗಿ ಗುಣಮುಖರಾಗಲಿ ಎಂದು ತಾಯಿ ಮೂಕಾಂಬಿಕೆಯಲ್ಲಿ ಪ್ರಾರ್ಥನೆ ಜೊತೆಗೆ ಬ್ಲಡ್ ಬ್ಯಾಂಕ್‌ನಲ್ಲಿ ರಕ್ತವಿಲ್ಲವಂತೆ ಹೆಚ್ಚಿನ ಸಂಖ್ಯೆಯಲ್ಲಿ ನೀವೆಲ್ಲರು ರಕ್ತದಾನ ಮಾಡಿ, ರಕ್ತವನ್ನು